ಮೇಷ ರಾಶಿ: ನಿಮ್ಮ ನಿರೀಕ್ಷಿತ ಸಮಯವು ಸಮೀಪಿಸುತ್ತಿರುವಂತೆ ನಿಮಗೆ ಅನ್ನಿಸುವುದು. ಆತುರದಲ್ಲಿ ಏನನ್ನಾದರೂ ಮಾಡಿಕೊಂಡೀರ. ನಿಮ್ಮ ಮಾತಿನಲ್ಲಿ ತಾರ್ಕಿಕತೆ ಹೆಚ್ಚು ಕಾಣುವುದು. ಒಳಗೆ ನೋವನ್ನು ಇಟ್ಟುಕೊಂಡು ಶಾಂತರೀತಿಯಲ್ಲಿ ಇರುವಂತೆ ತೋರುವಿರಿ. ವಿವಾಹಯೋಗವು ಬಂದರೂ ಅದನ್ನು ನೀವು ಸ್ವೀಕರಿಸುವ ರೀತಿ ಭಿನ್ನವಾಗಿ ಇರಲಿದೆ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಕಾರ್ಮಿಕ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸದೇ ಗುಟ್ಟಾಗಿ ಇಟ್ಟುಕೊಳ್ಳುವಿರಿ. ಸಂಗಾತಿಗೆ ಸುಳ್ಳು ಹೇಳಿ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಪಕ್ಷಪಾತದಿಂದ ನಿಮಗೇ ತೊಂದರೆ ಎದುರಾದೀತು. ವೃತ್ತಿಯ ಕೆಲಸಗಳ ನಡುವೆ ಕುಟುಂಬವು ಮರೆಯಾಗಬಹುದು.
ವೃಷಭ ರಾಶಿ: ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪಾದಿಸಬೇಕು ಎನ್ನುವ ಹಂಬಲವು ಇರುವುದು. ನಿಮ್ಮ ಬಗ್ಗೆಯೇ ನೀವು ಕೊರಗುವುದು ಬೇಡ. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ಸಭ್ಯರಂತೆ ಇಂದು ನೀವು ತೋರುವಿರಿ. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು. ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇರದು. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು. ವೃತ್ತಿಗಾಗಿ ನೀವು ಮಾಡುವ ಪ್ರಯತ್ನವು ಫಲಿಸುವುದು. ಸಿಗದಿರುವುದರ ಬಗ್ಗೆ ಆಸೆಯನ್ನು ಬಿಡುವಿರಿ. ಅಪರಿಚಿತರ ಒಡನಾಟ ಹೆಚ್ಚು ಶ್ರೇಯಸ್ಕರವಲ್ಲ. ನಿಮ್ಮ ಅನುಕೂಲತೆಗೆ ತಕ್ಕಂತೆ ಕೆಲಸವನ್ನು ಮುಂದುವರಿಸಿ. ಯಾರಾದರೂ ಬಂದು ನಿಮ್ಮ ಬಳಿ ಕೆಲಸ ಮಾಡಿಕೊಡಲು ಕೇಳಬಹುದು. ಗೊತ್ತಿರುವ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳಿ. ಇನ್ನೊಬ್ಬರಿಗೆ ವಿರೋಧವಾಗುವ ಮಾತುಗಳನ್ನು ಆಡುವುದು ಬೇಡ.
ಮಿಥುನ ರಾಶಿ: ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ಅನವಶ್ಯಕ ಹರಟೆಯಿಂದ ಅಧಿಕಾರಿಗಳು ನಿಮ್ಮ ಮೇಲೆ ಸಿಟ್ಟಾಗಬಹುದು. ಕಳೆದುಕೊಂಡ ವಸ್ತುವಿನ ಬಗ್ಗೆ ವ್ಯಾಮೋಹ ಹೋಗದು. ಸಂಗಾತಿಗೆ ಇಂದು ಸಂತೋಷವನ್ನು ಕೊಡುವಿರಿ. ಕಾರ್ಯದ ಒತ್ತಡವಿರುವ ಕಾರಣ ಸಮಯದ ಅಭಾವ ಎನಿಸಬಹುದು. ನೀವು ಹಿರಿಯರ ಜೊತೆ ಸಣ್ಣ ವಿಚಾರಕ್ಕೂ ವಾಗ್ವಾದಕ್ಕೆ ಇಳಿಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಲ್ಲರ ಬಳಿ ಹೇಳಿಕೊಳ್ಳುವಿರಿ. ತಂದೆಯ ವಿಚಾರದಲ್ಲಿ ನಿಮಗಿರುವ ಅಸಮಾಧಾನವನ್ನು ತಾಯಿಯ ಬಳಿ ಹೇಳಿಕೊಳ್ಳುವಿರಿ. ಮನಸ್ಸು ಹಗುರಾಗುವುದು.
ಕಟಕ ರಾಶಿ: ಆಪ್ತರ ಮಾತಿಗೆ ಯಾವ ಬೆಲೆಯನ್ನೂ ನೀವು ಕೊಡುವುದಿಲ್ಲ. ಸಭೆಯಲ್ಲಿ ನಿಮಗೆ ಗೌರವವು ಸಿಗುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಸಮಯಪ್ರಜ್ಞೆಯು ಇಂದು ಕೆಲಸ ಮಾಡದು. ನಿಮ್ಮನ್ನು ಇಷ್ಟವಿಲ್ಲದ ಕಡೆ ವರ್ಗಾವಣೆ ಮಾಡುವ ತೀರ್ಮಾನವಾಗಬಹುದು. ಉದ್ಯೋಗದ ಸ್ಥಳದಲ್ಲಿ ಕಹಿ ಅನುಭವವಾದೀತು. ಯಾರದೋ ತಪ್ಪಿನಿಂದ ನಿಮಗೆ ದೋಷವು ಅಂಟಿಕೊಂಡಿದ್ದು ತಿಳಿದುಬರುವುದು. ದುರಭ್ಯಾಸದಿಂದ ಆರ್ಥಿಕ ನಷ್ಟವಾಗುತ್ತದೆ. ಅವಕಾಶಗಳಿಂದ ನೀವು ವಂಚಿತರಾಗುವಿರಿ. ಕುಟುಂಬದ ನಡವಳಿಕೆಯು ನಿಮಗೆ ಅರ್ಥವಾಗದೇ ಹೋದೀತು. ಅಪರಿಚಿತರ ಜೊತೆ ವ್ಯವಹಾರವನ್ನು ಮಾಡುವಾಗ ನಿಮ್ಮ ಗುಟ್ಟನ್ನು ಬಿಟ್ಟಕೊಡಬೇಡಿ. ಮನೆಯಲ್ಲಿ ಅತಿಥಿ ಸತ್ಕಾರವು ಸಂಭ್ರಮದಿಂದ ನಡೆಯುವುದು.
ಸಿಂಹ ರಾಶಿ: ನಿಮ್ಮದೆಂದುಕೊಂಡವು ವಸ್ತುವು ನಿಮ್ಮಿಂದ ದೂರವಾಗಬಹುದು. ಬೇಸರಪಟ್ಟುಕೊಳ್ಳುವ ಸಾಧ್ಯತೆ ಇದೆ. ಇಂದುಬಅತಿಯಾದ ನಿದ್ರೆಯಿಂದ ಜಾಡ್ಯವು ಬರುವುದು. ದೈಹಿಕ ಶ್ರಮವು ಇಂದು ಹೆಚ್ಚಿರುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಯಾವ ಆರೋಪವನ್ನೂ ನೀವು ಸಹಿಸಿಕೊಳ್ಳದೇ ಎಲ್ಲವನ್ನೂ ಹೊರಹಾಕುವಿರಿ. ಉತ್ಸಾಹದಿಂದ ನೀವು ಇಂದಿನ ಕೆಲಸವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಕೆಟ್ಟ ಮಾತುಗಳು ಬರಬಹುದು. ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆ ಇರಲಿದೆ. ಸಹೋದರನಿಂದ ನಿಮಗೆ ಸಮಸ್ಯೆ ಆಗಬಹುದು. ಹಠದ ಸ್ವಭಾವದಿಂದ ಸಂಗಾತಿಗೆ ಕಿರಿಕಿರಿ ಎನಿಸಬಹುದು. ಹೊಸ ಆದಾಯದ ಮೂಲಗಳಿಂದ ಖುಷಿ ಇರಲಿದೆ. ರಾಜಕಾರಣಿಗಳು ಸ್ಥಾನಕ್ಕಾಗಿ ಏನಾದರೂ ತಂತ್ರವನ್ನು ಮಾಡುವರು.
ಕನ್ಯಾ ರಾಶಿ: ನಿಮ್ಮಿಂದ ಉಪಕಾರ ಪಡೆದವರು ನಿಮ್ಮ ವಿರುದ್ಧ ಬೀಳಬಹುದು. ಬದುಕಿಗೆ ತಿರುವು ಬರುವ ಸಾಧ್ಯತೆ ಇದೆ. ಇಂದಿನ ಕಾರ್ಯವು ನಿಮಗೆ ಸಮಾಧಾನ ಕೊಡದೇ ಇರಬಹುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ನಿಮ್ಮ ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಏನಾದರೂ ಮಾಡುತ್ತ ನಿಮ್ಮ ಮನಸ್ಸಿಗೆ ಕೆಲಸವನ್ನು ಕೊಡುವಿರಿ. ಜಾಣ್ಮೆಯಿಂದ ಇಂದು ನೀವು ಪ್ರಶಂಸೆಯನ್ನು ಪಡೆಯುವಿರಿ. ವೃತ್ತಿಯಲ್ಲಿ ಕೆಲವು ಸಂತೋಷದ ಕ್ಷಣಗಳು ನಿಮ್ಮದಾಗಲಿವೆ. ಪ್ರಭಾವೀ ಜನರ ಜೊತೆ ಆತ್ಮೀಯತೆಯನ್ನು ಬೆಳೆಸಿಕೊಳ್ಳುವಿರಿ. ಆಹಾರದಿಂದ ಆರೋಗ್ಯವು ಹಾಳಾಗಬಹುದು. ಯಾರ ಮಾತನ್ನೂ ಕೇಳಿಸಿಕೊಳ್ಳುವಷ್ಟು ವ್ಯವಧಾನ ಇರದು.
ತುಲಾ ರಾಶಿ: ಇಂದಿನ ಎಲ್ಲ ಕಾರ್ಯದಲ್ಲಿಯೂ ಜಯವನ್ನು ಪಡೆಯುವಿರಿ. ಆರ್ಥಿಕಸ್ಥಿತಿಯು ಸುಧಾರಿಸಿದ್ದು ನಿಮಗೆ ಸ್ವಲ್ಪ ನೆಮ್ಮದಿ ಇರುವುದು. ಹಿರಿಯರಲ್ಲಿ ಭಕ್ತಿಯನ್ನು ತೋರಿಸುವಿರಿ. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಇರಿ. ಬಹಳ ದಿನಗಳಿಂದ ನಿರೋದ್ಯೋಗ ಸಮಸ್ಯೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಸಿಕ್ಕ ಸಣ್ಣ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ಇಂದು ಅಡತಡೆಗಳು ಬರಲಿದೆ. ಅದನ್ನು ಗಂಭಿರವಾಗಿ ತೆಗೆದುಕೊಳ್ಳುವುದು ಬೇಡ. ನೆರೆಯವರ ವರ್ತನೆಯಿಂದ ನಿಮಗೆ ಸಿಟ್ಟಿಗೆ ಬರಬಹುದು. ಹೊಸ ಉದ್ಯೋಗವನ್ನು ಆರಂಭಿಸಬೇಕು ಎನಿಸಬಹುದು. ಪ್ರೇಮ ಅನುಮಾನವನ್ನು ಇಟ್ಟುಕೊಳ್ಳುವುದು ಬೇಡ. ಸಹೋದರನ ಪ್ರಗತಿಯಿಂದ ನಿಮಗೆ ಸಂತೋಷ ಆಗಲಿದೆ. ಇಂದು ಸಹೋದರಿಯ ಮಾತಿಗೆ ನೀವು ಸ್ಪಂದಿಸುವಿರಿ.
ವೃಶ್ಚಿಕ ರಾಶಿ: ಇಂದು ಕಛೇರಿಯನ್ನು ಮಹಿಳೆಯರು ನಿರ್ವಹಿಸಬೇಕಾಗುವುದು. ಮಾಡದ ಕಾರ್ಯಕ್ಕೆ ಅಪವಾದ ಬರುವುದು. ನಿರಂತರ ಕೆಲಸವು ನಿಮಗೆ ಬೇಸರ ತಂದೀತು. ಇಂದು ವೃತ್ತಿಯಲ್ಲಿ ಆತಂಕವು ಬರಬಹುದು. ಪ್ರಾಣಿಗಳಿಂದ ಭೀತರಾಗುವ ಸಾಧ್ಯತೆ ಇದೆ. ನಿಮ್ಮ ಇಷ್ಟದವರ ಭೇಟಿಯಾಗುವಿರಿ. ನಿಮ್ಮ ಸಾಮರ್ಥ್ಯಕ್ಕೆ ಯೋಗ್ಯವಾದ ಕೆಲಸವನ್ನು ಮಾಡಿ. ಯಾರ ಬಗ್ಗೆಯೂ ಅನಗತ್ಯ ಟೀಕೆಗಳು ಬೇಡ. ಆಧ್ಯಾತ್ಮದ ಕಡೆ ಮನಸ್ಸು ಇರಬಹುದು. ಇನ್ನೊಬ್ಬರಿಗೆ ಹೋಲಿಸಿಕೊಂಡು ಸಂಕಟಪಡುವಿರಿ. ಇಂದು ನೀವು ಸಂತೋಷ ಆಗದೇಹೋಗಬಹುದು. ನಿಮ್ಮ ಪ್ರತಿಭೆಯನ್ನು ಪ್ರಕಟಿಸಲು ಉತ್ತಮ ಅವಕಾಶವಿರುವುದು. ಅವಕಾಶವನ್ನು ಮಾಡಿಕೊಂಡರೆ ಉತ್ತಮ ಭವಿಷ್ಯವು ಸಿಗುವುದು. ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ತಪ್ಪಿಸಲು ಅಸಂಬದ್ಧ ಸಲಹೆಗಳನ್ನು ಕೊಡಬಹುದು.
ಧನು ರಾಶಿ: ಯಾರಾದರೂ ನಿಮ್ಮನ್ನು ಚೇಡಿಸಬಹುದು. ವಾಹನ ಖರೀದಿಗೆ ಗೊಂದಲದ ಮನಸ್ಸು ಬೇಡ. ವೃತ್ತಿಯನ್ನೇ ಬದಲಾಯಿಸುವ ಆಸೆ ಬರಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿ ಇರಲಿದೆ. ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರುವುದು. ಸಿಟ್ಟಿನಿಂದ ಕೂಗಾಡುವಿರಿ. ಸಹೋದರನ ಕಡೆಯಿಂದ ಸಹಾಯವನ್ನು ಅಪೇಕ್ಷಿಸುವಿರಿ. ನಿಮ್ಮ ಕಾರ್ಯಕ್ಕೆ ಧನಸಹಾಯವನ್ನು ಸಾಲವಾಗಿ ಪಡೆಯುವಿರಿ. ವ್ಯವಹಾರದ ಅಭಿವೃದ್ಧಿಗೆ ವಿದೇಶದ ಸಂಪರ್ಕವು ಬೆಳೆಯಬಹುದು. ನೀವೇ ಇಲ್ಲದ ಕಲ್ಪನೆಯನ್ನು ಮಾಡಿಕೊಂಡು ನಿಮ್ಮವರನ್ನು ದೂರಮಾಡಿಕೊಳ್ಳುವಿರಿ. ಸಜ್ಜನರ ಸಹವಾಸವು ನಿಮಗೆ ಸಂತೋಷವಾಗುವುದು. ಯಾರೂ ಮಾತೂ ನಿಮಗೆ ಪಥ್ಯವಾಗದು.
ಮಕರ ರಾಶಿ: ನಿಮ್ಮ ಸ್ವಭಾವವನ್ನು ತಿದ್ದಿಕೊಳ್ಳಬೇಕಾಗುವುದು. ದುಸ್ಸ್ವಭಾವವನ್ನು ಹೆಚ್ಚಿಸಿಕೊಳ್ಳುವಿರಿ. ಹೊಸ ಉದ್ಯೋಗಕ್ಕೆ ನಿಮ್ಮ ಮನಸ್ಸು ತೆರದುಕೊಳ್ಳುವುದು. ಹಿತಶತ್ರುಗಳು ಲಾಭವನ್ನು ತಪ್ಪಿಸುವರು. ಸಮಾಜದಿಂದ ಸಿಗುವ ಗೌರವವೂ ನಿಮಗೆ ಬಾರದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಇಂದು ನಿಮ್ಮಿಂದ ಕುಟುಂಬವು ಸಂತೋಷಗೊಳ್ಳುವುದು. ನಿದ್ರೆಯಲ್ಲಿ ಕೆಟ್ಟ ಕನಸುಗಳನ್ನು ಕಂಡು ಚಿಂತೆಗೊಳ್ಳುವಿರಿ. ದುಂದುವೆಚ್ಚವನ್ನು ನಿಯಂತ್ರಿಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗುವಿರಿ. ಸಹೋದ್ಯೋಗಿಗಳು ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಹೆಚ್ಚು ಹೇಳಬಹುದು. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಏಕಾಂತವು ಬೇಸರ ತರಿಸಿದ್ದು ಸ್ನೇಹಿತರ ಜೊತೆ ಕಾಲವನ್ನು ಕಳೆಯುವಿರಿ. ಶಿವಸ್ತೋತ್ರವನ್ನು ಮಾಡಿ.
ಕುಂಭ ರಾಶಿ: ಸ್ತ್ರೀಯರಿಗೆ ಕೃಷಿಯ ಬಗ್ಗೆ ಆಸಕ್ತಿ ಬರಬಹುದು. ಸಂಗಾತಿಯ ಮನೋಭಾವವನ್ನು ಅರಿತುಕೊಳ್ಳಲು ಕಷ್ಟವಾದೀತು. ದೂರದ ಸ್ಥಳಕ್ಕೆ ಪ್ರವಾಸ ಹೋಗುವ ಸಂದರ್ಭವು ಬರಬಹುದು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಕಛೇರಿಯ ಒತ್ತಡವನ್ನು ಮನೆಯವರೆಗೂ ತರುವುದು ಬೇಡ. ಇಂದಿನ ಆದಾಯದಿಂದ ನಿಮ್ಮ ಆಸೆಗಳನ್ನು ತೀರಿಸಿಕೊಳ್ಳುವಿರಿ. ನೀವು ಪರಿಚಿತರಿಂದ ಸಹಾಯವನ್ನು ಅಪೇಕ್ಷಿಸುವಿರಿ. ಕಛೇರಿಯಲ್ಲಿ ಎಲ್ಲರ ಜೊತೆ ಸೌಹಾರ್ದದಿಂದ ವರ್ತಿಸಿ. ಪ್ರೀತಿಯ ವಿಚಾರದಲ್ಲಿ ಇಂದು ಬೇಸರವಾಗಬಹುದು. ನಿಮಗೆ ಅಗೌರವ ತೋರಬಹುದು. ಸಹೋದ್ಯೋಗಿಗಳ ಕಾರ್ಯದಿಂದ ನೀವು ಕೋಪಗೊಳ್ಳುವಿರಿ. ತಪ್ಪು ನಿರ್ಧಾರವನ್ನು ತೆಗೆದುಕೊಂಡು ಪಶ್ಚಾತ್ತಾಪಪಡಬೇಕಾದೀತು.
ಮೀನ ರಾಶಿ: ನಿಮ್ಮದಾದ ಸ್ವತಂತ್ರ ಆದಾಯವನ್ನು ಇಟ್ಟುಕೊಳ್ಳಿ. ಖಾಸಗಿ ವೃತ್ತಿಯಲ್ಲಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಮಾತನಾಡುವಿರಿ. ಶತ್ರುಗಳಿಗೆ ನೀವೇ ಕೇಂದ್ರಬಿಂದು ಆಗಿರಬಹುದು. ನಿಮ್ಮ ಲೆಕ್ಕಾಚಾರವು ತಪ್ಪಾಗಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು. ನಿಮಗೆ ತಾಳ್ಮೆಯೂ ಬಹಳ ಮುಖ್ಯವಾಗುವುದು. ಅಧ್ಯಾತ್ಮದಲ್ಲಿ ಹೆಚ್ಚು ಮನಸ್ಸು ಇರುವುದು. ನಿಮ್ಮ ವ್ಯಾಪಾರದಿಂದ ಅಧಿಕ ಲಾಭವು ಸಿಗುವುದು. ಅಧಿಕಾರಿ ವರ್ಗದವರ ಕಣ್ಣು ನಿಮ್ಮ ಮೇಲೆ ಇರಲಿದೆ. ಇಂದು ಯಾವ ವಾಗ್ವಾದಗಳಿಗೂ ಅವಕಾಶಶನ್ನು ಕೊಡಬೇಡಿ. ಆಪ್ತರೊಂದಿಗೆ ಭಿನ್ನಾಭಿಪ್ರಾಯ ಬರಬಹುದು. ಅದನ್ನು ಮನಸ್ಸಿಗೆ ತೆಗೆದುಕೊಳ್ಳುವುದು ಬೇಡ. ದೀರ್ಘಾವಧಿಯ ಹೂಡಿಕೆಯಿಂದ ನಿಮಗೆ ಲಾಭವಾಗುವುದು. ಹನುಮಾನ್ ಚಾಲೀಸ್ ಪಠಣ ಮಾಡಿ.