ಮುಂಬೈ:- ಮುಂಬೈನ ಮೀರಾ ರೋಡ್ನಲ್ಲಿರುವ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ 56 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಪಾಲುದಾರಳನ್ನು ಕೊಂದು ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ ಭಯಾನಕ ಘಟನೆ ನಡೆದಿದೆ. ಆರೋಪಿ ವ್ಯಕ್ತಿ ತನ್ನ ಸಂಗಾತಿಯ ದೇಹವನ್ನು ಮರ ಕಡಿಯುವ ಯಂತ್ರದಿಂದ ಕತ್ತರಿಸಿದ್ದಾನೆ ಮತ್ತು ಆಕೆಯ ದೇಹದ ಭಾಗಗಳನ್ನು ಕುಕ್ಕರ್ನಲ್ಲಿ ಬೇಯಿಸಿದ್ದಾನೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.
ಆರೋಪಿಯನ್ನು ಮನೋಜ್ ಸಹಾನಿ ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ವರ್ಷಗಳಿಂದ ಗೀತಾ ನಗರ 7 ನೇ ಹಂತದ ಗೀತಾ ಆಕಾಶ್ ದೀಪ್ ಕಟ್ಟಡದ 704 ಫ್ಲಾಟ್ನಲ್ಲಿ ವಾಸವಿದ್ದರು. ಇದೇ ಸ್ಥಳದಲ್ಲಿ ಸರಸ್ವತಿ ವೈದ್ಯ (36) ಎಂಬುವವರೊಂದಿಗೆ ಮನೋಜ್ ಸಹಾನಿ ವಾಸವಾಗಿದ್ದರು. ಮನೋಜ್ ಬೋರಿವಾಲಿಯಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದಾರೆ.
ಇಬ್ಬರು ವಾಸವಿದ್ದ ಫ್ಲಾಟ್ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಬುಧವಾರ ಸಂಜೆ (ಜೂನ್ 7) ಕಟ್ಟಡದ ನಿವಾಸಿಗಳಿಂದ ನಯಾನಗರ ಠಾಣೆಗೆ ಕರೆ ಬಂದಿತ್ತು. ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೆÇಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹದ ಭಾಗಗಳು ಪತ್ತೆಯಾಗಿವೆ. ಮೂರ್ನಾಲ್ಕು ದಿನಗಳ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿದ ಪೆÇಲೀಸ್ ತಂಡವು ಮಹಿಳೆಯ ಕೊಳೆತ ದೇಹವನ್ನು ಕಂಡು ಶಾಕ್ ಆಗಿದೆ. ಮಹಿಳೆಯ ದೇಹವನ್ನು ಹಲವಾರು ಭಾಗಗಳಾಗಿ ತುಂಡಾಗಿ ಕತ್ತರಿಸಿರುವುದು ಕಂಡು ಬಂದಿದೆ.
“ಮನೋಜ್ ಸಹಾನಿ ಮತ್ತು ಸರಸ್ವತಿ ವೈದ್ಯ ಅವರು ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದರು. ಇಬ್ಬರೂ ಗೀತಾ ಆಕಾಶ್ ದೀಪ್ ಬಿಲ್ಡಿಂಗ್ನಲ್ಲಿ ವಾಸಿಸುತ್ತಿದ್ದರು. ಕೆಲವು ವಿಷಯಕ್ಕೆ ದಂಪತಿಗಳು ಜಗಳವಾಡಿದ್ದರು. ನಂತರ ಮಹಿಳೆಯನ್ನು ಆಕೆಯ ಸಂಗಾತಿ ಕೊಲೆ ಮಾಡಿದ್ದಾನೆ. ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ. ನಾವು ಮನೆಗೆ ತಲುಪಿ ಬಾಗಿಲು ತೆರೆದಾಗ, ಇದು ಕೊಲೆಯ ಪ್ರಕರಣ ಎಂದು ನಮಗೆ ಅರ್ಥವಾಯಿತು. ಶಂಕಿತ ಸಾಕ್ಷ್ಯವನ್ನು ಮರೆಮಾಡಲು ಪ್ರಯತ್ನಿಸಿದನು. ಆದರೆ ಕೊನೆಗೆ ಆತನನ್ನು ಬಂಧಿಸಲಾಯಿತಿ” ಎಂದು ಪೆÇಲೀಸ್ ಉಪ ಆಯುಕ್ತ (ವಲಯ 1) ಜಯಂತ್ ಬಜ್ಬಲೆ ಸ್ಥಳೀಯ ಸುದ್ದಿವಾಹಿನಿಗಳಿಗೆ ತಿಳಿಸಿದ್ದಾರೆ.
ಕೊಲೆಯ ಹಿಂದಿನ ಉದ್ದೇಶವನ್ನು ತಿಳಿಯಲು ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ. ಪೆÇಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಆಫ್ತಾಬ್ ಪೂನಾವಾಲಾ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ತನ್ನ ಲಿವ್-ಇನ್-ಪಾರ್ಟ್ನರ್ ಶ್ರದ್ಧಾ ವಾಕರ್ನನ್ನು ಹತ್ಯೆ ಮಾಡಿದ್ದರು. ಅವನು ಅವಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ಮನೆಯಲ್ಲಿ ಸುಮಾರು ಮೂರು ವಾರಗಳ ಕಾಲ ಫ್ರಿಜ್ನಲ್ಲಿ ಇರಿಸಿದ್ದನು. ಬಳಿಕ ಅದನ್ನು ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಅವುಗಳನ್ನು ಅನುಮಾನ ಬಾರದಂತೆ ಎಸೆದಿದ್ದನು.
ದೆಹಲಿ ಪೆÇಲೀಸರು ಜನವರಿ 24 ರಂದು ಪ್ರಕರಣದಲ್ಲಿ 6,629 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದರು. ದೆಹಲಿಯ ಸಾಕೇತ್ ನ್ಯಾಯಾಲಯವು ಅಫ್ತಾಬ್ ಪೂನಾವಾಲಾ ವಿರುದ್ಧ ಆರೋಪಗಳನ್ನು ರೂಪಿಸಿದೆ. ಈ ಪ್ರಕರಣ ಇನ್ನೂ ನ್ಯಾಯಾಲಯದ ತನಿಖೆಯಲ್ಲಿದೆ.