ಬೆಂಗಳೂರು: ಡ್ರಗ್ಸ್ ಮಾಫಿಯಾದ ವಿರುದ್ಧ ಸಿಸಿಬಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತಿಂಗಳ ಅವಧಿಯಲ್ಲಿ ಪ್ರತ್ಯೇಕವಾಗಿ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ 19 ಪೆಡ್ಲರ್ ಗಳ ಬಂಧನಕ್ಕೊಳಪಡಿಸಿ, ರೂ.7.6 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.
ಪ್ರಕರಣ ಸಂಬAಧ ಜಂತು ಮಂಡಲ್, ಸಾಯಿಕುಮಾರ್ ದಂಶೆಟ್ಟಿ, ಅರ್ಜುನ್ ನಂಬಿಯಾರ್, ರೋಹನ್ ಬಾಬು, ಪವನ್, ಅಕ್ಷಯ್ ಮತ್ತು ಜಿಷ್ಣು ಸೇರಿ 19 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ವಿಲ್ಸನ್ ಗಾರ್ಡನ್, ಬೇಗೂರು, ಅಶೋಕನಗರ, ಬಾಣಸವಾಡಿ, ಸಿದ್ದಾಪುರ, ಪುಲಕೇಶಿನಗರ, ಹೆಣ್ಣೂರು, ಕೆಆರ್ ಪುರಂ, ಯಲಹಂಕ ಮತ್ತು ಆರ್ಟಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರು ಕೆಜಿ ಹ್ಯಾಶಿಶ್ ಆಯಿಲ್, 51.89 ಕೆಜಿ ಗಾಂಜಾ, 140 ಗ್ರಾಂ ಎಂಡಿಎAಎ ಹರಳುಗಳು, 236 ಎಕ್ಸ್ಟಾಸಿ ಮಾತ್ರೆಗಳು, 34 ಎಲ್ಎಸ್ಡಿ ಸ್ಟಿçಪ್ಗಳು, 23 ಗ್ರಾಂ ಕೊಕೇನ್, 17 ಮೊಬೈಲ್ ಫೋನ್ಗಳು, ಒಂದು ಕಾರು ಮತ್ತು ಬೈಕ್’ನ್ನು ವಶಪಡಿಸಿಕೊಂಡಿದ್ದಾರೆ.
ರೂ.7.6 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ, 19 ಪೆಡ್ಲರ್ ಗಳ ಬಂಧನ
