ಮೇಷ
ಕುಂಟು ನೆಪವನ್ನು ಹೇಳಿ ಇಂದಿನ ಸುತ್ತಾಟವನ್ನು ತಪ್ಪಿಸಿಕೊಳ್ಳುವಿರಿ. ತಿಳಿವಳಿಕೆ ಇಲ್ಲದವರ ನಿಮ್ಮ ವ್ಯವಹಾರಗಳನ್ನು ಹೇಳಬೇಡಿ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ÷್ಯ ತೋರಿದ್ದರಿಂದ ನಿಮಗೆ ನಷ್ಟವಾಗಬಹುದು. ಇಂದು ಸ್ವಲ್ಪ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿಯನ್ನು ನೀಡಿದರೆ ಒಳ್ಳೆಯದು. ಆಗಬೇಕಾಗಿರುವ ಕೆಲಸದ ಬಗ್ಗೆ ಗಮನ ಹರಿಸಿ ಮುಗಿಸುವುದು ಒಳ್ಳೆಯದು. ಸಂಬAಧಗಳನ್ನು ಸರಿಯಾಗಿ ಹಾಳು ಮಾಡಿಕೊಳ್ಳುವುದು ಬೇಡಿ. ನೀವು ನಿಮ್ಮ ತಾಯಿಯ ಜೊತೆ ಕ್ಷುಲಕ ಕಾರಣಕ್ಕೆ ಜಗಳವಾಡಬಹುದು. ಅತಿಯಾದ ಸಲುಗೆಯು ದುರ್ಬಳಕೆಯಾದೀತು. ನಿಮ್ಮನ್ನು ನೆಚ್ಚುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.
ವೃಷಭ
ಬಹಳ ದಿನಗಳಿಂದ ನಿಮ್ಮ ಆರೋಗ್ಯವು ಹಳಿ ತಪ್ಪಿದ್ದರೂ ನೀವು ನಿರ್ಲಕ್ಷ÷್ಯ ತೋರಿಸುತ್ತಿರುವುದು ಒಳ್ಳೆಯದಲ್ಲ. ಮನೋರಂಜನೆಗೆ ಅಧಿಕ ಸಮಯವನ್ನು ನೀವು ನೋಡುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ಚಿಂತಿತಕಾರ್ಯವು ಸಾಧ್ಯವಾಗಬಹುದು. ನಿಮ್ಮ ಯಶಸ್ಸನ್ನು ಸಹಿಸಲಾಗದೇ ನೊಂದುಕೊಳ್ಳುವರು. ಅದನ್ನು ಲೆಕ್ಕಿಸದೇ ಮುಂದುವರಿಯಿರಿ. ದಾಂಪತ್ಯದಲ್ಲಿ ವಿವಾದವಾಗಬಹುದು. ಬೆಳಗಿನ ಉತ್ಸಾಹವು ಸಂಜೆಯವರೆಗೂ ಇರಲಿದೆ. ಅರ್ಥವಿಲ್ಲದ ಚರ್ಚೆಗಳಲ್ಲಿ ಸಮಯವನ್ನು ನಷ್ಟ ಮಾಡಿಕೊಳ್ಳುವುದು ಬೇಡ. ನಿಮ್ಮ ಮನಸ್ಸನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ. ಗುರುಚರಿತ್ರೆಯ ಭಾಗವನ್ನು ಪಠಿಸಿ.
ಮಿಥುನ
ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಇಬ್ಬರಿಗೂ ಸಂತೋಷವಾಗಲಿದೆ. ನೀವಂದುಕೊAಡಿದ್ದೇ ಸತ್ಯ ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಂಡಿದ್ದರೆ ಅದರಿಂದ ಹೊರಬರುವುದು ಒಳ್ಳೆಯದು. ಇಲ್ಲವಾದರೆ ಎಲ್ಲ ಕಡೆಯೂ ಇದೇ ಸ್ಥಿತಿ ಎದುರಾಗಿ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗಬಹುದು. ಸಂಬಬAಧಗಳು ಸಡಿಲವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯು ನಿಮ್ಮದಾಗಿರುತ್ತದೆ. ಆರ್ಥಿಕತೆಯ ದೃಷ್ಟಿಯಿಂದ ನೀವು ಕಳೆದುಕೊಂಡಿದ್ದು ಬಹಳ ಆಗಿರುತ್ತದೆ. ಬಹಳ ಪ್ರಯತ್ನಪೂರ್ವಕವಾಗಿ ಮಾಡಿದ ಕೆಲಸವು ವ್ಯರ್ಥವಾಗು ಸಂಭವವಿದೆ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವುದು ನಿಮಗೆ ಖುಷಿಯ ಸಂಗತಿಯಾಗಿದೆ. ಮಹೇಶ್ವರನ ಸ್ತೋತ್ರವನ್ನು ಪ್ರಾತಃಕಾಲದಲ್ಲಿ ಮಾಡಿ.
ಕರ್ಕ
ಬುದ್ಧಿವಂತಿಕೆಯಿAದ ನೀವು ಹಣದ ವಂಚನೆಯಿAದ ತಪ್ಪಿಸಿಕೊಳ್ಳುವಿರಿ. ದಿನ ನಿತ್ಯದ ಜೀವನವು ಏರುಪೇರಾಗಬಹುದು. ಇದು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವೃತ್ತಿಯ ಬಗ್ಗೆ ಗೌರವ ಇರಲಿ. ನಿಮ್ಮ ವಾದವು ಸರಿ ಇದ್ದರೂ ವ್ಯಕ್ತಪಡಿಸುವ ರೀತಿಯಿಂದ ಅದು ಭಿನ್ನವೆನಿಸಬಹುದು. ಕಣ್ಣಿನ ಸಮಸ್ಯೆಗಳು ಉಂಟಾಗಬಹುದು ವೈದ್ಯರ ಸಲಹೆ ಪಡೆದು ಚಿಕಿತ್ಸೆಯನ್ನು ಮಾಡಿಕೊಳ್ಳುವಿರಿ. ಅವಿವಾಹಿತರು ವಿವಾಹಕ್ಕೆ ಸಂಬAಧಿಸಿದ ಸುದ್ದಿಯು ಬರಬಹುದು. ಸುಮ್ಮನಿರುವ ಶತ್ರುಗಳನ್ನು ಏನನ್ನಾದರೂ ಹೇಳಿ ಎಬ್ಬಿಸಬೇಡಿ. ನಿಮ್ಮ ಕೆಲಸವನ್ನು ಪೂರ್ತಿ ಮಾಡಿಕೊಳ್ಳಲು ಆದ್ಯತೆ ನೀಡಿ. ತಂದೆಯಿAದ ನಿಮಗೆ ಸಹಕಾರ ಸಿಗಲಿದೆ.
ಸಿಂಹ
ಸಂತರಿಗೆ ಸಮಾನವಾದ ವ್ಯಕ್ತಿಗಳಿಂದ ನಿಮಗೆ ಸಾಂತ್ವನ ಸಿಗಲಿದೆ. ನಿಮಗೆ ಸೌಕರ್ಯಗಳು ಅಧಿಕವಾಗಿ ಬೇಕು ಎನಿಸಬಹುದು. ಸ್ಥಾನಭ್ರಷ್ಟವಾಗುವ ಭಯವು ನಿಮಗೆ ಕಾಡಬಹುದು. ಭೂಮಿಯ ವ್ಯವಹಾರಕ್ಕೆ ಸಂಬAಧಿಸಿದAತೆ ನೀವು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ದಾಖಲೆಗಳ ವಿಚಾರದಲ್ಲಿ ಸರಿಯಾಗಿರಿ. ಕುಟುಂಬದಲ್ಲಿ ನಿಮ್ಮ ಕುರಿತು ಬೇಸರ ಉಂಟಾಗಬಹುದು. ಕಳೆದುಕೊಂಡದ್ದರ ಬಗ್ಗೆ ಪಶ್ಚಾತ್ತಾಪ ಮೂಡಬಹುದು. ಯಾರನ್ನೂ ಅಲ್ಪವೆಂದು ಭಾವಿಸಿ, ಅವರ ಬಗ್ಗೆ ಹಗುರಾಗಿ ಮಾತನಾಡುವುದು ಬೇಡ. ಸುಬ್ರಹ್ಮಣ್ಯನ ಸ್ತುತಿಯನ್ನು ಮಾಡಿ.
ಕನ್ಯಾ
ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬAಧಿಸಿದAತೆ ದಾಂಪತ್ಯದಲ್ಲಿ ಬಿರಕು ಬರುವ ಸಾಧ್ಯತೆ ಇದೆ. ಇದು ಮಕ್ಕಳ ಮೇಲೆ ಬೇರೆ ಪರಿಣಾಮವನ್ನು ಬೀರಬಹುದು. ದೈವದ ಬಗ್ಗೆ ಆಸಕ್ತಿ, ಶ್ರದ್ಧೆ, ಭಕ್ತಿಗಳ ಕೊರತೆ ಇರಲಿದೆ. ಸಂಬAಧವನ್ನು ಉಳಿಸಿಕೊಳ್ಳಲು ನೀವು ಹಣವನ್ನು ವ್ಯಯಿಸಬೇಕಾಗಬಹುದು. ಸ್ವ ಉದ್ಯೋಗವನ್ನು ನಡೆಸುತ್ತಿದ್ದರೆ, ಕೆಲಸಕ್ಕೆ ಕೆಲವರನ್ನು ತೆಗೆದುಕೊಳ್ಳುವಿರಿ. ನಿಮಗೆ ಪಾಪಪ್ರಜ್ಞೆ ಇಂದು ಕಾಡಬಹುದು. ಅದಕ್ಕೋಸ್ಕರ ಪಶ್ಚಾತ್ತಾಪ ಪಡಬೇಕಾದೀತು. ಸ್ನೇಹಿತರು ನಿಮ್ಮ ಜೊತೆ ಎಂದಿನAತೆ ಇಲ್ಲವೆಂದು ಬುದ್ಧಿಯು ಊಹಿಸುತ್ತದೆ. ನೆಮ್ಮದಿ ಬೇಕಾದ ಎಲ್ಲ ಸಂಗತಿಗಳು ಇದ್ದರೂ ಚಿಂತೆ ಕಾಡಿಸಬಹುದು. ಸಕಾರಾತ್ಮಕ ಆಲೋಚನೆ ಇರಲಿ. ಗುರುವಿನ ದರ್ಶನ ಮಾಡಿ. ಆಶೀರ್ವಾದ ಪಡೆಯಿರಿ.
ತುಲಾ
ಆರೋಗ್ಯವನ್ನು ಚೆನ್ನಾಗಿಟ್ಡುಕೊಳ್ಳಲು ವ್ಯಾಯಾಮಗಳನ್ನು ಆರಂಭಿಸಬಹುದು. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರವೂ ಮುಖ್ಯ ಎನ್ನುವುದನ್ನು ನೀವು ಮರೆತಿರುವಿರಿ. ವೇಗವಾಗಿ ಸಾಲವನ್ನು ಮುಗಿಸಲು ನೀವು ಪ್ರಯತ್ನಿಸಬೇಕಾದೀತು. ಆಲಸ್ಯದಿಂದ ಹೊರಬಂದು ಆ ಕುರಿತು ಆಲೋಚಿಸಿ. ಅದೃಷ್ಟವನ್ನು ನಂಬಿ ಕುಳಿತುಕೊಳ್ಳುವುದು ಬೇಡ. ನಿಮ್ಮ ಪ್ರಯತ್ನವೂ ಇರಲಿ. ಉದ್ಯೋಗದ ಕಾರಣದಿಂದ ನೀವು ಪ್ರಯಾಣವನ್ನು ಮಾಡಬೇಕಾಗಿಬರಬಹುದು. ತುಂಬಾ ದಿನಗಳಿಂದ ನಡೆಯುತ್ತಿರುವ ಕುಟುಂಬದ ಶೀತಲ ಕಲಹವು ನಿಮಗೆ ಬೇಸರ ತರುತ್ತದೆ. ಅದನ್ನು ಮುಗಿಸಲು ನಾನಾ ಮಾರ್ಗವನ್ನು ನೀವು ಕಂಡುಕೊಳ್ಳುವಿರಿ.
ವೃಶ್ಚಿಕ
ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ ಸೂಚನೆ ಬರಬಹುದು. ಕಛೇರಿಯ ಕೆಲಸದಲ್ಲಿ ವ್ಯತ್ಯಾಸವಾದ ಕಾರಣ ಕಿರಿಕಿರಿಯಿಂದ ಕೋಪ ಉಂಟಾಗಬಹುದು. ನಿಮ್ಮ ಮೇಲೆ ಸಹೋದ್ಯೋಗಿಗಳು ಸಲ್ಲದ ಅಪವಾದವನ್ನು ಮಾಡಿಯಾರು. ರಾಜಕೀಯಕ್ಕೆ ಹೋಗಲು ನಿಮಗೆ ಬೆಂಬಲವು ಸಿಗಲಿದೆ. ನೀವೂ ಬಹಳ ಉತ್ಸುಕರಾಗಿರುವಿರಿ. ವ್ಯಾಪಾರವು ನಿಮಗೆ ಲಾಭಾಂಶವನ್ನು ಕಡಿಮೆ ಮಾಡೀತು. ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಆಲೋಚನೆಯನ್ನು ಮಾಡುವಿರಿ. ನಿಮಗೆ ಕುಟುಂಬದ ಬೆಂಬಲವಿದ್ದು, ಧೈರ್ಯವಾಗಿ ಮುನ್ನಡೆಯುವಿರಿ.
ಧನುಸ್ಸು
ನೀವು ಬದಲಿಸಿಕೊಂಡ ಜೀವನಶೈಲಿಯ ಬಗ್ಗೆ ಕೆಲಸವರು ಆಡಿಕೊಳ್ಳಬಹುದು. ದಾಂಪತ್ಯದಲ್ಲಿ ವಿರಸದ ಮನೋಭಾವವು ಮುಂದುವರಿಯಬಹುದು. ಚಾಡಿಯಿಂದ ಯಾರನ್ನಾದರೂ ಹಾಳು ಮಾಡುವ ಕೆಲಸವು ನಿಮ್ಮಿಂದ ಆದೀತು. ಇಂದು ನೀವು ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. ಇಂದು ನಿಮ್ಮ ಮನಸ್ಸು ಬಹಳ ಸಂತೋಷದಿAದ ಇರಲಿದೆ. ಸಹೋದರಿಯು ನಿಮಗೆ ಧನಸಹಾಯವನ್ನು ಮಾಡುವರು. ಆರೋಗ್ಯದ ಸಮಸ್ಯೆಗಳನ್ನು ಸರಿಯಾದ ವೈದ್ಯರ ಮೂಲಕ ಸರಿಮಾಡಿಕೊಳ್ಳುವುದು ಉತ್ತಮ. ಆದರೆ ದುಂದು ವೆಚ್ಚಗಳನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ವರ್ತನೆಯು ಬಹಳ ಅಚ್ಚರಿ ಎನಿಸೀತು.
ಮಕರ
ಇನ್ನೊಬ್ಬರ ಮಾತನ್ನು ಪೂರ್ಣವಾಗಿ ನಂಬಿ ನಿಮ್ಮವರನ್ನು ಕಳೆದುಕೊಳ್ಳಲಿದ್ದೀರಿ. ನಿಮಗೆ ಇಂದು ಮಕ್ಕಳ ಕಡೆಯಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಬೇಸರದಿಂದ ದುಶ್ಚಟಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸ್ವಾವಲಂಬನೆಯ ಕಡೆಯೇ ನಿಮ್ಮ ಆಲೋಚನೆಗಳು ಇರಲಿವೆ. ನಿಮ್ಮ ಗಮನಸೆಳೆದು ವಂಚಿಸುವ ಕೆಲಸವು ನಡೆಯಬಹುದು. ಜಾಗರೂಕತೆಯಿಂದ ಇರಿ. ಸಣ್ಣ ಆದಾಯವನ್ನು ನೀವು ಇಂದು ಪಡೆಯಬಹುದು. ಪ್ರವಾಸ ಮಾಡುವ ಮನಸ್ಸಾಗಲಿದೆ. ಲಾಭವಿದೆ ಎಂದು ಗೊತ್ತಿಲ್ಲದ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳುವಿರಿ. ಸಾವಧಾನತೆ ನಿಮಗೆ ವರದಾನವಾಗಿದೆ. ಉಪಕರಣವನ್ನು ನೀವು ಸದುಪಯೋಗ ಮಾಡಿಕೊಳ್ಳುವಿರಿ. ಮೃತ್ಯುಂಜಯನ ಸ್ತೋತ್ರವನ್ನು ಮಾಡಿ.
ಕುಂಭ
ಸಂತೋಷ ಪಡಲು ನೀವು ನಿಮ್ಮದೇ ಮಾರ್ಗವನ್ನು ಕಂಡುಕೊಳ್ಳುವಿರಿ. ನೋವನ್ನು ಸ್ವಲ್ಪ ಕಾಲ ಮರೆಯುವಿರಿ. ಅನವಶ್ಯಕ ವಿಚಾರಕ್ಕೆ ನೀವು ಸಮಯವನ್ನು ಕೊಡುವಿರಿ. ತಂದೆಯಿAದ ಬೈಗುಳ ಪಡೆಯಬಹುದು. ಹೆಚ್ಚು ಆಯಾಸವಾಗುವ ಕೆಲಸವನ್ನು ನೀವು ಮಾಡುವಿರಿ. ಹಿರಿಯರ ಆಸೆಗಳನ್ನು ಪೂರ್ಣ ಮಾಡುವ ಮನಸ್ಸು ಬರಬಹುದು. ತುಂಬ ದಿನದ ಆಸ್ತಿಯ ವಿವಾದವು ಇಂದು ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿಯು ಮಧ್ಯಗತಿಯಲ್ಲಿ ಇರಲಿದೆ. ನಿಮ್ಮನ್ನು ಕಂಡು ಅವಮಾನಿಸುವವರಿಗೆ ತಕ್ಕ ಉತ್ತರವನ್ನು ಕೊಡುವಿರಿ. ಹನುಮಂತನ ಸ್ಮರಣೆಯನ್ನು ಮಾಡಿ. ಕಷ್ಟವನ್ನು ಹಿಮ್ಮೆಟ್ಟಬಹುದು.
ಮೀನ
ನಿಮ್ಮ ಮಾತುಗಳೇ ನಿಮಗೆ ತಿರುಗುಬಾಣವಾಗಿ ಬರಬಹುದು. ನೀವು ಇಂದು ವಾಹನಕ್ಕೆ ಸಂಬAಧಿಸಿದAತೆ ಹಣವನ್ನು ವ್ಯಯಿಸಬೇಕಾಗಬಹುದು. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿಮ್ಮ ಬಗ್ಗೆ ಬಂಧುಗಳು ಆಡಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಯನ್ನು ಇಟ್ಟುಕೊಳ್ಳುವರಿದ್ದಾರೆ. ನಿಮಗೆ ಇಂದು ಬಹಳ ಕಾರ್ಯದ ಒತ್ತಡ ಇದ್ದರೂ ನೀವು ನಿಮ್ಮವರಿಗೆ ಸಮಯವನ್ನು ಕೊಡುವಿರಿ. ಸಂಗಾತಿಯ ಸಂಪೂರ್ಣ ಬೆಂಬಲವು ನಿಮಗೆ ಇರಲಿದೆ. ತಾಯಿಯ ಕಡೆಯ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ಶಿವಕವಚವನ್ನು ಪಠಿಸಿ.