ಮೇಷ ರಾಶಿ: ಮನೆಯ ಧಾರ್ಮಿಕ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದುಕೊಂಡರೂ ಅದು ಅಸಾಧ್ಯ ಎನಿಸಬಹುದು. ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ವಿಳಂಬವಾಗಿ ಬರುತ್ತದೆ ಎಂದುಕೊಂಡ ನಿಮ್ಮ ಹಣವು ಬೇಗ ಬರಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ವಿವಾಹಜೀವನವು ಅತ್ಯಂತ ಸುಖದಂತೆ ತೋರುವುದು. ಕೆಲವು ಅಭ್ಯಾಸವನ್ನು ನೀವು ಬಿಡಬೇಕೆಂದರೂ ಬಿಡಲಾಗದು. ನಿಮ್ಮ ದಿನಚರಿಯನ್ನು ಬದಲಿಸಿಕೊಂಡು ಬದುಕಿಗೆ ಹೊಸ ಆಯಾಮವನ್ನು ಕೊಡಬೇಕು ಎನಿಸುವುದು.
ವೃಷಭ ರಾಶಿ: ಮನಸ್ಸಿನಲ್ಲಿಯೇ ಎಲ್ಲ ಸಂಕಟವನ್ನೂ ನೀವು ಅನುಭವಿಸುವಿರಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ಬಂಧುವನ್ನೇ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ನಂಬಿಕೆ ಕಡಮೆ ಆಗುವುದು. ಸಂಬಂಧದಲ್ಲಿ ಹಣಕಾಸಿನ ವ್ಯವಹಾರವನ್ನು ಇಟ್ಟುಕೊಳ್ಳಬೇಡಿ. ಯಾರಾದರೂ ಧನಸಹಾಯವನ್ನು ನಿಮ್ಮ ಬಳಿ ಕೇಳಬಹುದು. ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳಿ. ಶತ್ರುಗಳ ಕುತಂತ್ರವು ನಿಮಗೆ ಲಾಭವೇ ಆಗುವುದು. ಯಾರ ವಿರೋಧವನ್ನೂ ಕಿವಿಗೆ ಹಾಕಿಕೊಳ್ಳದೇ ನಿಮ್ಮದೇ ಮನಸ್ಸಿನಂತೆ ನಡೆಯುವಿರಿ.
ಮಿಥುನ ರಾಶಿ: ಅಭಿವೃದ್ಧಿಗೆ ಅವಕಾಶವಿದ್ದರೂ ನಿಮಗೆ ಹಿನ್ನಡೆಯಂತೆ ಎಲ್ಲವೂ ಭಾಸವಾಗುವುದು. ಶ್ರಮಕ್ಕೆ ತಕ್ಕ ಫಲವು ಲಭಿಸಿಲ್ಲ ಎಂದು ನಿಮ್ಮ ಮನಸ್ಸಿಗೆ ಗಾಢವಾಗಿ ತಿಳಿಯುವುದು. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ಸಂಗಾತಿಯ ಮನೋಭಾವವು ನಿಮಗೆ ಇಂದು ಸರಿ ಹೊಂದದು. ವ್ಯವಹಾರದಲ್ಲಿ ನೀವು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎಂಬ ಭಾವವು ಆಗಾಗ ಬರುವುದು. ಸಂಗಾತಿಯ ಜೊತೆ ವಾಯುವಿಹಾರಕ್ಕೆ ಹೋಗಿ ಖುಷಿಪಡುವಿರಿ. ಒಬ್ಬರೇ ವಾಹನದಲ್ಲಿ ಓಡಾಡುವುದು ಬೇಡ. ಮಕ್ಕಳಿಗೆ ನಿಮ್ಮ ಮೇಲೆ ಇದ್ದಕ್ಕಿದ್ದಂತೆ ಪ್ರೀತಿಯು ಅಧಿಕವಾಗಬಹುದು. ಸ್ನೇಹಿತರ ವಿಚಾರದಲ್ಲಿ ದೃಷ್ಟಿಕೋನ ಬದಲಾದೀತು.
ಕಟಕ ರಾಶಿ: ನಿಮ್ಮ ನಿರುದ್ಯೋಗವು ಚಿಂತೆಯಾಗಿ ನಿಮ್ಮ ಬಗ್ಗೆಯೇ ನಿಮಗೆ ಹಗುರಾದ ಭಾವ ಬರಬಹುದು. ಯಾವುದೋ ಆಲೋಚನೆಯಲ್ಲಿ ಮುಳುಗಿರುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಸರಳವಾದ ಕೆಲಸವನ್ನು ಮನಶ್ಚಾಂಚಲ್ಯದಿಂದ ಸಂಕೀರ್ಣ ಮಾಡಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಹಾಸ್ಯಪ್ರಜ್ಞೆ ಕೆಲವರಿಗೆ ಇಷ್ಟವಾಗದು. ದೇಹವು ಅಧಿಕ ಶ್ರಮದಿಂದ ಆಯಾಸಗೊಳ್ಳುವುದು. ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಎನಿಸುವುದು. ವಿದ್ಯಾಭ್ಯಾಸಕ್ಕೆಂದು ಹೊರಗೆ ಇರುವವರಿಗೆ ಮನೆಯ ಬಗ್ಗೆಯೇ ನೆನಪಾಗುವುದು. ಹಿರಿಯರ ವಿಚಾರದಲ್ಲಿ ಅನಾದರ ಬೇಡ. ಇಷ್ಟವಿಲ್ಲದ ವಿಚಾರದ ಬಗ್ಗೆ ಮೌನ ವಹಿಸುವಿರಿ.
ಸಿಂಹ ರಾಶಿ: ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು. ಬಹಳ ದಿನಗಳ ಅನಂತರ ನ್ಯಾಯಾಲಯದಿಂದ ಸಿಕ್ಕ ಜಯವು ಸಂತಸವನ್ನು ಉಂಟುಮಾಡುವುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯ. ಇಂದು ತುರ್ತಾಗಿ ಬೇಕಾಗಿರುವ ಹಣವನ್ನು ಹೊಂದಿಸಲು ನಿಮಗೆ ಕಷ್ಟವಾಗುವುದು. ಕೃಷಿಗೆ ಸಂಬಂಧಿಸಿದಂತೆ ಹೊಸ ಕಲ್ಪನೆಯನ್ನು ಇಟ್ಟುಕೊಳ್ಳುವಿರಿ. ಕಛೇರಿಯ ಕಾರ್ಯದಿಂದ ಆಯಾಸವಾಗಬಹುದು. ಬಹಳ ವರ್ಷಗಳಿಂದ ಒಂದೇ ಉದ್ಯೋಗದಲ್ಲಿ ಇದ್ದವರಿಗೆ ಸಂತೋಷದ ಸುದ್ದಿ ಸಿಗಲಿದೆ. ನಿಮ್ಮಿಂದ ಕಾರ್ಯವಾಗಲು ಯಾರಾದರೂ ನಿಮ್ಮನ್ನು ಹೊಗಳಬಹುದು. ಸಣ್ಣ ವಿಚಾರವನ್ನು ದೊಡ್ಡದಾಗಿ ಮಾಡುಕೊಳ್ಳುವುದು ಬೇಡ.
ಕನ್ಯಾ ರಾಶಿ: ಅನಿರೀಕ್ಷಿತ ಪ್ರಯಾಣ ಹೋಗುವ ಸಾಧ್ಯತೆ ಇದೆ. ನಿಮ್ಮದಾದ ಕೆಲವು ಅಸಂಬದ್ಧ ವ್ಯವಸ್ಥೆಯನ್ನು ನೀವು ಸರಿ ಮಾಡಿಕೊಳ್ಳಬೇಕಾಗುವುದು. ಹೊಸ ವಸ್ತುವಿನ ಖರೀದಿಯಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜೊತೆ ಇಂದು ಸಲುಗೆಯಿಂದ ಇರುವಿರಿ. ಮನಸ್ಸಿಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾದೀತು. ಕುಟುಂಬದ ಜೊತೆ ಧಾರ್ಮಿಕ ಸ್ಥಳಗಳಿಗೆ ಹೋಗುವಿರಿ. ಮನಸ್ಸಿನಿಂದ ನೀವು ಕೆಲವು ವಿಚಾರವನ್ನು ತೆಗೆದುಹಾಕುವುದು ಉತ್ತಮ. ಅಪನಂಬಿಕೆಯಿಂದ ನಿಮಗೆ ತೊಂದರೆ ಆಗಬಹುದು. ವಸತಿ ಸ್ಥಾನವನ್ನು ಬದಲಿಸಬೇಕಾದೀತು. ಯಾರನ್ನೋ ನೋಡಿ ಹೊಟ್ಟಿ ಉರಿ ಮಾಡಿಕೊಳ್ಳುವುದು ಬೇಡ. ಸಮಯೋಚಿತ ಕಾರ್ಯದಿಂದ ಲಾಭ ಸಿಗಲಿದೆ. ಅರ್ಥಿಕತೆಗೆ ಸಂಬಂಧಿಸಿದಂತೆ ಯಾರಾದರೂ ಆಡಿಕೊಂಡಾರು.
ತುಲಾ ರಾಶಿ: ಉಗುರಿನಲ್ಲಿ ಆಗುವ ಕಾರ್ಯಕ್ಕೆ ಕೊಡಲಿ ಏಟು ತರುವುದು ಉಚಿತವಲ್ಲ. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ದುಡುಕಿ ಯಾವುದನ್ನೂ ಮಾಡುವುದು ಬೇಡ. ನಿಮಗಮ ಸ್ಥಿರಾಸ್ತಿಯ ಮಾರಾಟದಲ್ಲಿ ಏಕಮುಖವಾದ ಅಭಿಪ್ರಾಯ ಬೇಡ. ನಿಮ್ಮ ಕೆಲವು ಆಸೆಗಳನ್ನು ಪೂರೈಸಿಕೊಳ್ಳುವಿರಿ. ಸಮಾಜವು ನಿಮ್ಮ ಸಾಧನೆಯನ್ನು ಗುರುತಿಸೀತು. ನಿಮ್ಮ ಬಗ್ಗೆ ಬಂದ ಆರೋಪವನ್ನು ಜಾಣ್ಮೆಯಿಂದ ಪರಿಹಿರಿಸಿಕೊಳ್ಳುವಿರಿ. ನಿಮ್ಮ ಉದ್ಯಮಕ್ಕೆ ಹೆಚ್ಚಿನ ಸಮಯವನ್ನು ಕೊಡುವುದು ಅಗತ್ಯ. ಪ್ರಭಾವೀ ಜನರ ನಡುವೆ ಅಂತರವನ್ನು ಕಾಯ್ದುಕೊಳ್ಳಿ. ನಿಮ್ಮ ಬಗ್ಗೆಯೇ ನೀವು ಅತಿಯಾಗಿ ಹೇಳಿಕೊಳ್ಳುವುದು ಸರಿ ಕಾಣದು.
ವೃಶ್ಚಿಕ ರಾಶಿ: ಸುಮ್ಮನೇ ವಾದ ಮಾಡುವ ಚಪಲವನ್ನು ಬಿಟ್ಟು ಸಹಜವಾಗಿ ಎಲ್ಲರ ಜೊತೆ ಮಾತನಾಡಿ. ದೈಹಕ ಕಾರ್ಯದಲ್ಲಿ ತೊಡಗಿದವರಿಗೆ ಹೆಚ್ಚು ಆದಾಯವು ಇರುವುದು. ಕಾರ್ಯಕ್ಕಾಗಿ ಹೆಚ್ಚು ಓಡಾಡಬೇಕಾಗುವುದು. ಧಾರ್ಮಿಕ ಸೇವೆಯಲ್ಲಿ ನೀವು ಭಾಗಿಗಳಾಗುವಿರಿ. ನಿದ್ರಾಹೀನತೆಯಿಂದ ಕಿರಿಕಿರಿ ಉಂಟಾಗುವುದು. ಮಕ್ಕಳ ವರ್ತನೆಯು ಹಿಡಸದೇ ಇರುವುದು. ಆದರೂ ಏನನ್ನೂ ಹೇಳದೇ ಇರುವಿರಿ. ಹಿತಶತ್ರುಗಳನ್ನು ಸರಿಯಾಗಿ ಗಮನಿಸುತ್ತಿರಿ. ಕಾರ್ಯದ ಬಗ್ಗೆ ಅತಿಯಾದ ಆಲೋಚನೆಯಿಂದ ತಲೆನೋವು ಬರಬಹುದು. ಪ್ರೀತಿಗಾಗಿ ಇಂದು ಹೆಚ್ಚು ಸಮಯವನ್ನು ಕೊಡುವಿರಿ. ಹೊಸ ಆದಾಯದ ದಾರಿ ಸಿಕ್ಕಿ ಅಲ್ಪ ನೆಮ್ಮದಿ ಕಾಣುವಿರಿ. ರಾಜಕಾರಣಿಗಳು ಸಮಾಜದಿಂದ ಗೌರವವನ್ನು ಪಡೆಯುವರು. ದುರಾಸೆಯನ್ನು ಆದಷ್ಟು ನಿಮ್ಮ ಹಿಡಿತದಲ್ಲಿ ಇರಿಸಿಕೊಳ್ಳಿ.
ಧನು ರಾಶಿ: ಮಕ್ಕಳ ಭವಿಷ್ಯಕ್ಕೆ ಹಣವನ್ನು ಕೂಡಿ ಇಡುವಿರಿ. ಸಾಲ ಕೊಟ್ಟವರು ನಿಮ್ಮನ್ನು ಇಂದು ಏನೂ ಕೇಳುವುದಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ಇದ್ದುಬಿಡುವಿರಿ. ಸಿಕ್ಕಿದ್ದರಲ್ಲಿ ಸಂತೋಷ ಪಡುವುದನ್ನ ನೀವು ಬೆಳೆಸಿಕೊಳ್ಳಬೇಕಾಗುವುದು. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ಕಛೇರಿಯಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಇಷ್ಟವಿಲ್ಲದ ಕಡೆ ನೀವು ಎಂದೂ ಹೋಗಲಾರಿರಿ. ನಿಮ್ಮ ಉತ್ಸಾಹದ ಕೆಲಸವು ಇನ್ನೊಬ್ಬರಿಗೆ ಮಾದರಿಯಾದೀತು. ನಿಮ್ಮ ನಿರ್ಲಕ್ಷ್ಯದ ಸ್ವಭಾವದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಬೇಸರದ ಸನ್ನಿವೇಶದಲ್ಲಿ ಕುಟುಂಬದ ಬಗ್ಗೆ ಗೊತ್ತಾಗುವುದು. ಆತ್ಮಾಭಿಮಾನ ಹೆಚ್ಚಿರುವಂತೆ ತೋರುತ್ತದೆ. ಆದ್ದರಿಂದ ನಿಮ್ಮ ಬಗ್ಗೆ ಏನಾದರೂ ಹೇಳಿದರೆ ಸಿಟ್ಟೂ ಬೇಗ ಬರುವುದು.
ಮಕರ ರಾಶಿ: ಸಾಲ ಕೊಟ್ಟವರು ನಿಮ್ಮನ್ನು ಶತ್ರುಗಳಂತೆ ಕಾಡುವರು. ನಿಮ್ಮನ್ನು ಕೆಲವು ಸಹೋದ್ಯೋಗಿಗಳು ಟೀಕಿಸಬಹುದು. ಕುಹಕ ಮಾತುಗಳನ್ನೂ ಆಡಬಹುದು. ಸಂಗಾತಿಯು ನಿಮ್ಮ ಮಾತನ್ನು ಅಲ್ಲಗಳೆಯಬಹುದು. ಸ್ವಪ್ರತಿಷ್ಠೆಯನ್ನು ಎಲ್ಲರೆದುರು ತೋರಿಸಿದರೆ ಪ್ರಯೋಜನವಾಗದು. ನಿಮ್ಮ ವ್ಯವಹಾರದಲ್ಲಿ ಯಾರ ಹಸ್ತಕ್ಷೇಪವೂ ಇಷ್ಟವಾಗದು. ತಂದೆಯ ಕೆಲವು ವ್ಯವಹಾರವು ನಿಮಗೆ ಇಷ್ಟವಾಗದೇ ಅವರ ಮೇಲೆ ಮುನಿಸಿಕೊಳ್ಳುವಿರಿ. ರಾಜಕೀಯದಲ್ಲಿ ನಿಮ್ಮ ವರ್ಚಸ್ಸನ್ನು ಜೊತೆಗಿರುವವರು ಹೆಚ್ಚಿಸುವರು. ಕೆಲಸದ ಒತ್ತಡವು ಇಂದು ಅಧಿಕವಾಗಿ ಇರಲಿದೆ. ಭೂಮಿಯ ವ್ಯವಹಾರದಲ್ಲಿ ಸ್ವಲ್ಪ ನಷ್ಟವಾಗುವುದು. ತಂತ್ರಜ್ಞರು ಲಾಭವನ್ನು ಗಳಿಸುವರು.
ಕುಂಭ ರಾಶಿ: ಹಳೆಯ ಮನೆಯ ದುರಸ್ತಿಗೆ ಹಣವನ್ನು ಖರ್ಚು ಮಾಡುವಿರಿ. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ. ಇನ್ನೊಬ್ಬರು ತೋರುವ ನಿರ್ಲಕ್ಷ್ಯದಿಂದ ನೀವು ಬಹಳ ದುಃಖಿಸುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಬಂಧುಗಳ ಸಹಕಾರ ಇಂದು ಲಭ್ಯವಾಗುವುದು. ಯಾರಾದರೂ ನಿಮ್ಮ ಭವಿಷ್ಯದ ಬಗ್ಗೆ ಹೇಳಿ ಅವಮಾನಿಸಬಹುದು. ಕೆಲಸದಲ್ಲಿ ಮತ್ತೆ ಮತ್ತೆ ತೊಂದರೆ ಎದುರಾದರೆ ಅದನ್ನು ಕೈ ಬಿಡುವುದು ಸೂಕ್ತ. ಮನೆಯ ಕಾರ್ಯದಲ್ಲಿ ಮಂದಗತಿ, ಆಮೇಲೆ ಮಾಡಿದರಾಯಿತು ಎಂಬ ಭಾವ ಇರಲಿದೆ. ರಾಜಕೀಯ ನಾಯಕರಿಂದ ಒತ್ತಾಯ ಪೂರ್ವಕ ಬೆಂಬಲವನ್ನು ಪಡೆಯುವಿರಿ. ಹೊಸ ವಸ್ತುವು ನಿಮಗೆ ಸಂತೋಷವನ್ನು ಕೊಡುವುದು. ಆದಾಯದ ಬಗ್ಗೆ ಋಣಾತ್ಮಕ ಮನೋಭಾವ ಬೇಡ. ಬಂದಿದ್ದರಲ್ಲಿ ಸುಖ ಪಡಿ.
ಮೀನ ರಾಶಿ: ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತವೆ. ಓಡಾಡಕ್ಕೆ ನಿಮಗೆ ವಾಹನದ ಅನುಕೂಲತೆಯೂ ಆಗುವುದು. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದೇ ಮೇಲಧಿಕಾರಿಗಳು ಏನಾದರೂ ಹೇಳಿಯಾರು. ವಾಹನವನ್ನು ಚಲಾಯಿಸುವಾಗ ಎಚ್ಚರ. ಅಪಘಾತವಾಗುವ ಸಾಧ್ಯತೆ ಇದೆ. ನೀವು ಅತಿಯಾದ ಆತ್ಮವಿಶ್ವಾಸದಲ್ಲಿ ಕೆಲವೊಂದನ್ನು ಕಳೆದುಕೊಳ್ಳುವಿರಿ. ಮುನ್ನುಗ್ಗುವ ಮನಃಸ್ಥಿತಿಯು ಇಲ್ಲವಾದೀತು. ನಿಮ್ಮ ನಿರೀಕ್ಷೆಗೆ ಕೆಲವು ನಕಾರಾತ್ಮಕ ಮಾತುಗಳನ್ನು ಕೇಳಿಸಿಕೊಳ್ಳುವಿರಿ.