ಮೈಸೂರು:- ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಅರಣ್ಯ ಭವನದಲ್ಲಿ ಬೀಡು ಬಿಟ್ಟಿದ್ದು, ರಿಲ್ಯಾಕ್ಸ್ ಮೂಡಿನಲ್ಲಿ ದಸರಾ ಗಜಪಡೆ, ಸೆ.5ಕ್ಕೆ ಅರಮನೆ ಅವರಣದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ.
ಸೆ.05ಕ್ಕೆ ಅರಮನೆ ಪ್ರವೇಶ ಪಡೆದು ನಂತರ ತಾಲೀಮಿನಲ್ಲಿ ತೊಡಗುತ್ತವೆ. ಅದೇ ರೀತಿ ಎರಡನೇ ಹಂತದ ಆನೆಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಡಿ.ಸಿ.ಎಫ್ ಮಾಹಿತಿ ನೀಡಿದ್ದಾರೆ. ಸೆ.5ರಂದು ಅರಮನೆಗೆ ಗಜಪಡೆಗಳ ಆಗಮನವಾಗಲಿದೆ. ಅಂದು ಗಜಪಡೆಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಸೆ.5ರಂದು ಬೆಳಗ್ಗೆ ಅರಣ್ಯ ಭವನದಲ್ಲಿ ಅಧಿಕಾರಿಗಳು ಪೂಜೆ ಸಲ್ಲಿಸಲಿದ್ದಾರೆ.
ಇನ್ನು ದಸರಾ ಗಜಪಡೆಗೆ ರಾಜವಂಶಸ್ಥರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸೆ.5ರಂದು ಆರಮನೆ ಆವರಣ ಮತ್ತಷ್ಟು ಕಳೆಗಟ್ಟಲಿದೆ. ಬಳಿಕ ನಡಿಗೆಯಲ್ಲಿ ದಸರಾ ಆನೆಗಳು ಅರಮನೆ ಅಂಗಳಕ್ಕೆ ತೆರಳಲಿದ್ದು, ದಸರಾ ಆನೆಗಳಿಗೆ ಪೆÇ?ಲಿಸ್ ಭದ್ರತೆ ನೀಡಲಾಗುತ್ತದೆ.
ಅರಣ್ಯ ಭವನದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪ್ರತಿಯೊಬ್ಬರನ್ನೂ ವಿಚಾರಿಸಿದ ನಂತರವಷ್ಟೇ ಒಳಗೆ ಬಿಡಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಮಾವುತರು, ಕಾವಾಡಿಗರು ಹಾಗೂ ಅವರ ಸಹಾಯಕರು, ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ಯೊಂದು ಆನೆಗಳ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳಲಾಗುತ್ತಿದೆ, ದೂರ ದೂರದಲ್ಲಿ ಆನೆಗಳನ್ನು ಇರಿಸಲಾಗಿದೆ. ಪ್ರತಿ ಬಾರಿಯೂ ದಸರಾ ಆನೆಗಳು ಆಗಮಿಸಿದ ಸಂದರ್ಭ ಅವುಗಳ ಬಳಿ ನಿಂತು ಫೆÇ?ಟೋ ತೆಗೆ ಸಿಕೊಳ್ಳಲು ಜನರು ಮುಗಿಬೀಳುತ್ತಾರೆ.
ಈ ಬಾರಿಯೂ ಅಂಬಾರಿಯನ್ನು ಆಪರೇಷನ್ ಹಿರೋಖ್ಯಾತಿಯ ಹುಲಿ ಸೆರೆಯಲ್ಲಿ ನಿಷ್ಣಾತನಾಗಿರುವ 58ವರ್ಷದ ಅಭಿಮನ್ಯು ಹೊರುತ್ತಿದ್ದು, ಅದರೊಂದಿಗೆ ಗಜಪಡೆಯ ಹಿರಿಯ 63 ವರ್ಷದ ಅರ್ಜುನ, ಭೀಮ, ಮಹೇಂದ್ರ, ಬಳ್ಳೆ ಆನೆ ಶಿಬಿರದ ಅರ್ಜುನ, ಭೀಮನಕಟ್ಟೆ ಆನೆ ಶಿಬಿರದ ವರಲಕ್ಷ್ಮಿ, ಕೊಡಗಿನ ಮಡಿಕೇರಿ ವಿಭಾಗದ ದುಬಾರೆ ಶಿಬಿರದ ಧನಂಜಯ, ಗೋಪಿ, ಹೊಸ ಆನೆ ಕಂಜನ್ ಹಾಗೂ ಹೆಣ್ಣಾನೆ ವಿಜಯ ಮೈಸೂರಿಗೆ ಪಯಣ ಬೆಳೆಸಿ ಅರಣ್ಯ ಭವನದಲ್ಲಿ ಬೀಡು ಬಿಟ್ಟಿದ್ದೆ.
ಆನೆಗಳು ಇರುವ ಜಾಗದಲ್ಲಿ ಕೆಂಪಪಟ್ಟಿ ಅಳವಡಿಸಿ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.