ಮೇಷ
ನಾಲ್ಕನೇ ಮನೆಯಲ್ಲಿ ಶುಕ್ರ ವಾಹನದಿಂದ ಲಾಭ, ಸಂಗಾತಿಯಿಂದ ಸಹಕಾರ ಹಣ ಲಾಭ. ಎರಡನೇ ಮನೆಯ ಸೂರ್ಯ ಕೊಂಚ ಕುಟುಂಬದಲ್ಲಿ ಒತ್ತಡವನ್ನು ಕೊಡುತ್ತಾನೆ. ನಿಮ್ಮ ರಾಶಿಯಲ್ಲೇ ಇರುವ ಗುರು ಹಾಗೂ ರಾಹುವಿನಿಂದ ಕಾರ್ಯವೈಫಲ್ಯ ಇರುತ್ತದೆ. ಯಾವುದೇ ಕೆಲಸ ಶ್ರಮ ಬೇಡುತ್ತದೆ ಲಾಭ ಕಡಿಮೆ. ಹನ್ನೊಂದರ ಶನಿಮಾತ್ರ ನಿಮಗೆ ಸಹಕಾರಿ. ಶಕ್ತಿ ಸಾಮರ್ಥ್ಯ, ಹಣಬಲ ಎಲ್ಲವನ್ನೂ ಕೊಡುತ್ತಾನೆ.
ವೃಷಭ
ನಿಮ್ಮ ರಾಶಿಯಲ್ಲೇ ಸೂರ್ಯನಿದ್ದು ನಿಮಗೆ ವಿನಾ ಕಾರಣ ಒತ್ತಡ ಕೊಡುತ್ತಾನೆ. ತಲೆ ಬಿಸಿಯಾಗುವಂತಹ ಯೋಚನೆಗಳು ದಾಳಿಯಿಟ್ಟು ನೆಮ್ಮದಿ ಕೆಡಿಸುತ್ತದೆ. ಮೂರನೇ ಮನೆಯ ಶುಕ್ರ ಕುಜನಿಂದ ಸಹೋದರರೊಂದಿಗೆ ಮನಸ್ತಾಪ, ಸಂಗಾತಿಯೊಂದಿಗೆ ಸಣ್ಣ ಪುಟ್ಟ ಕಲಹಗಳು ನಡೆದು ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. 12ರ ಬುಧ ಗುರು ರಾಹು ಖರ್ಚು ಮಾಡಿಸುತ್ತಾರೆ. ಮೂರರ ಕುಜ ಧೈರ್ಯವಾಗಿ ಎದುರಿಸುವ ಛಲ ಕೊಡುತ್ತಾನೆ. ಆರರ ಕೇತುವಿನಿಂದ ಹಣದ ಬೆಂಬಲ ಇದೆ. ಇದು ಸಮ್ಮಿಶ್ರ ವಾರ.
ಮಿಥುನ
ಎರಡನೇ ಮನೆಯಲ್ಲಿ ಶುಕ್ರ ಕುಜ ಕೊಂಚ ಸುಖವನ್ನು ಕೊಡುತ್ತಾರೆ. ಹನ್ನೊಂದರ ಬುಧ ಶುಕ್ರ ರಾಹು ಸಹ ಧನಲಾಭ ಕಾರ್ಯ ಸಿದ್ಧಿ ವೃತ್ತಿಯಲ್ಲಿ ಏಳ್ಗೆ ಮೊದಲಾದ ಶುಭಫಲಗಳನ್ನು ನೀಡುತ್ತಾರೆ. 12ರ ಸೂರ್ಯನಿಂದ ಏನೂ ಲಾಭ ಇಲ್ಲ. ಸರ್ಕಾರದ ಕೆಲಸಗಳಲ್ಲಿ ಹಿನ್ನಡೆ ಇದೆ. ಐದರ ಕೇತುವಿನಿಂದ ವಿದ್ಯಾರ್ಥಿಗಳಿಗೆ ಅಶುಭ ಫಲ. ಅಂದರೆ ನಿಧಾನ ಪ್ರಗತಿ. ಗುರುಗಳು ನಿಮಗೆ ವಹಿಸಿದ ಪ್ರಾಜೆಕ್ಟ್ಗಳನ್ನು ಮಾಡಲು ಸೋಲುತ್ತೀರಿ. ಆದರೂ ಗುರುಬಲ ಇದೆ. ತುಂಬಾ ವಿಪರೀತ ಪರಿಣಾಮ ಆಗುವುದಿಲ್ಲ. ಅವಿವಾಹಿತರಿಗೆ ವಿವಾಹದ ಮಾತುಕತೆಗಳು ನಡೆಯುತ್ತದೆ
ಕಟಕ
ನಿಮ್ಮ ರಾಶಿಯಲ್ಲೇ ಬಲಹೀನ ಕುಜ ಹಾಗೂ ಶುಕ್ರ ಇದ್ದಾರೆ. ಬಿಸಿ ಮತ್ತು ತಂಪು ಎರಡೂ ನಿಮ್ಮ ರಾಶಿಯಲ್ಲಿ ಇರುವುದರಿಂದ ಬಿಸಿ ಮತ್ತು ತಂಪು ಎರಡರ ಅನುಭವವು ಆಗುತ್ತದೆ. ಬಿಸಿ ಕೊಂಚ ಹೆಚ್ಚಾಗಿಯೇ ಇದೆ. ಕಾರ್ಯ ವೈಫಲ್ಯ ಹಣದ ಅಡಚಣೆಯಿಂದ ಕಿರಿಕಿರಿ ಇದೆ. ದೇವರ ಧ್ಯಾನ ಜಪತಪ ಒಂದೇ ನಿಮ್ಮನ್ನು ತಂಪು ಮಾಡಬಲ್ಲದು. ಸೂರ್ಯ 11ನೆ ಮನೆಯಲ್ಲಿ ಇರುವುದು ಕೊಂಚ ಹಣದ ಅಡಚಣೆ ಕಡಿಮೆ ಮಾಡುತ್ತದೆ.
ಸಿಂಹ
ಈಗ ಹನ್ನೆರಡನೇ ಮನೆಯ ಶುಕ್ರ-ಕುಜ ನಿಮಗೆ ನಷ್ಟವನ್ನೇ ಮಾಡುತ್ತಾರೆ. ಬೆಂಕಿಗೆ ಅಥವಾ ವಿದ್ಯುತ್ಗೆ ಸಂಬಂಧ ಪಟ್ಟ ಕೆಲಸ ಮಾಡುವವರಿಗೆ ನಷ್ಟ ಇದೆ. ಆದರೆ ಗುರುಬಲ ಇರುವುದರಿಂದ ವಿಕೋಪಕ್ಕೆ ಹೋಗದೆ ಗುರು ಕಾಪಾಡುತ್ತಾನೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಈಗ ಕೈಹಾಕಬೇಡಿ. ನಷ್ಟವಾಗುತ್ತದೆ. ಗುರು ಭಾಗ್ಯ ಸ್ಥಾನದಲ್ಲಿ ಇರುವುದರಿಂದ ದೇವರ ಧರ್ಮದ ಕಾರ್ಯಗಳನ್ನು ಮಾಡುತ್ತೀರಿ. ಹತ್ತರಲ್ಲಿ ಸೂರ್ಯ ವೃತ್ತಿಯಲ್ಲಿ ಪ್ರಗತಿಯಾಗುವಂತೆ ಮಾಡುತ್ತಾನೆ. ಹನ್ನೊಂದರ ಬುಧ ಹಾಗೂ ರಾಹು ಧನಲಾಭವನ್ನೂ ಕೊಡುತ್ತಾರೆ. ಸಂಗಾತಿಯೊಂದಿಗೆ ಮನಸ್ತಾಪಗಳಾಗಬಹುದು. ಸಮಾಧಾನದಿಂದ ನಿಭಾಯಿಸಿ.
ಕನ್ಯಾ
ನಿಮ್ಮ ಹಠ, ನಿಮ್ಮಪ್ರೇರಣೆ ಎಲ್ಲವೂ ಅರ್ಧಫಲ ನೀಡುತ್ತದೆ. ಚತುರತೆ ಚಾಣಾಕ್ಷತೆ ನಿಮಗಿದ್ದರೂ, ಆಗಾಗ ನೀವಂದುಕೊಂಡದ್ದು ನಡೆಯದೇ ಸೋಲುತ್ತೀರಿ. ನಿಮಗೆ ವಿರುದ್ಧವಾಗಿ ಮಾತಾಡುವವರು ಹೆಚ್ಚಾಗಿದ್ದಾರೆ. ಎಚ್ಚರಿಕೆಯಿಂದ ನಿಭಾಯಿಸಿ. ಮಾತುಗಳಲ್ಲಿ ನಯವಿನಯ ಇರಲಿ. ವಾಹನ ಓಡಿಸುವಾಗ ಜಾಗ್ರತೆ. ಪಿತ್ರಾರ್ಜಿತ ಆಸ್ತಿ ಬರುವ ಸಾಧ್ಯತೆ ಇದೆ. ಹನ್ನೊಂದರ ಶುಕ್ರ- ಕುಜನಿಂದ ಲಾಭ ಇದೆ. ನೀವಂದುಕೊಂಡದ್ದು ನೆರವೇರಬೇಕೆಂದರೆ ಹಣ ಶ್ರಮ ಎರಡೂ ಹೆಚ್ಚು ಬೇಕು.
ತುಲಾ
ಈಗ ಗುರುಬಲ ಇದೆ ಹೆದರಬೇಕಿಲ್ಲ. ಯಾವುದೇ ಕಾರ್ಯವನ್ನು ಹೊಸಯೋಜನೆಗಳನ್ನೂ ಪ್ರಾರಂಭಿಸಲು ಇದು ಪ್ರಶಸ್ತ ಸಮಯ. ಏಳರಲ್ಲಿ ಬುಧ ರಾಹು ಕೂಡ ಇದ್ದಾರೆ. ಬುಧ ಗುರು ಇರುವುದು ಒಳ್ಳೆಯದು. ರಾಹು ಬುಧನಿಗೆ ಮಿತ್ರನಾಗಿರುವುದರಿಂದ ಕೆಡುಕು ಮಾಡಲು ಹೋಗುವುದಿಲ್ಲ. ಹತ್ತನೇ ಮನೆ ವೃತ್ತಿಸ್ಥಾನದಲ್ಲಿ ಶುಕ್ರ-ಕುಜ ಇದ್ದಾರೆ. ವೃತ್ತಿಯಲ್ಲಿ ಒಳ್ಳೆಯ ಯಶಸ್ಸು ಕಾಣಬಹುದು. ಪ್ರಶಸ್ತಿ ಸನ್ಮಾನಗಳು ಸಿಗುತ್ತದೆ. ಈ ರಾಶಿಯ ಚಲನಚಿತ್ರರಂಗದವರಿಗೆ ಯಶಸ್ಸು ಇದೆ. ಅವಿವಾಹಿತರಿಗೆ ವಿವಾಹ ಆಗುವ ಸಮಯ. ಒಳ್ಳೆಯ ಕಾರ್ಯಗಳನ್ನು ಮಾಡಲು ಈಗ ಗುರುಬಲ ಇದೆ ದೈವರಕ್ಷೆ ಇದೆ.
ವೃಶ್ಚಿಕ
ರಾಹು ಆರನೇ ಮನೆಯಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಕೊಡುತ್ತಾನೆ. ನೀವು ಪರಿಶ್ರಮ ಹಾಕಿದಷ್ಟೂ ಅದಕ್ಕೆ ತಕ್ಕ ಫಲ ಅನುಭವಿಸುತ್ತೀರಿ. ಒಂಬತ್ತನೇ ನೇ ಮನೆಯಲ್ಕಿ ಶುಕ್ರ-ಕುಜ ನಿಮಗೆ ಸಹಾಯ ಮಾಡುತ್ತಾರೆ. ಸ್ತ್ರೀ ಸಂಬಂಧ ಸಹಾಯ ಸಿಗುತ್ತದೆ. ಆರನೇ ಮನೆಯಲ್ಲಿ ಇರುವ ಬುಧ ಸಹ ನಿಮಗೆ ಒಳಿತನ್ನೇ ಮಾಡುತ್ತಾನೆ. ಸಾಲ ತೀರಿಸಲು ಈಗ ಸಮಯ. ಆದಾಯ ಚೆನ್ನಾಗಿದ್ದು ಸಾಲಗಳಿಂದ ಮುಕ್ತರಾಗುತ್ತೀರಿ. ಹೊಸ ಕೆಲಸ ಅವಕಾಶ ಈಗ ನಿಮ್ಮನ್ನು ಹುಡುಕಿ ಬರುತ್ತದೆ. ವಿವೇಚನೆಯಿಂದ ಆಯ್ಕೆ ಮಾಡಿಕೊಂಡು ಭಾಗ್ಯವಂತರಾಗಿ.
ಧನಸ್ಸು
ಈಗ ನಿಮಗೆ ದೇವರು ಭಾಗ್ಯದ ಬಾಗಿಲನ್ನೇ ತೆರೆದಿದ್ದಾನೆ. ಅದೃಷ್ಟಗಳ ಮಹಾಪೂರವೇ ಹರಿದು ಬರುತ್ತದೆ. ಇದರಲ್ಲಿ ನಿಮಗೆ ಒಳ್ಳೆಯದು ಯಾವುದೋ ಆಯ್ಕೆ ನಿಮ್ಮ ವಿವೇಚನೆ. ಮಕ್ಕಳ ಅಭಿವೃದ್ಧಿ ನಿಮಗೆ ಸಂತಸ ನೀಡುತ್ತದೆ. ವಿಹಾರ, ಪುಣ್ಯಕ್ಷೇತ್ರ ದರ್ಶನ ಇದೆ. ವಿದ್ಯಾರ್ಥಿಗಳಿಗೆ ಶುಭಕಾಲ. ರಾಜಕೀಯ ವ್ಯಕ್ತಿಗಳಿಗೆ ಶುಭಕಾಲ. ಹನ್ನೆರಡು ರಾಶಿಗಳಲ್ಲೂ ಈಗ ಧನಸ್ಸುರಾಶಿಗೆ ಉತ್ತಮಕಾಲ ನಡೆಯುತ್ತಿದೆ. ಅವಕಾಶಗಳು ನಿಮ್ಮ ಕಾಲಬುಡಕ್ಕೆ ಬರುತ್ತದೆ. ಜಂಭ ಬೇಡ. ದೇವರ ದಯೆಯೆಂದು ವಿನೀತವಾಗಿ ಸ್ವೀಕರಿಸಿ.
ವೃತ್ತಿಯಲ್ಲಿ ಯಶಸ್ಸು ಬಡ್ತಿ ಇದೆ. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುತ್ತೀರಿ. ಪ್ರವಾಸಗಳನ್ನು ಮಾಡುತ್ತೀರಿ. ಮನಸ್ಸಿಗೆ ಖುಷಿಯಾಗುವಂಥ ಕೆಲಸಗಳನ್ನು ಮಾಡುತ್ತೀರಿ. ಭೂಮಿ ವ್ಯವಹಾರದಲ್ಲಿ ಲಾಭ ಇದೆ. ಭೂಮಿ ಮನೆ ಆಸ್ತಿ ಕೊಳ್ಳುವ ಯೋಗ ಇದೆ. ವ್ಯವಸಾಯಗಾರರಿಗೆ ಯಶಸ್ಸು ಧನಲಾಭ ಇದೆ. ವಾಹನದಿಂದ ಲಾಭ ಇದೆ. ಹೊಸ ವಾಹನ ಕೊಳ್ಳುವ ಯೋಗ ಇದೆ. ಧೈರ್ಯ ಪರಾಕ್ರಮದಿಂದ ಯಾವುದೇ ಕೆಲಸ ಮಾಡಿದರೂ ಜಯಶಾಲಿ ಆಗುತ್ತೀರಿ. ಹಣದ ಹರಿವು ಬಹಳ ಉತ್ತಮವಾಗಿದೆ