ಬೆಂಗಳೂರು: ‘ವೀಕೆಂಡ್ ವಿತ್ ರಮೇಶ್’ ಸೀಸನ್ 5 ವೀಕ್ಷಕರ ತನ್ನ ಸೆಳೆಯುವಲ್ಲಿ ಮತ್ತೆ ಯಶಸ್ವಿಯಾಗಿದೆ. ಈಗಾಗಲೇ ಈ ಸೀಸನ್ನಲ್ಲಿ ಇಬ್ಬರು ಅತಿಥಿಗಳು ಸಾಧಕರ ಸೀಟ್ನಲ್ಲಿ ಆಸೀನರಾಗಿದ್ದಾರೆ. ಮೊದಲ ಎಪಿಸೋಡ್ನಲ್ಲಿ ಮೋಹಕತಾರೆ ರಮ್ಯಾ. ಎರಡನೇ ಎಪಿಸೋಡ್ನಲ್ಲಿ ಪ್ರಭುದೇವ ಅತಿಥಿಗಳಾಗಿ ಆಗಮಿಸಿದ್ದರು.
ಬ್ಯಾಕ್ ಟು ಬ್ಯಾಕ್ ಇಬ್ಬರು ಗಣ್ಯರು ಚಿತ್ರರಂಗಕ್ಕೆ ಸಂಬಂಧಿಸಿದವರೇ ಆಗಿದ್ದರು. ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮಕ್ಕೆ ಮೋಹಕತಾರೆಯನ್ನು ಕರೆದುಕೊಂಡು ಬರಬೇಕು ಅನ್ನೋದು ಬಹಳ ದಿನದ ಬೇಡಿಕೆಯಾಗಿತ್ತು. ಹಾಗೇ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಎಪಿಸೋಡ್ ಕನ್ನಡಿಗರ ಮೆಚ್ಚುಗೆ ಗಳಿಸಿತ್ತು.
ಈಗ ಮೂರನೇ ವಾರ ‘ವೀಕೆಂಡ್ ವಿತ್ ರಮೇಶ್’ ವೇದಿಕೆಯಲ್ಲಿ ಇಬ್ಬರು ಅತಿಥಿಗಳು ಆಗಮಿಸುತ್ತಿದ್ದಾರೆ. ವಿಶೇಷ ಅಂದರೆ, ಇವರಲ್ಲಿ ಒಬ್ಬರು ಚಿತ್ರರಂಗಕ್ಕೆ ಸಂಬಂಧಿಸಿದವರು ಅಲ್ಲ. ಹೌದು, ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ. ಮಂಜುನಾಥ್ ಒಬ್ಬರಾದರೆ, ಇನ್ನೊಬ್ಬರು ಹಿರಿಯ ನಟ ದತ್ತಣ್ಣ ಸಾಧಕರ ಸೀಟ್ನಲ್ಲಿ ಕೂರುತ್ತಿದ್ದಾರೆ. ಇವರ ಸಾಧನೆಯ ಹಾದಿ ಹೀಗಿದೆ.
ಜಯದೇವ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್
ಡಾ. ಸಿ ಎನ್ ಮಂಜುನಾಥ್ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರು. ಕಳೆದ ಹಲವು ವರ್ಷಗಳಿಂದ ಇದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾಗಿದ್ದು, ವಿಶ್ವದರ್ಜೆಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಡಾ.ಮಂಜುನಾಥ್ ಪ್ರಮುಖ ಪಾತ್ರವಹಿಸಿದ್ದಾರೆ.
ಸಮಾಜದ ಎಲ್ಲಾ ವರ್ಗ ಜನರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹೃದ್ರೋಗ ಚಿಕಿತ್ಸೆ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮೊದಲು ಪಾವತಿ ಬಳಿಕ ಚಿಕಿತ್ಸೆ ಅನ್ನುವ ಆಸ್ಪತ್ರೆಗಳ ಮಧ್ಯೆ “ಚಿಕಿತ್ಸೆ ಮೊದಲು ಪಾವತಿ ನಂತರ” ಎಂಬ ಪರಿಕಲ್ಪನೆ ಅದೆಷ್ಟೋ ರೋಗಿನ ಜೀವ ಉಳಿಸಿದೆ. ಇದರ ಹಿಂದಿನ ರೂವಾರಿ ಡಾ. ಸಿ ಎನ್ ಮಂಜುನಾಥ್. ಇವರನ್ನು ವೀಕೆಂಡ್ ವಿತ್ ರಮೇಶ್ ಸಾಧಕ ಸೀಟ್ನಲ್ಲಿ ಕೂತು ತಮ್ಮ ಬದುಕಿನ ಅನಾವರಣ ಮಾಡಲಿದ್ದಾರೆ.
ಹಿರಿಯ ನಟ ದತ್ತಣ್ಣ
ಇದೇ ವಾರ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಮತ್ತೊಬ್ಬ ಅತಿಥಿಯನ್ನು ಆಗಮನ ಆಗುತ್ತಿದೆ. ಅವರೇ ಕನ್ನಡ ಚಿತ್ರರಂಗದ ಹಿರಿಯ ನಟ ದತ್ತಣ್ಣ. ರಮ್ಯಾ, ಪ್ರಭುದೇವ ಅವರಂತೇ ದತ್ತಣ್ಣ ಅವರನ್ನು ‘ವೀಕೆಂಡ್ ವಿತ್ ರಮೇಶ್’ ಕರೆದುಕೊಂಡು ಬರಬೇಕು ವೀಕ್ಷಕರು ಅಭಿಪ್ರಾಯ ತಿಳಿಸಿದ್ದರು. ಅದರಂತೆಯೇ ಈ ವಾರದ ನಾಲ್ಕನೇ ಅತಿಥಿಯಾಗಿ ಹಿರಿಯ ನಟ ದತ್ತಣ್ಣ ಆಗಮಿಸುತ್ತಿದ್ದಾರೆ.
ಹಿರಿಯ ನಟ ದತ್ತಣ್ಣ ಜರ್ನಿಯನ್ನು ಎರಡು ಭಾಗಗಳಾಗಿ ವಿಂಗಡನೆ ಮಾಡಬಹುದು. ಸಿನಿಮಾಗೆ ಎಂಟ್ರಿ ಕೊಡುವುದಕ್ಕಿಂತ ಮುನ್ನ ಒಂದು ಜರ್ನಿಯಾದರೆ, ಸಿನಿಮಾಗೆ ಪಾದಾರ್ಪಣೆ ಮಾಡಿದ ನಂತರದ ಜರ್ನಿ ಮತ್ತೊಂದು. ಈ ಎರಡೂ ಜರ್ನಿಯ ಅನಾವರಣ ಇದೇ ಭಾನುವಾರ(ಏಪ್ರಿಲ್ 9) ಆಗಲಿದೆ.
ವೀಕ್ಷಕರ ಬಹು ಬೇಡಿಕೆಯ ಮೇರೆಗೆ ದತ್ತಣ್ಣ ಅವರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆಸಲಾಗುತ್ತಿದೆ. ಈ ವಾರ ಸಿನಿಮಾ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲೂ ಸಾಧನೆ ಮಾಡಿರೋ ಒಬ್ಬ ಅತಿಥಿಯ ಇಂಟ್ರೆಸ್ಟಿಂಗ್ ಜರ್ನಿಯನ್ನು ವೀಕೆಂಡ್ನಲ್ಲಿ ವೀಕ್ಷಕರು ವೀಕ್ಷಿಸಬಹುದು.