ಬೆಂಗಳೂರು: ಯುವಕನೊಬ್ಬನನ್ನು ರ್ಯಾಪಿಡ್ ಬೈಕ್ನಲ್ಲಿ ಕಿಡ್ನಾಪ್ ಮಾಡಿ ರೂಮ್ನಲ್ಲಿ ಕೂಡಿಹಾಕಿ ಸುಲಿಗೆ ನಡೆಸಿದ ಘಟನೆ ನಗರದ ಗಿರಿನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಗಿರಿನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮನು ಎಂಬವರು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಬೈಕ್? ಅನ್ನು ಏರುತ್ತಿದ್ದಂತೆ ಚಾಲಕ ಚಾಕು ತೋರಿಸಿ ಮನುನನ್ನು ಕಿಡ್ನಾಪ್ ಮಾಡಿದ್ದಾನೆ. ನಂತರ ರೂಮ್?ಗೆ ಕರೆದೊಯ್ದು ಹಲ್ಲೆ ನಡೆಸಿ ಪೋನ್ ಪೇ ಮೂಲಕ ಮೂರು ಸಾವಿರ ರೂ. ವರ್ಗಾಯಿಸಿ ಪರಾರಿಯಾಗಿದ್ದಾನೆ.
ಪವನ್ ಎಂಬಾತ ಕಿಡ್ನಾಪ್ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆ ನಂತರ ಮನು ಗಿರಿನಗರ ಪೆÇಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ರ್ಯಾಪಿಡೋ ಬೈಕ್ನಿಂದ ಆಗುವ ಅನಾಹುತಗಳು ಹೆಚ್ಚುತ್ತಿವೆ. ಇತ್ತೀಚೆಗೆ, ಮಣಿಪುರದಲ್ಲಿ ನಡೆದ ಮಹಿಳೆಯ ಬೆತ್ತಲೆ ಮೆರವಣಿಗೆ ಖಂಡಿಸಿ ನಗರದ ಟೌನ್ಹಾಲ್ನಲ್ಲಿ ನಡೆದ ಪ್ರತಿಘಟನೆಯಲ್ಲಿ ಭಾಗಿಯಾದ ಯುವತಿಯೊಬ್ಬಳಿಗೆ ರ್ಯಾಪಿಡೋ ಬೈಕ್ ಚಾಲಕ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ನಡೆದಿತ್ತು.
ಪ್ರತಿಭಟನೆ ನಂತರ ಮನೆಗೆ ವಾಪಸ್ ಆಗಲು ಯುವತಿಯೊಬ್ಬಳು ರ್ಯಾಪಿಡೊ ಆಟೋ ಬುಕ್ ಮಾಡಿದ್ದಳು. ಇದು ಕ್ಯಾನ್ಸಲ್ ಆದ ಹಿನ್ನೆಲೆ ರ್ಯಾಪಿಡೊ ಬೈಕ್ ಬುಕ್ ಮಾಡಿದ್ದಳು. ಅದರಂತೆ ಸ್ಥಳಕ್ಕೆ ಆಗಮಿಸಿದ ಬೈಕ್ ಹತ್ತಿದ ಯುವತಿಗೆ ಚಾಲಕ ಎಲೆಕ್ಟ್ರಾನಿಕ್ ಸಿಟಿ ಪೆÇಲೀಸ್ ಠಾಣಾ ವ್ಯಾಪ್ತಿಯ ಮಾರ್ಗ ಮಧ್ಯ ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ನೀಡಿದ್ದನು. ಡ್ರಾಪ್ ಮಾಡಿದ ನಂತರ ಬೈಕ್ ಚಾಲಕ ಯುವತಿಯ ಮೊಬೈಲ್?ಗೆ ಕರೆ ಮಾಡಿ ಕಿರುಕುಳ ನೀಡಿದ್ದನು. ಈ ಬಗ್ಗೆ ನೊಂದ ಯುವತಿ ಟ್ವೀಟ್ ಮಾಡಿದ್ದಳು.