ಚಾಮರಾಜನಗರ:- ಲೋಕಸಭಾಚುನಾವಣೆಘೋಷಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆ ಬಿಜೆಪಿ ಟಿಕೆಟ್ ಪಡೆಯಲು ಪೈಪೋಟಿ ಆರಂಭವಾಗಿದೆ. ಟಿಕೆಟ್ರೇಸ್ ನಲ್ಲಿ ನಟ, ವೈದ್ಯ ಹಾಗೂ ನಿವೃತ್ತಐಎಎಸ್ ಅಧಿಕಾರಿಗಳು ಇರುವುದು ಗಮನ ಸೆಳೆಯುತ್ತಿದೆ.
ಕಳೆದ ಲೋಕಸಭಾಚುನಾವಣೆ ವೇಳೆಯು ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟು ಮನೆ ಮಾಡಿಓಡಾಡುತ್ತಿದ್ದ ಕೆ. ಶಿವರಾಂ, ಬಿಗ್ ಬಾಸ್ ಹಾಗೂ ನಟನೆ ಮೂಲಕ ಗುರುತಿಸಿಕೊಂಡಿರುವ ಅರ್ಜುನ್ರಮೇಶ್, ರಾಜೀವ್ಗಾಂಧಿ ವಿವಿಯಲ್ಲಿ ಪ್ರಾಧ್ಯಾಪಕ ಹಾಗೂ ಹಾಲಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅಳಿಯ ಡಾ. ಮೋಹನ್ಕುಮಾರ್ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಟಿ. ನರಸೀಪುರ ಪುರಸಭೆ ಸದಸ್ಯಆಗಿರುವ ನಾನು ಕಳೆದ 15 ವರ್ಷಗಳಿಂದ ಬಿಜೆಪಿ ಸಕ್ರಿಯಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಮುಂಬರುವ ಲೋಕಸಭಾಚುನಾವಣೆಯಲ್ಲಿ ಬಿಜೆಪಿ ಯುವಕರಿಗೆಆದ್ಯತೆ ನೀಡಲಿದೆ ಎಂಬ ವಿಶ್ವಾಸವಿದೆ. ಚಾಮರಾಜನಗರ ಹಿಂದುಳಿದ ಜಿಲ್ಲೆಅಂತಾರೆ. ಜಿಲ್ಲೆಯಲ್ಲಿಅಭಿವೃದ್ಧಿ ಮಾಡುವುದುಜನಪ್ರತಿನಿಧಿಗಳ ಕರ್ತವ್ಯ. ಆ ನಿಟ್ಟಿನಲ್ಲಿ ನನ್ನದೇಯಾದ ಕೆಲವು ಯೋಜನೆಗಳಿವೆ. ಆದ್ದರಿಂದ ಈ ಬಾರಿಟಿಕೆಟ್ ಕೇಳಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಬಿಜೆಪಿ ವರಿಷ್ಠರುಅರ್ಹರಿಗೆಟಿಕೆಟ್ ನೀಡಬೇಕು. ಕ್ಷೇತ್ರಕ್ಕೆ ಪ್ರವಾಸ ಮಾಡುವರೀತಿಯಲ್ಲಿ ಬರುವ ನಾಯಕರಿಗೆ ಮನ್ನಣೆ ನೀಡಬಾರದು. ಪ್ರಧಾನಿ ಮೋದಿ ಮತ್ತೊಮ್ಮೆ ಗೆಲುವಿನ ನಗೆ ಬರಬೇಕೆಂದರೆಅರ್ಹರಿಗೆಟಿಕೆಟ್ ನೀಡಬೇಕು” ಎಂದು ನಟಅರ್ಜುನ್ರಮೇಶ್ ಮನವಿ ಮಾಡಿದ್ದಾರೆ.
ಸಂಘ ಪರಿವಾರದಜೊತೆಯಲ್ಲಿ ಸಂಸದರ ಅಳಿಯ: ಹಾಲಿ ಸಂಸದ ವಿ. ಶ್ರೀನಿವಾಸಪ್ರಸಾದ್ ಅಳಿಯ ಆಗಿರುವ ವೈದ್ಯಡಾ. ಮೋಹನ್ಕುಮಾರ್ ಸದ್ದಿಲ್ಲದೇಜಿಲ್ಲೆಯ ಬಿಜೆಪಿ ಮುಖಂಡರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚಾಮರಾಜನಗರದಲ್ಲಿತಮ್ಮಕಚೇರಿಯನ್ನುತೆರೆದಿರುವಡಾ. ಮೋಹನ್ಕುಮಾರ್ ಸಂಘ ಪರಿವಾರದಜೊತೆಉತ್ತಮ ವಿಶ್ವಾಸ ಹೊಂದಿದ್ದಾರೆ.
ಕಳೆದ ಬಾರಿಯೂಟಿಕೆಟ್ಆಕಾಂಕ್ಷಿಯಾಗಿದ್ದೆ. ಈ ಬಾರಿಯೂಟಿಕೆಟ್ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಸಿಗುವವರೆಗೂ ನಾನು ಯಾವಾಗಲೂ ಬಿಜೆಪಿ ಟಿಕೆಟ್ಆಕಾಂಕ್ಷಿಎಂದು ಮೋಹನ್ಕುಮಾರ್ತಮ್ಮಅಭಿಪ್ರಾಯ ಪರಿವಾರ ಹಾಗೂ ವ್ಯಕ್ತಪಡಿಸಿದ್ದಾರೆ. ಸಂಸದರ ಅಳಿಯರಾಗಿರುವ ಕಾರಣಕ್ಕೆಟಿಕೆಟ್ ಲಾಬಿ ಇವರದ್ದು ಜೋರಾಗಿದೆ
ಕಾಲಿಗೆ ಚಕ್ರಕಟ್ಟಿಕೊಂಡು ಸುತ್ತುತ್ತಿತುವ ನಿವೃತ್ತಅಧಿಕಾರಿ: ಕಳೆದಚುನಾವಣೆಯಿಂದಲೂಚಾಮರಾಜನಗರ ಲೋಕಸಭಾಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಹಾತೊರೆಯುತ್ತಿರುವ ನಿವೃತ್ತಐಎಎಸ್ಅಧಿಕಾರಿ ಕೆ. ಶಿವರಾಂ, ಈ ಬಾರಿಟಿಕೆಟ್ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಕಾಲಿಗೆ ಚಕ್ರಕಟ್ಟಿಕೊಂಡಂತೆಕ್ಷೇತ್ರದಲ್ಲಿ ಶಿವರಾಂ ಸುತ್ತುತ್ತಿದ್ದು ಈಗಾಗಲೇ 8 ವಿಧಾನಸಭಾಕ್ಷೇತ್ರದಲ್ಲೂ ಮುಖಂಡರುಗಳನ್ನು ಭೇಟಿಯಾಗಿದ್ದಾರೆ. ಈ ಬಾರಿಟಿಕೆಟ್ ಸಿಗುವ ಭರವಸೆಇದೆ. ಜೊತೆಗೂ ನಾನೇ ಗೆಲ್ಲುತ್ತೇನೆಎಂದು ವಿಶ್ವಾಸವನ್ನು ಹೊರಹಾಕಿದ್ದಾರೆ. ಇನ್ನು, ಕೋಟೆ ಎಂ. ಶಿವಣ್ಣ ಕೂಡಟಿಕೆಟ್ಆಕಾಂಕ್ಷಿಆಗಿದ್ದು, ಬಿಜೆಪಿ ಆಂತರಿಕ ಸರ್ವೇಯನ್ನು ಮಾಡಿಸುತ್ತಿದೆ. ಲೋಕಸಭೆಚುನಾವಣೆಯ ಕಾವು ಈಗಿಂದಲೇ ಹೆಚ್ಚಾಗುತ್ತಿದೆ.