ಕ್ಯಾಂಡಿ (ಶ್ರೀಲಂಕಾ) : ಮುಂಬರುವ ಐಸಿಸಿ ಒಡಿಐ ವಿಶ್ವಕಪ್ 2023 ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟ ಮಾಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಪ್ಟೆಂಬರ್ 5ರಂದು (ಮಂಗಳವಾರ) ಸಭೆ ಸೇರಿದ್ದು, ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ ಸಾರಥ್ಯದ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ನಿರೀಕ್ಷೆಯಂತೆ ಸ್ಟಾರ್ ಬ್ಯಾಟರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಸಾರಥ್ಯದಲ್ಲಿ ಟೀಮ್ ಇಂಡಿಯಾ ಆಯ್ಕೆ ಸಮಿತಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ರಚನೆ ಮಾಡಿದೆ.
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ
01. ರೋಹಿತ್ ಶರ್ಮಾ (ನಾಯಕ/ ಬ್ಯಾಟರ್)
02. ಶುಭಮನ್ ಗಿಲ್ (ಬ್ಯಾಟರ್)
03. ವಿರಾಟ್ ಕೊಹ್ಲಿ (ಬ್ಯಾಟರ್)
04. ಶ್ರೇಯಸ್ ಅಯ್ಯರ್ (ಬ್ಯಾಟರ್)
05. ಕೆ.ಎಲ್ ರಾಹುಲ್ (ಬ್ಯಾಟರ್/ಕೀಪರ್)
06. ಇಶಾನ್ ಕಿಶನ್ (ಬ್ಯಾಟರ್/ಕೀಪರ್)
07. ಹಾರ್ದಿಕ್ ಪಾಂಡ್ಯ (ಆಲ್ರೌಂಡರ್/ ವೈಸ್ ಕ್ಯಾಪ್ಟನ್)
08. ರವೀಂದ್ರ ಜಡೇಜಾ (ಆಲ್ರೌಂಡರ್)
09. ಶಾರ್ದುಲ್ ಠಾಕೂರ್ (ಆಲ್ರೌಂಡರ್)
10. ಕುಲ್ದೀಪ್ ಯಾದವ್ (ಚೈನಾಮನ್ ಸ್ಪಿನ್ನರ್)
11. ಮೊಹಮ್ಮದ್ ಶಮಿ (ಬಲಗೈ ವೇಗಿ)
12. ಮೊಹಮ್ಮದ್ ಸಿರಾಜ್ (ಬಲಗೈ ವೇಗಿ)
13. ಜಸ್ಪ್ರೀತ್ ಬುಮ್ರಾ (ಬಲಗೈ ವೇಗಿ)
14. ಅಕ್ಷರ್ ಪಟೇಲ್ (ಆಲ್ರೌಂಡರ್)
15. ಸೂರ್ಯಕುಮಾರ್ ಯಾದವ್ (ಬ್ಯಾಟರ್)
ಬ್ಯಾಕಪ್ ಆಟಗಾರರು (ಸಂಭಾವ್ಯ)
ಸAಜು ಸ್ಯಾಮ್ಸನ್, ಪ್ರಸಿಧ್ ಕೃಷ್ಣ, ತಿಲಕ್ ವರ್ಮಾ, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್
ಅಧಿಕೃತ ಬ್ಯಾಕಪ್ ಆಟಗಾರರು ಇಲ್ಲ
ಅಂದಹಾಗೆ ಟೂರ್ನಿಗೆ ಅಧಿಕೃತವಾಗಿ ಯಾವುದೇ ಬ್ಯಾಕಪ್ ಆಟಗಾರರನ್ನು ಆಯ್ಕೆ ಮಾಡಲಾಗಿಲ್ಲ. ಮೇಲ್ನೋಟಕ್ಕೆ ಸಂಜು ಸ್ಯಾಮ್ಸನ್, ಪ್ರಸಿಧ್ ಕೃಷ್ಣ, ತಿಲಕ್ ವರ್ಮಾ, ಯುಜ್ವೇಂದ್ರ ಚಹಲ್ ಮತ್ತು ಆರ್ ಅಶ್ವಿನ್ ಅವರನ್ನು ಬ್ಯಾಕಪ್ ಪಟ್ಟಿಗೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ. ಎಷ್ಯಾ ಕಪ್ಗೆ ಆಯ್ಕೆಯಾಗಿದ್ದ ತಿಲಕ್ ವರ್ಮಾ ಮತ್ತು ಕನ್ನಡಿಗ ಪ್ರಸಿಧ್ ಕೃಷ್ಣ ವಿಶ್ವಕಪ್ಗೆ ಆಯ್ಕೆ ಮಾಡಲಾದ 15 ಆಟಗಾರರ ತಂದಿAದ ಹೊರಬಿದ್ದಿದ್ದಾರೆ.
ಕೆಎಲ್ ರಾಹುಲ್ ಸಂಪೂರ್ಣ ಫಿಟ್
ಏಷ್ಯಾ ಕಪ್ 2023 ಟೂರ್ನಿಯಲ್ಲಿ ಫಿಟ್ನೆಸ್ ಸಮಸ್ಯೆ ಎದುರಿಸಿದ್ದ ಕೆಎಲ್ ರಾಹುಲ್, ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆದರೆ, ವಿಶ್ವಕಪ್ ಆಡಲು ರಾಹುಲ್ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೇಳಿದ್ದಾರೆ.
“ಕೆಎಲ್ ರಾಹುಲ್ ಅವರಂತಹ ಅನುಭವಿ ಆಟಗಾರರ ಸಂಪೂರ್ಣ ಫಿಟ್ ಆಗಿರುವುದು ಭಾರತ ತಂಡದ ಪಾಲಿಗೆ ಶುಭಸುದ್ದಿ. ದುರದೃಷ್ಟವಶಾತ್ ಸಣ್ಣ ಪ್ರಮಾಣದ ಗಾಯದ ಸಮಸ್ಯೆ ಕಾರಣ ಅವರು ಏಷ್ಯಾ ಕಪ್ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಬೆಂಗಳೂರಿನ ರಾಷ್ಟಿçÃಯ ಕ್ರಿಕೆಟ್ ಅಕಾಡೆಮಿಯಲ್ಲಿ ಅವರ ಚೇತರಿಕೆ ಅದ್ಭುತವಾಗಿದೆ. ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ, 50 ಓವರ್ಗಳ ವರೆಗೆ ವಿಕೆಟ್ಕೀಪಿಂಗ್ ಕೂಡ ಮಾಡಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಅವರನ್ನು ವಿಶ್ವಕಪ್ಗೆ ಆಯ್ಕೆ ಮಾಡಲಾಗಿದೆ,” ಎಂದಿದ್ದಾರೆ.
ಯಾವುದೇ ಒತ್ತಡವಿಲ್ಲ: ರೋಹಿತ್
ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಬಗ್ಗೆ ಒತ್ತಡವಿದೆಯೇ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಾಯಕ ರೋಹಿತ್ ಶರ್ಮಾ, “ಯಾವುದೇ ಒತ್ತಡ ಇಲ್ಲ, ನಾವು ಕಟ್ಟಿರುವ ಬಲಿಷ್ಠ ತಂಡದ ಮೇಲೆ ಆತ್ಮವಿಶ್ವಾಸವಿದೆ,” ಎಂದು ಹೇಳಿದ್ದಾರೆ.