ಮೈಸೂರು: ಲವರ್ ಗೆ ಮೆಸೇಜ್ ಮಾಡಿದ ರೂಂ ಮೇಟ್ ಗೆ ಚಾಕುವಿನಿಂದ ಇರಿದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಕುವಿನಿಂದ ಇರಿದ ಆರೋಪಿ ಶ್ರೇಯಸ್ ಬಂಧನಕ್ಕಾಗಿ ವಿದ್ಯಾರಣ್ಯಪುರಂ ಠಾಣಾ ಪೆÇಲೀಸರು ಬಲೆ ಬೀಸಿದ್ದಾರೆ.ಗಾಯಗೊಂಡ ರೂಂ ಮೇಟ್ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ವರುಣಾ ಬಳಿ ಇರುವ ಗ್ರಾಮವೊಂದರ ಯುವತಿ ಪ್ರಿಯಾ ಹಾಗೂ ಶ್ರೇಯಸ್ ಪ್ರೇಮಿಗಳು.ಶ್ರೇಯಸ್ ಹಾಗೂ ಶಿವಕುಮಾರ್ ರೂಂ ಮೇಟ್ ಗಳು. ಜನತಾನಗರದ ಮನೆಯೊಂದರಲ್ಲಿ ಕೊಠಡಿ ಬಾಡಿಗೆ ಪಡೆದು ತಂಗಿದ್ದರು. ಲವರ್ ಪ್ರಯಾ ಜೊತೆ ಸಂಪರ್ಕ ಬೆಳೆಸಿದ ಶಿವಕುಮಾರ್ ಆಕೆಯ ಜೊತೆ ಚಾಟ್ ಮಾಡುತ್ತಿದ್ದ. ಈ ವಿಚಾರ ಶ್ರೇಯಸ್ ಗೆ ಗೊತ್ತಾಗಿದೆ.
ಇಬ್ಬರ ನಡುವೆ ಜಗಳ ಆಗಿದೆ. ಲವರ್ ತಂಟೆಗೆ ಬಾರದಂತೆ ಶ್ರೇಯಸ್ ಎಚ್ಚರಿಕೆ ನೀಡಿದ್ದ.ಹೀಗಿದ್ದೂ ಶಿವಕುಮಾರ್ ಆಗಾಗ ಪ್ರಿಯಾಗೆ ಮೆಸೇಜ್ ಮಾಡುತ್ತಿದ್ದ. ಇದೇ ವಿಚಾರದಲ್ಲಿ ವಿದ್ಯಾರಣ್ಯಪುರಂ ಪೆÇಲೀಸ್ ಠಾಣಾ ವ್ಯಾಪ್ತಿಯ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ಗಲಾಟೆ ನಡೆದಿದೆ.
ಈ ವೇಳೆ ಶಿವಕುಮಾರ್ ಗೆ ಶ್ರೇಯಸ್ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಶಿವಕುಮಾರ್ ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರಣ್ಯಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶ್ರೇಯಸ್ ಬಂಧನಕ್ಕೆ ಬಲೆ ಬೀಸಲಾಗಿದೆ.