ಮೈಸೂರು:- ಮೈಸೂರಿನ ವರುಣ ಕ್ಷೇತ್ರದಲ್ಲಿ ಕಾಂಗ್ರೆಸಿಗರ ಗೂಂಡಾಗಿರಿ ಮುಂದುವರಿದಿದೆ.
ವರುಣ ಕ್ಷೇತ್ರ ವ್ಯಾಪ್ತಿಯ ಟಿ. ನರಸೀಪುರ ಕಸಬಾ ಹೋಬಳಿ ಬೈರಾಪುರ ಬಡಾವಣೆ ಬೂತ್ ನಂಬರ್ 109ರಲ್ಲಿ ನಮ್ಮ ಭಾರತೀಯ ಜನತಾ ಪಾರ್ಟಿಯ ಬೂತ್ ಅಧ್ಯಕ್ಷ ದಿಲೀಪ್ ಕುಮಾರ್ ಮೇಲೆ ಕಾಂಗ್ರೆಸ್ಸಿಗರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ದೊಣ್ಣೆಯಿಂದ ದೀಲಿಪ್ ಅವರ ಬುರುಡೆಗೆ ಹೊಡೆಯಲಾಗಿದೆ.
ಕ್ಷುಲ್ಲಕ ಕಾರಣವನ್ನೆ ನೆಪ ಮಾಡಿಕೊಂಡು ಕಾಂಗ್ರೆಸಿಗರು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ.
ಟಿ. ನರಸೀಪುರ ಪೆÇಲೀಸರಿಗೆ ದೂರು ನೀಡಲಾಗಿದೆ. ಹಲ್ಲೆಯಾಗಿದೆ ದಿಲೀಪ್ ಕುಮಾರ್ ಅವರು ಟಿ. ನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.