ಮೈಸೂರು: ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆ ವಿಭಾಗದ ನಿರ್ದೇಶಕರಾದ ಡಾ.ಮೀರಾ ರವರು ವಿದ್ಯಾರ್ಥಿ ತಾರತಮ್ಯವನ್ನು ಖಂಡಿಸಿ ಅಭಿವೃದ್ಧಿ ಅಧ್ಯಯನ ಸಂಸ್ಥೆ ವಿಭಾಗದ ವಿದ್ಯಾರ್ಥಿ ಮುಖಂಡ ಮನೋಜ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಮಾನಸಗಂಗೋತ್ರಿ ಆವರಣದಲ್ಲಿರುವ ವಿಭಾಗದ ಮುಂಭಾಗದಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿಗಳು ಅಂಬೇಡ್ಕರ್ ಪರಿನಿರ್ವಾಣ ಹಾಗೂ ಸಂವಿಧಾನ ದಿನ ಆಚರಣೆ ಮಾಡಿಲ್ಲ, ಸಂವಿಧಾನ ಪೀಠಿಕೆ ಓದಿಲ್ಲ ಹಾಗೂ ವಿದ್ಯಾಭ್ಯಾಸಕ್ಕೆ ಅನುಕೂಲಕರ ತರಗತಿಯ ವೇಳಾಪಟ್ಟಿಯನ್ನು ಸಿದ್ದಪಡಿಸಿಲ್ಲ. ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯ ಕ್ರಮ ಕೈಗೊಳ್ಳದಿದ್ದರೆ ನಾಳೆ ಮಾನಸ ಗಂಗೋತ್ರಿಯ ಆವರಣದಲ್ಲಿರುವ ಕುವೆಂಪು ಪ್ರತಿಮೆಯ ಬಳಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪರಂಜ್ಯೋತಿ, ಸಚಿನ್, ಹುಸೇಯನ್ ಪಾಷ, ಅಭಿ ಸೇರಿ ಹಲವರು ಭಾಗವಹಿಸಿದ್ದರು.
ವಿವಿ ಅಭಿವೃದ್ಧಿ ಸಂಸ್ಥೆ ನಿರ್ದೇಶಕರಿಂದ ತಾರತಾಮ್ಯಕ್ಕೆ ಖಂಡನೆ
![](https://stateroute.in/wp-content/uploads/no-image.jpg)