ಮೈಸೂರು: ಮಂಡಿ ಮೊಹಲ್ಲಾ ಹಿತರಕ್ಷಣಾ ವೇದಿಕೆ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ಮುಂಭಾಗ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆನಂತರ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್
ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲ ವರ್ಗದ ಜನರಿಗೂ ಸಮಾನತೆ ಕಲ್ಪಿಸಿದರು. ಅಲ್ಲದೇ ಆಯಾ ಸಮಾಜದವರ ಕಾಯಕಕ್ಕೆ ಪ್ರೋತ್ಸಾಹ ನೀಡುವ ಮೂಲಕ ಕಾಯಕದ ಮಹತ್ವ ಸಾರಿದರು’ ಎಂದು ಅವರು ಹೇಳಿದರು.
ನಂತರ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ರಾಜ್ಯ ನಿರ್ದೇಶಕರಾದ ರೇಣುಕಾ ರಾಜ್ ಮಾತನಾಡಿ ‘ಪ್ರತಿಯೊಬ್ಬರು ದುರಾಲೋಚನೆ, ಕೆಟ್ಟ ಕೆಲಸಗಳನ್ನು ಮಾಡದೇ ಪ್ರಾಮಾಣಿಕ ನಿಷ್ಠೆಯಿಂದ ಕಾಯಕ ಮಾಡಿ ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ ‘ಬಸವಣ್ಣನವರು ಕಾಯಕ ಮತ್ತು ದಾಸೋಹದಂತಹ ಪರಿಕಲ್ಪನೆ ಹುಟ್ಟು ಹಾಕುವ ಮೂಲಕ ವಚನ ಚಳುವಳಿಯಂತಹ ಮಹಾನ್ ಕ್ರಾಂತಿಯನ್ನು ಸೃಷ್ಟಿಸಿದರು’ ಎಂದರು.
ಬಿಜೆಪಿ ಮುಖಂಡರಾದ ಮಂಜುನಾಥ್ ಮಾತನಾಡಿ ‘ಬಸವ ಜಯಂತಿ ಸಾಂಪ್ರದಾಯಿಕ ಆಚರಣೆಯಾಗಬಾರದು. ಬಸವ ಜಯಂತಿ ಸಾರ್ಥಕಗೊಳ್ಳಬೇಕಾದರೆ ಸಮ ಸಮಾಜ ನಿರ್ಮಾಣಕ್ಕೆ ನಮ್ಮನ್ನು ನಾವು ಮೊದಲು ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಬಿಜೆಪಿ ಮುಖಂಡರಾದ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಯ ರಾಜ್ಯ ನಿರ್ದೇಶಕರಾದ ರೇಣುಕಾ ರಾಜ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹಾಗೂ ಮುತ್ತಣ್ಣ, ಕೇಬಲ್ ವಿಜಿ, ಸೂರಜ್, ಸದಾಶಿವ ,ಚಂದ್ರು, ಕಿರಣ್, ಆನಂದ್, ಕಾವೇರಿ, ಎಸ್ ಎನ್ ರಾಜೇಶ್, ಗಣೇಶ್, ಹಾಗೂ ಇನ್ನಿತರರು ಭಾಗವಹಿಸಿದ್ದರು