ಮೇಷ
ತೀರ್ಥ ಕ್ಷೇತ್ರಗಳ ದರ್ಶನಕ್ಕೆ ತೆರಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ವಲ್ಪ ಮಟ್ಟಿಗಿನ ಒತ್ತಡ ಅನುಭವಿಸುತ್ತೀರಿ. ವಿಶ್ರಾಂತಿ ಅಗತ್ಯ ಇದೆ ಎನಿಸಿ, ರಜಾ ಕೂಡ ತೆಗೆದು ಕೊಳ್ಳುವ ಸಾಧ್ಯತೆ ಇದೆ. ಮನೆಯಲ್ಲಿ ಉತ್ತಮ ಸಮಯ ಕಳೆಯುತ್ತೀರಿ. ಕೌಟುಂಬಿಕ ನೆಮ್ಮದಿ ಇದೆ.
ವೃಷಭ
ಆದಾಯ ಹೆಚ್ಚಿಕೊಳ್ಳಲು ಅವಕಾಶಗಳು ಸಿಗುತ್ತವೆ. ಇತರರ ಸಮಸ್ಯೆಗಳನ್ನು ನಿವಾರಿಸುವ ಜವಾಬ್ದಾರಿ ತೆಗೆದುಕೊಳ್ಳಬೇಡಿ. ಹಣಕಾಸು ವಿಚಾರದಲ್ಲಿ ದೃಢತೆ ಸಾಧ್ಯವಿದೆ. ಔತಣ ಕೂಟಕ್ಕೆ ಆಹ್ವಾನ ಬರುವ ಸಾಧ್ಯತೆ ಇದ್ದು, ಬಂಧುಗಳು- ಸ್ನೇಹಿತರ ಜತೆಗೆ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ.
ಮಿಥುನ
ನೀವು ಅಂದುಕೊಂಡ ಕಾರ್ಯ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಯೋಚನೆ ಮಾಡಬೇಕಾಗುತ್ತದೆ. ಮಾಮೂಲಿಗಿಂತ ಹೆಚ್ಚಿನ ಶ್ರಮ ಹಾಕಿ ಕೆಲಸ ಮಾಡಿದರೂ ಅದರಿಂದ ಸಿಗುವ ಫಲ ನಿರೀಕ್ಷಿತ ಮಟ್ಟಕ್ಕೆ ಇರುವುದಿಲ್ಲ. ಯಾವುದಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ.
ಕರ್ಕಾಟಕ
ಅಡುಗೆ ಕೆಲಸ ಮಾಡುವವರು, ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವವರು ಚೂಪಾದ ವಸ್ತುಗಳಿಂದ ಆದಷ್ಟು ಜಾಗರೂಕರಾಗಿರಿ. ನಿಮ್ಮ್ ಆದಾಯವನ್ನು ಹೆಚ್ಚಿಸಿಕೊಳ್ಳಲು ದಾರಿ ಸಿಗುತ್ತದೆ. ಅದೇ ಶಾಶ್ವತ ಎಂದುಕೊಂಡು ಅದಕ್ಕೆ ತಕ್ಕಂತೆ ಖರ್ಚು ಮಾಡುವ ಪ್ರವೃತ್ತಿ ಬೇಡ.
ಸಿಂಹ
ಈ ಹಿಂದೆ ಕೈಗೊಂಡ ತೀರ್ಮಾನಗಳ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ಮಾಡಬೇಕಾಗುತ್ತದೆ. ಅದರಿಂದ ಹೆಚ್ಚಿನ ಅನುಕೂಲ ಇಲ್ಲ ಅಂದರೆ ಕೈ ಬಿಡಲು ಇಂದೇ ತೀರ್ಮಾನಿಸಿ. ಕುಟುಂಬದ ವ್ಯವಹಾರಗಳು ಇದ್ದರೂ ಇದನ್ನು ಮುಂದುವರಿಸಲು ತೀರ್ಮಾನ ಕೈಗೊಳ್ಳಲು ಸೂಕ್ತ ದಿನ.
ಕನ್ಯಾ
ನಿಮ ಧೋರಣೆಯ ಕಾರಣಕ್ಕೆ ಇತರರು ನಿಂದಿಸುವಂತಾಗುತ್ತದೆ. ಅದನ್ನು ಗಮನಿಸಲು ಸಹ ಸಮಯ ಸಿಗದ ರೀತಿಯಲ್ಲಿ ಉದ್ಯೋಗದಲ್ಲಿ ಏಳ್ಗೆ ಇದೆ. ಬಾಳ ಸಂಗಾತಿಯಿಂದಲೂ ಉತ್ತಮವಾದ ಸಹಕಾರ ಲಭಿಸಲಿದ್ದು, ದೀರ್ಘ ಕಾಲದ ನಿರೀಕ್ಷೆ ಈಡೇರಲಿದೆ.
ತುಲಾ
ಉದ್ಯಮಿಗಳು ಹಾಗೂ ವ್ಯಾಪಾರಸ್ಥರಿಗೆ ಭರವಸೆದಾಯಕ ದಿನ. ಮನೆಗೆ ಬರುವ ನೆಂಟರಿಷ್ಟರು ಸಂತಸವನ್ನು ತರುವ ಜತೆಗೆ ಕೆಲ ವ್ಯಾವಹಾರಿಕ ಸಂಬಂಧಗಳು ಉತ್ತಮ ಫಲ ನೀಡುವ ಸೂಚನೆ ದೊರೆಯುತ್ತದೆ. ಸಂತೋಷವಾಗಿ ಈ ದಿನ ಕಳೆಯುತ್ತದೆ.
ವೃಶ್ಚಿಕ
ಶೈಕ್ಷಣಿಕ ರಂಗದಲ್ಲಿ ಉತ್ತಮವಾದ ಪ್ರಗತಿ ಇದೆ. ಉದ್ಯೋಗ-ವ್ಯಾಪಾರ-ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯ ಒತ್ತಡ ಬೀಳುತ್ತದೆ. ಆದರೆ ಅದರಿಂದ ಹೊರಬರಲು ಸೂಕ್ತ ನೆರವು ಕೂಡ ದೊರೆಯುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.
ಧನು
ಮಹತ್ವದ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲು ಹಣಕಾಸು ಹೊಂದಿಸಲು ಪ್ರಯತ್ನ ಪಡುತ್ತಿರುವವರಿಗೆ ಶುಭ ಸುದ್ದಿ ದೊರೆಯುತ್ತಿದೆ. ಆದರೆ ಮಾತಿನ ಮೇಲೆ ಹಿಡಿತ ಇರಲಿ. ದೂರದ ಸಂಬಂಧಿಕರು ಮನೆಗೆ ಬರುವ ಸಾಧ್ಯತೆ ಇದೆ. ಸ್ನೇಹಿತರಿಂದ ನೆರವು.
ಮಕರ
ಕುಟುಂಬದ ವಿಚಾರಕ್ಕೋ ಅಥವಾ ಉದ್ಯೋಗ-ವೃತ್ತಿಗೆ ಸಂಬಂಧಿಸಿದಂತೆ ದೂರ ಪ್ರಯಾಣ ಹೋಗಬೇಕಾದಲ್ಲಿ ಕಡ್ಡಾಯವಾಗಿ ರದ್ದು ಮಾಡಿಕೊಳ್ಳಿ. ಸಂಗಾತಿಗೆ ನಿಮ್ಮ ಅಗತ್ಯ ಇಂದು ಹೆಚ್ಚು ಕಂಡುಬರಬಹುದು. ನಿಮಗೆ ಬರಬೇಕಾದ ಹಣಕ್ಕೆ ಪ್ರಯತ್ನ ಪಟ್ಟರೆ ಯಶಸ್ಸು ಸಿಗಲಿದೆ.
ಕುಂಭ
ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಇರುವವರು ಇಂದು ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಆದರೆ ಉಳಿದ ಕ್ಷೇತ್ರದವರಿಗೆ ಈ ಹಿಂದೆ ಪಟ್ಟ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರುವವರು ಆರೋಗ್ಯದ ಬಗ್ಗೆ ನಿಗಾ ವಹಿಸಿ.
ಮೀನ
ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ನಾಳೆಗೆ ಬರುವ ಆದಾಯವನ್ನು ನೆಚ್ಚಿಕೊಂಡು ಇಂದೇ ಮತ್ತೊಬ್ಬರಿಗೆ ಸಹಾಯ ಮಾಡುವ ಮಾತು ಕೊಡಬೇಡಿ. ನಿಮ್ಮ ದುಃಖ-ದುಮ್ಮಾನಗಳನ್ನು ಸಂಬಂಧಪಟ್ಟವರಲ್ಲಿ ತಿಳಿಸದ ಹೊರತು ಅದಕ್ಕೆ ಪರಿಹಾರ ದೊರಕಲು ಸಾಧ್ಯವಿಲ್ಲ.