ಮೇಷ ರಾಶಿ:
ನಿಮಗೆ ಸಂಬಂಧಿಸದ ವಿಚಾರಕ್ಕೆ ನೀವು ಮಧ್ಯ ಪ್ರವೇಶ ಮಾಡುವುದು ಬೇಡ. ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವುದು ಉಚಿತ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು. ಸಂಗಾತಿಯ ನೋವಿಗು ಸ್ಪಂದಿಸಲು ಕಷ್ಟವಾದೀತು. ಬರಬೇಕಾದ ಹಣವು ಮಧ್ಯದಲ್ಲಿ ನಿಂತಿದ್ದು ನಿಮ್ಮೊಳಗೆ ಆತಂಕಕ್ಕೆ ಸೃಷ್ಟಿಸುವುದು. ಮಕ್ಕಳ ತಿರುಗಾಟವನ್ನು ಕಡಿಮೆ ಮಾಡಲು ಹೇಳುವಿರಿ. ಸರಿಯಾದ ಸಮಯಕ್ಕೆ ಆಹಾರವನ್ನು ಸ್ವೀಕರಿಸಿ. ಪ್ರಯಾಣದ ಆಯಾಸವು ವಿಶ್ರಾಂತಿಯಿಂದ ದೂರಾಗುವುದು. ಸುಬ್ರಹ್ಮಣ್ಯನು ನಿಮಗೆ ನಕಾರಾತ್ಮಕ ಅಂಶಗಳಿಗೆ ಶಕ್ತಿ ತುಂಬುವನು.
ವೃಷಭ ರಾಶಿ:
ರಾಜಕಾರಣಿಗಳಿಗೆ ತೊಳಲಾಟವು ಅಧಿಕವಾಗಿರುವುದು. ಇಂದಿನ ಸೋಲು ನಿಮಗೆ ಪಾಠವಾಗುವುದು. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮಂಗಲ ಕಾರ್ಯಗಳಿಗೆ ಸಂಪತ್ತನ್ನು ವಿನಿಯೋಗ ಮಾಡುವಿರಿ. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ಕುಟುಂಬದ ನೇರ ಮಾತುಗಳು ನಿಮಗೆ ಸಹಿಸಲು ಶಕ್ಯವಾಹದೇ ಬೇಸರಿಸುವಿರಿ. ಊಹಿಸಿದಷ್ಟು ಮಾರ್ದವವು ಸಂಗಾತಿಯ ಸ್ವಭಾವದಲ್ಲಿ ಇರದು. ಕುಟುಂಬದ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಧರವನ್ನು ತೆಗೆದುಕೊಳ್ಳದೇ ಎಲ್ಲರ ಅಭಿಪ್ರಾಯವನ್ನು ಪಡೆದು ಮುಂದುವರಿಯಿರಿ. ನಿಮ್ಮ ಕೆಲಸವು ಅನೇಕರಿಗೆ ಉಪಯೋಗವಾಗಬಹುದು. ತಾಳ್ಮೆಯಿಂದ ನೀವು ಜಯಿಸುವಿರಿ. ಅನಾರೋಗ್ಯವು ನಿಮಗೆ ಬಹಳ ಕಿರಿಕಿರಿ ಕೊಡಬಹುದು.
ಮಿಥುನ ರಾಶಿ:
ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ಹಣಕಾಸಿನ ವ್ಯವಹಾರದಲ್ಲಿ ಇಂದು ಎಲ್ಲರಿಂದ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ಇಂದು ನೀವು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವಿರಿ. ತಂದೆಯ ಶ್ರಮವನ್ನು ಕಂಡು ಮಕ್ಕಳು ನೋಯುವರು. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ. ನಿಮ್ಮ ಕೆಲಸದ ಬಗ್ಗೆ ನೀವೇ ಹೇಳಿಕೊಳ್ಳುವಿರಿ. ನೀವು ಎಲ್ಲರ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರ ಮಾಡುವಿರಿ. ಬಂಧುಗಳ ಭೇಟಿಯಿಂದ ಸಂತೋಷ ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರದಿದ್ದರೆ ಚಿಕಿತ್ಸೆಯವರೆಗೂ ಹೋಗಬಹುದು. ಇಂದು ಸಂಗಾತಿಯ ಪ್ರೀತಿಯಿಂದ ವಂಚಿತರಾಗುವಿರಿ. ನಿಮಗೆ ಹಳೆಯ ನೆನಪುಗಳು ಕಾಡಬಹುದು.
ಕಟಕ ರಾಶಿ:
ನಿಮಗೆ ನಿಮ್ಮ ಹಳೆಯ ಜವಾಬ್ದಾರಿಯ ಪದವಿಯೇ ಸಿಗಲಿದೆ. ಒತ್ತಡದಿಂದ ಹೊರಬರಲು ಮಾರ್ಗವು ಸಿಗಲಿದೆ. ಇಂದು ನಿಮ್ಮ ಸಂಗಾತಿಯನ್ನು ಖರೀದಿಗೆ ಕರೆದೊಯ್ಯುವಿರಿ. ಇಂದು ನಿಮ್ಮ ಮನೆಗೆ ಅತಿಥಿ ಆಗಮಿಸುವ ಸಾಧ್ಯತೆ ಇದೆ. ನೀವು ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ಕೆಲವು ಮಾಹಿತಿಯನ್ನು ಪಡೆದುಕೊಳ್ಳುವಿರಿ. ಹೆಣ್ಣು ಮಕ್ಕಳು ತಾಯಿಯಿಂದ ಲಾಭವನ್ನು ಪಡೆಯುವರು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹೆಚ್ಚಾದೀತು. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ನಿಮ್ಮ ವೃತ್ತಿಯು ನಿಮಗೆ ಸಂತೋಷವನ್ನು ಕೊಡದೇ ಇರುವುದು. ಕೆಲವನ್ನು ನೀವು ಸರಳವಾಗಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಮಾತು ಅಹಂಕಾರದಂತೆ ಕೇಳಿಸುವುದು. ಸಂಯಮವನ್ನು ಬೆಳೆಸಿಕೊಳ್ಳುವ ಅಗತ್ಯ. ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುವ ಅಭ್ಯಾಸ ಬೇಡ.
ಸಿಂಹ ರಾಶಿ:
ಇಂದು ನೀವು ಕೆಲಸವನ್ನು ಮಾಡಲು ಪ್ರಯತ್ನಿಸಿದರೂ ಪೂರ್ಣವಾಗದು. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ನೀವು ಇತರರಿಂದ ಗೌರವಕ್ಕೆ ಪಾತ್ರರಾಗುವಿರಿ. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಕಾರ್ಯದ ಹಂಚಿಕೆಯಿಂದ ಕೆಲಸವು ಸುಲಭವಾಗಬಹುದು. ನಿಮ್ಮ ಆಕ್ಷೇಪಗಳು ಹಲವು ಸುಳ್ಳಿನಿಂದ ಇರಲಿದೆ. ನಿಮ್ಮ ಸಂಶೋಧನೆಗೆ ನಿರ್ದಿಷ್ಟ ಗುರಿಯ ಅವಶ್ಯಕತೆ ಇರಲಿದೆ. ಆಸ್ತಿಯ ವಿಚಾರವಾಗಿ ತಂದೆಯ ಕಡೆಯಿಂದ ನಿಮಗೆ ಸಿಂಹಪಾಲು ಸಿಗುವುದು. ಗಂಭೀರ ಚರ್ಚೆಯಲ್ಲಿ ನಿಮ್ಮ ಹಾಸ್ಯವು ಸಭೆಯನ್ನು ವಿಚಲಿತಗೊಳಿಸೀತು. ಸಂಕೀರ್ಣ ಕಾರ್ಯವನ್ನು ಸರಳ ಮಾಡುವ ವಿಧಾನವು ನಿಮ್ಮ ಕರಗತವಾಗಿದೆ. ಎಲ್ಲವನ್ನೂ ನಿಮ್ಮ ನೇರಕ್ಕೆ ತರುವುದು ಕಷ್ಟವಾದೀತು.
ಕನ್ಯಾ ರಾಶಿ:
ವ್ಯಾವಹಾರಿಕ ಒಪ್ಪಂದವು ಕೊನೆಯ ಹಂತದಲ್ಲಿ ಇದ್ದು ಕೆಲವು ಅಸಮಾಧಾನಕರ ಮಾತನ್ನು ಕೇಳಬೇಕಾದೀತು. ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ. ಆರ್ಥಿಕತೆಯಲ್ಲಿ ಸಬಲರಾಗಿರುವುದು ಸಂತೋಷವನ್ನು ಇಮ್ಮಡಿ ಮಾಡೀತು. ಇಂದು ನೀವು ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಿಟ್ಟನ್ನು ಕಡಿಮೆ ಮಾಡಿಸುವಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಿ ಸಂಧಾನಕ್ಕೆ ಬರಬಹುದು. ಧಾರ್ಮಿಕ ಆಚರಣೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಆಸಕ್ತಿಯು ಹೆಚ್ಚಾಗಿ ಅಭ್ಯಾಸವು ನಿಲ್ಲುವುದು. ಬಂಧುಗಳ ಮನೆಯ ಸಮಾರಂಭಕ್ಕೆ ಹೋಗಲಿದ್ದೀರಿ. ದಾಂಪತ್ಯದಲ್ಲಿ ವಾಗ್ವಾದವೇ ಇಂದಿನ ಕಾರ್ಯಗಳಿಗೆ ತೊಂದರೆಯಾದೀತು. ಕಬ್ಬಿಣದ ವ್ಯಾಪಾರವು ಅಧಿಕ ಸಂಪತ್ತು ಬರಬಹುದು. ಅಪಜಯವು ನಿಮಗೆ ಅಪಮಾನದಂತೆ ಆಗಬಹುದು.
ತುಲಾ ರಾಶಿ:
ಇಂದು ಕೌಶಲ್ಯದ ಕಾರ್ಯಕ್ಕೆ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಇಂದು ನೀವು ನಿಮ್ಮ ಸುತ್ತಲಿನ ವಾತಾವರಣವನ್ನು ಆಹ್ಲಾದವೆನಿಸುವುದು. ನಿಮ್ಮ ವ್ಯವಹಾರದಲ್ಲಿ ಹೊಸ ಬದಲಾವಣೆಯನ್ನು ಮಾಡಲು ನೀವು ಯೋಚಿಸುತ್ತಿದ್ದರೆ ಯಶಸ್ವಿಯಾಗುವಿರಿ. ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಮನಸ್ಸು ಸ್ವಸ್ಥವಾಗಿ ಇರದು. ಮಕ್ಕಳ ಕಾರಣದಿಂದ ನಿಮಗೆ ಕೆಟ್ಟ ಮಾತನ್ನು ಕೇಳಬೇಕಾದೀತು. ಯಾವ ಕಾರ್ಯದಲ್ಲಿಯೂ ಸಿಕ್ಕಿಹಾಕಿಕೊಳ್ಳದೇ ಇರುವಿರಿ. ಎಲ್ಲವನ್ನೂ ತಿಳಿದೂ ನೀವು ಸುಮ್ಮನಿರುವುದು ಇಷ್ಟವಾಗದು. ಅಧಿಕಾರಿಗಳ ವರ್ಗದಿಂದ ಗೌರವ ಸಿಗಬಹುದು. ನಿಮ್ಮವರಿಗೆ ನಿಮ್ಮ ಸರಿಯಾದ ಪರಿಚಯು ಆಗದು. ಪತ್ನಿಯ ಆರೋಗ್ಯವು ಗಂಭಿರವಾಗುವ ಸಾಧ್ಯತೆ ಇದೆ. ದುರ್ಗಾಮಾತೆಯನ್ನು ವಿಧವಾಗಿ ಅರ್ಚಿಸಿ.
ವೃಶ್ಚಿಕ ರಾಶಿ:
ಒಡಹುಟ್ಟಿದವರ ಜೊತೆಗಿನ ನಿಮ್ಮ ವ್ಯವಹಾರಕ್ಕೆ ಮತ್ತೊಬ್ಬರು ಪ್ರವೇಶಿಸಬಹುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ಇಂದು ಸಮೂಹವನ್ನು ಕಟ್ಟಿಕೊಂಡು ಕೆಲಸವನ್ನು ಮಾಡುವಿರಿ. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆಯುವಿರಿ. ಸುಧಾರಿಸಿದ ಆರೋಗ್ಯವು ನಿಮಗೆ ಉತ್ಸಾಹವನ್ನು ಕಡಲ ಸಮಯವನ್ನು ತೆಗೆದುಕೊಂಡಿತು. ಜೀವನದ ಆಕಸ್ಮಿಕ ತಿರುವುಗಳಿಗೆ ನೀವು ಚಿಂತೆಗೆಡುವುದಿಲ್ಲ. ಹಣದ ಉಳಿತಾಯಕ್ಕೆ ಉಪಾಯದ ಅಗತ್ಯವು ಕಾಣಿಸಿಕೊಳ್ಳುವುದು. ಉದ್ಯೋಗದ ಕೆಲವು ರಹಸ್ಯಗಳನ್ನು ನೀವು ಇಂದು ತಿಳಿದುಕೊಳ್ಳುವಿರಿ. ವಿಷಯಾಸಕ್ತಿಯು ಇಂದು ಅಧಿಕವಾಗಿ ಇರುವುದು. ಸರ್ಕಾರದ ಕೆಲಸದಲ್ಲಿ ಹಿನ್ನಡೆಯಾಗಿದ್ದು ಬೇರೆಯವರ ಮೂಲಕ ಒತ್ತಡ ತಂದು ಕೆಲಸವನ್ನು ಮಾಡಿಸಿಕೊಳ್ಳುವಿರಿ.
ಧನು ರಾಶಿ:
ರಾಜಕೀಯವು ನಿಮ್ಮ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ. ಇಂದು ಸಾರ್ವಜನಿಕ ಸಭೆಗಳನ್ನು ನಡೆಸಲು ಯೋಜಿಸುವಿರಿ. ಪ್ರಭಾವೀ ವ್ಯಕ್ತಿಗಳ ಒಡನಾಟವನ್ನು ಯಾರ ಜೊತೆಯಾದರೂ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುವಿರಿ. ಆಭರಣ ಮುಂತಾದ ಬಹು ಮೌಲ್ಯದ ವಸ್ತುವನ್ನು ಖರೀದಿಸುವಿರಿ. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು. ಬಹಳ ದಿನಗಳ ಕಳೆದ ಮೇಲೆ ತಂದೆಯ ಜೊತೆ ಮಾತನಾಡಿ ನೆಮ್ಮದಿಯು ಪಡೆಯುವಿರಿ. ನಿಮ್ಮ ದೂರ ಪ್ರಯಾಣಕ್ಕೆ ಕುಟುಂಬದಿಂದ ಒಪ್ಪಿಗೆ ಸಿಗದು. ಇನ್ನೊಬ್ಬರ ನೋವಿಗೆ ಸ್ಪಂದಿಸುವ ನಿಮ್ಮ ಗುಣವು ಮೆಚ್ಚುಗೆಯಾಗಿ ಇದೇ ಪ್ರೀತಿಗೆ ದಾರಿ ಮಾಡಿಕೊಡಬಹುದು. ನಿಮಗೆ ಸಿಕ್ಕ ವ್ಯಕ್ತಿಗಳನ್ನು ಉಳಿಸಿಕೊಳ್ಳಿ. ಮನೆಯಲ್ಲಿ ವಿವಾಹಕ್ಕೆ ಸಂಬಂಧಿಸಿದ ನಿಮ್ಮ ಅಭಿಪ್ರಾಯವನ್ನು ತಿಳಿಸುವಿರಿ.
ಮಕರ ರಾಶಿ:
ಇಂದು ನೀವು ಮನೆಯ ಹಿರಿಯರಿಗೆ ಗೌರವ ತರುವ ಕಾರ್ಯವನ್ನು ಮಾಡುವಿರಿ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ಸಹೋದರನ ಸಹಕಾರವು ಅನುಕೂಲವೇ ಆಗುವುದು. ನೂತನ ವಾಹನದ ಖರೀದಿಯನ್ನು ಮಾಡುವ ಇಚ್ಛೆಯು ಇಂದು ಪೂರ್ಣವಾಗುವುದು. ಹಿತಶತ್ರು ನಿಮ್ಮ ಪತನವನ್ನೇ ನಿರೀಕ್ಷಿಸುತ್ತ ಕುಳಿತಿರುವರು. ವೈವಾಹಿಕ ಜೀವನ ಆರಂಭದ ದಿನಗಳಲ್ಲಿ ಸಂತೋಷವೇ ಇರುವುದು. ಪರಸ್ಪರ ದುಃಖವನ್ನು ಹಂಚಿಕೊಂಡು ದಂಪತಿಗಳು ಹಗುರಾಗುವುದು. ಇಂದಿನ ಕಾರ್ಯದ ಯಾದಿ ಮಾಡಿಕೊಂಡೇ ಕಾರ್ಯದಲ್ಲಿ ತೊಡಗಿ.
ಕುಂಭ ರಾಶಿ:
ಕುಟುಂಬಕ್ಕೆ ಅಗತ್ಯವಾದ ಪದಾರ್ಥಗಳನ್ನು ಖರೀದಿಸುವಿರಿ. ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ. ಎಲ್ಲರೆದುರು ಮುಖಭಂಗವನ್ನು ಎದುರಿಸಿಬೇಕಾದೀತು. ವೈವಾಹಿಕ ಜೀವನದ ಕನಸು ಕಾಣುವಿರಿ. ನಿಮ್ಮ ದೂರಾಲೋಚನೆಯು ವಾಸ್ತವಕ್ಕೆ ಹತ್ತಿರವಾಗಿ ಇಲ್ಲ. ಏನನ್ನಾದರೂ ಸಾಧಿಸಬೇಕು ಎನ್ನುವ ಕ್ಷಣಕಲವಿದ್ದು ಮರೆಯಾಗುವುದು. ಸದಭಿರುಚಿಯಿಂದ ಹೊಸ ಅವಕಾಶಗಳು ತೆರೆದುಕೊಳ್ಳುವುದು.
ಮೀನ ರಾಶಿ:
ಇಂದು ನಿಮ್ಮ ವ್ಯಾಪಾರದಲ್ಲಿ ಕಠಿಣ ಶ್ರಮವಿದ್ದೂ ಕಡಿಮೆ ಲಾಭವನ್ನು ಪಡೆಯಬೇಕಾಗುವುದು. ಇಂದಿನ ಆಗತ್ಯಕ್ಕೆ ಎಲ್ಲೂ ತೊಂದರೆಯಾಗದಂತೆ ಇರುವಿರಿ. ಜವಾಬ್ದಾರಿಯು ಬಂದು ಹೊರೆಯು ಹೆಚ್ಚಾಗುವುದು. ಬಹಳ ಹುಡುಕಾಟದ ಅನಂತರದ ಉತ್ತಮ ವಿವಾಹ ಸಂಬಂಧವು ಬರುವುದು. ಪಾಲುದಾರಿಕೆಯಲ್ಲಿ ಅಧಿಕಾರದ ಬಗ್ಗೆ ಅಸಮಾಧಾನ ಹೆಚ್ಚಾಗುವುದು. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನಿಮಗೆ ಸಾಕಷ್ಟು ಸಮಯವುವ ಇಂದು ಇರಲಿದ್ದು ಏನು ಮಾಡಬೇಕೆಂದು ತಿಳಿಯದೇ ಕಾಲವನ್ನು ಕಳೆಯುವಿರಿ. ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತನ. ನಿಮ್ಮ ಸೌಂದರ್ಯಕ್ಕೆ ನಿಮ್ಮ ಮೇಲೆ ಕೆಟ್ಟ ಕಣ್ಣುಗಳು ಬೀಳಬಹುದು. ಹನುಮಾನ್ ಚಾಲೀಸ್ ಪಠಿಸಿ.