*ಮೇಷ ರಾಶಿ*
ಸಮಾಜದಲ್ಲಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಗೌರವ ಹೆಚ್ಚುವುದು.ಭೂಮಾರಾಟದಲ್ಲಿ ಹೊಸ ಲಾಭ ದೊರೆಯುವುದು.ಉದ್ಯೋಗದಲ್ಲಿ ಅಪೇಕ್ಷಿತ ಸ್ಥಾನಮಾನಗಳು ಲಭಿಸುವುದು.ಹೊಸ ವಾಹನವನ್ನು ಖರೀದಿಸಲಾಗುತ್ತದೆ.ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಮತ್ತು ಲಾಭವನ್ನು ಗಳಿಸುತ್ತೀರಿ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಕೆಂಪು.
*ವೃಷಭ ರಾಶಿ*
ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆಗಳು ಮಾನಸಿಕ ನೆಮ್ಮದಿಯ ಕೊರತೆಯನ್ನು ಉಂಟುಮಾಡುತ್ತವೆ.ದೀರ್ಘಕಾಲದ ವಿವಾದಗಳು ಸ್ವಲ್ಪ ಕಿರಿಕಿರಿಯುಂಟುಮಾಡುತ್ತವೆ. ದೂರ ಪ್ರಯಾಣಗಳನ್ನು ಮಾಡಲಾಗುತ್ತದೆ.ವ್ಯಾಪಾರ – ವ್ಯವಹಾರಗಳು ಅಷ್ಟರ ಮಟ್ಟಿಗೆ ನಡೆಯುವುದಿಲ್ಲ.ಉದ್ಯೋಗಗಳಲ್ಲಿ ಅಧಿಕಾರಿಗಳಿಂದ ಟೀಕೆಗೆ ಒಳಗಾಗುತ್ತಾರೆ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಹಳದಿ.
*ಮಿಥುನ ರಾಶಿ*
ಸಾಲದ ಒತ್ತಡದಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ.ಆಲೋಚನೆಗಳಲ್ಲಿ ಸ್ಥಿರತೆಯ ಕೊರತೆಯಿರುತ್ತದೆ,ಮಾಡುವ ಕೆಲಸವು ತುಂಬಾ ಕಷ್ಟಕರದಿಂದ ಪೂರ್ಣಗೊಳ್ಳುತ್ತವೆ. ಕುಟುಂಬ ಸದಸ್ಯರೊಂದಿಗೆ ವಾದಗಳು – ವಿವಾದಗಳು ಉಂಟಾಗುತ್ತವೆ,ವ್ಯಾಪಾರದಲ್ಲಿ ನಷ್ಟದ ಸೂಚನೆಗಳಿವೆ ಮತ್ತು ಉದ್ಯೋಗಗಳಲ್ಲಿ ಅಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತೀರಿ.
ಅದೃಷ್ಟದ ದಿಕ್ಕು: ಆಗ್ನೇಯ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಗುಲಾಬಿ.
*ಕರ್ಕ ರಾಶಿ*
ಸಮುದಾಯದಲ್ಲಿ ಪ್ರಸಿದ್ಧ ವ್ಯಕ್ತಿಗಳ ಜನಪ್ರಿಯತೆ ಹೆಚ್ಚಾಗುತ್ತದೆ.ಬೆಲೆಬಾಳುವ ವಾಹನಗಳನ್ನು ಖರೀದಿಸಲಾಗುವುದು.ಕೈಗೊಂಡ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ. ಮಕ್ಕಳು ಶೈಕ್ಷಣಿಕ ವಿಷಯಗಳಲ್ಲಿ ತೃಪ್ತಿ ಹೊಂದುತ್ತೀರಿ.ವ್ಯವಹಾರದಲ್ಲಿ ಪ್ರಗತಿ ಸಾದಿಸುತ್ತೀರಿ.ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಸಕ್ಯತೆಯಿಂದ ವ್ಯವಹರಿಸುತ್ತೀರಿ.
ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಕೆಂಪು.
*ಸಿಂಹ ರಾಶಿ*
ಬಾಲ್ಯದ ಗೆಳೆಯರೊಂದಿಗೆ ದೂರ ಪ್ರಯಾಣ ಮಾಡುವಿರಿ. ಹೊಸ ಜನರ ಪರಿಚಯ ಲಾಭದಾಯಕವಾಗಿರುತ್ತದೆ.ಕೈಗೊಂಡ ವ್ಯವಹಾರಗಳಲ್ಲಿ ಅನುಕೂಲವಾಗಿರುತ್ತದೆ.
ನಿರುದ್ಯೋಗಿಗಳ ಪ್ರಯತ್ನಗಳು ಕೂಡಿ ಬರುತ್ತವೆ.ವೃತ್ತಿಪರ ವ್ಯವಹಾರದಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯೋಗಿಗಳಿಗೆ ಬಡ್ತಿ ಹೆಚ್ಚಾಗುತ್ತದೆ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕೆಂಪು.
*ಕನ್ಯಾ ರಾಶಿ*
ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿರುತ್ತದೆ.ವ್ಯವಹಾರದಲ್ಲಿ ಶ್ರಮ ಹೆಚ್ಚಾಗುತ್ತದೆ. ಬಂಧು ಮಿತ್ರರೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗುವುದು. ಗೃಹ ನಿರ್ಮಾಣ ಪ್ರಯತ್ನಗಳು ನಿಧಾನವಾಗುತ್ತವೆ. ವೃತ್ತಿ ಮತ್ತು ವ್ಯಾಪಾರ ಸಾಮಾನ್ಯವಾಗಿರುತ್ತದೆ.ಹಣಕಾಸಿನ ವಿಚಾರದಲ್ಲಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಹಸಿರು.
*ತುಲಾ ರಾಶಿ*
ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಲಿದ್ದು, ಸಾಲಗಾರರ ಒತ್ತಡ ಹೆಚ್ಚಾಗಲಿದೆ.ಕುಟುಂಬ ಸದಸ್ಯರ ವರ್ತನೆಯಿಂದ ಮಾನಸಿಕ ನೆಮ್ಮದಿ ಕೊರತೆ ಕಾಡಲಿದೆ. ದೈವಿಕ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ.ವೃತ್ತಿ, ವ್ಯಾಪಾರ ವಹಿವಾಟು ನಿಧಾನವಾಗಿರುತ್ತದೆ. ಕೆಲಸದ ವಾತಾವರಣವು ನಿರುತ್ಸಾಹದಾಯಕವಾಗಿರುತ್ತದೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಬಿಳಿ.
*ವೃಶ್ಚಿಕ ರಾಶಿ*
ಸಹೋದರರಿಂದ ಶುಭ ವಾರ್ತೆ ಬರಲಿದೆ.ಹೊಸ ವಾಹನ ಖರೀದಿಯಾಗಲಿದೆ.ದೀರ್ಘಕಾಲದ ವಿವಾದಗಳು ಬಗೆಹರಿಯಲಿದೆ.ಬಂಧುಗಳೊಂದಿಗೆ ಪುಣ್ಯಕ್ಷೇತ್ರ ದರ್ಶನ ಮಾಡುತ್ತೀರಿ.ವ್ಯಾಪಾರ-ವ್ಯವಹಾರಗಳು ಉತ್ತಮವಾಗಿ ನಡೆಯಲಿವೆ. ನಿರುದ್ಯೋಗಿಗಳಿಗೆ ದೊರೆತ ಮಾಹಿತಿಯು ಉತ್ತೇಜನಕಾರಿಯಾಗಿರುತ್ತದೆ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಕಿತ್ತಳೆ.
*ಧನು ರಾಶಿ*
ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ,ಕೈಗೊಂಡ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ.ಕುಟುಂಬದ ವಾತಾವರಣವು ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡುತ್ತದೆ. ನೇತ್ರ ಸಂಬಂಧಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.ಹೊಸ ವ್ಯಾಪಾರ ವಿಸ್ತರಣೆ ಪ್ರಯತ್ನಗಳು ಕೂಡಿ ಬರುವುದಿಲ್ಲ.ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಕೆಂಪು.
*ಮಕರ ರಾಶಿ*
ಆತ್ಮೀಯರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯುವಿರಿ. ಕೈಗೊಂಡ ಕಾರ್ಯಗಳಲ್ಲಿ ದಿಢೀರ್ ಯಶಸ್ಸು ದೊರೆಯಲಿದೆ.ಖರ್ಚು ಮೀರಿದ ಆದಾಯ ಇರುತ್ತದೆ. ವ್ಯಾಪಾರದಲ್ಲಿ ಹೊಸ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ ಮತ್ತು ನಿರೀಕ್ಷಿತ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಹಳದಿ.
*ಕುಂಭ ರಾಶಿ*
ಪ್ರಯಾಣವನ್ನು ಮುಂದೂಡಲಾಗುವುದು. ಸಂಗಾತಿಯೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ.ಹಳೆಯ ಸಾಲಗಳನ್ನು ಇತ್ಯರ್ಥಪಡಿಸಲು ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.ವೃತ್ತಿಯಲ್ಲಿ ಅನಿರೀಕ್ಷಿತ ಬದಲಾವಣೆಗಳು ಅನಿವಾರ್ಯ.ಕೆಲಸದಲ್ಲಿ ನಕಾರಾತ್ಮಕ ವಾತಾವರಣವಿರುತ್ತದೆ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಹಳದಿ.
*ಮೀನ ರಾಶಿ*
ಹಣಕಾಸಿನ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ. ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಲಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಉತ್ಸಾಹದಿಂದ ಮುನ್ನಡೆಯುತ್ತೀರಿ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕೆಂಪು.
ರಾಶಿ ಭವಿಷ್ಯ :12-05-2023
