ಮೇಲುಕೋಟೆ : ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಭಾನುವಾರ ವೈರಮುಡಿ ಬ್ರಹ್ಮೋತ್ಸವ ಪ್ರಯುಕ್ತ ಭಾನುವಾರ ರಾತ್ರಿ ಪ್ರಹ್ಲಾದಪರಿಪಾಲನೋತ್ಸವ ವೈಭದಿಂದ ನಡೆಯಿತು. ಚೆಲುವನಾರಾಯಣಸ್ವಾಮಿ ನರಸಿಂಹಾವತಾರ ತಾಳಿ ಹಿರಣ್ಯಕಶುಪಿವಿನ ಸಂಹಾರ ಮಾಡಿ ಪ್ರಹ್ಲಾದದನ್ನು ಅನುಗ್ರಹಿಸಿದ ಮಾದರಿ ಉತ್ಸವ ಸಡಗರ ಸಂಭ್ರಮದಿಂದ ನೆರವೇರಿತು.
ಇಡರಾತ್ರಿ 4 ಗಂಟೆಯವೇಳೆ ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಯತೀಶ್ ವೈರಮುಡಿ ಕಿರೀಟವನ್ನು ದೀಪದ ಬೆಳಕಿನಲ್ಲಿ ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರ ಪೆಟ್ಟಿಗೆಯಲ್ಲಿಟ್ಟು ಮೊಹರು ಮಾಡಿದ ನಂತರ ದೇವಾಲಯದ ಬೊಕ್ಕಸದಲ್ಲಿ ಇಡಲಾಯಿತು. ಭಾನುವಾರ ಬೆಳಿಗ್ಗೆ 10ಗಂಟೆಗೆ ಸ್ಥಾನೀಕರು, ಅರ್ಚಕರ ಮಠಮುದ್ರೆಯವರ ಸಮಕ್ಷಮ ಪೆಟ್ಟಿಗೆಯ ಮೊಹರನ್ನು ಪರಿಶೀಲಿಸಿ ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎಸ್ ಮಹೇಶ್ ಮೂಲಕ ಜಿಲ್ಲಾ ಖಜಾನೆಗೆ ಪೊಲೀಸ್ ಭದ್ರತೆಯಲ್ಲಿ ಮರಳಿಕಳುಹಿಸಿಕೊಡಲಾಯಿತು. ಈ ವೇಳೆ ಪ್ರಥಮ ಸ್ಥಾನೀಕರಾದ ಕರಗಂ ನಾರಾಯಣ ಅಯ್ಯಂಗಾರ್, ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ಗುರೂಜಿ, ಸಜ್ಜೆಹಟ್ಟಿ ತಿರುನಾರಾಯಣಯ್ಯಂಗಾರ್, ಮುಕುಂದನ್, ಸಂಪತ್ಕುಮಾರನ್, ಶ್ರೀರಾಮನ್ ಪರಿಚಾರಕ ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು ಇದಕ್ಕೂ ಮುನ್ನ ವಾಹನೋತ್ಸವಮಂಟಪದಲ್ಲಿ ವೈರಮುಡಿ ಉತ್ಸವ ಮುಗಿಯುತ್ತಿದ್ದಂತೆ ರಾಜಮುಡಿ ಕಿರೀಟಧರಿಸಿ ಉತ್ಸವ ನೆರವೇರಿಸಲಾಯಿತು ನಂತರ ಪಡಿಯೇತ್ತದೊಂದಿಗೆ ವೈರಮುಡಿ ಉತ್ಸವ ದಿನದ ಕಾರ್ಯಕ್ರಮ ಬೆಳಗಿನ 6ಗಂಟೆಗೆ ಮುಕ್ತಾಯವಾದವು
ಯಶಸ್ವಿ ವೈರಮುಡಿ ಜಿಲ್ಲಾಧಿಕಾರಿ ಕೃತಜ್ಞತೆ (ಬಾಕ್ಸ್)
—————–
ಲಕ್ಷಾಂತರುಭಕ್ತರು ಆಗಮಿಸಿದ್ದ 2023ರ ವೈರಮುಡಿಉತ್ಸವ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಶ್ರೀ ಚೆಲುವನಾರಾಯಣಸ್ವಾಮಿ ದೇಗುಲದ ಸ್ಥಾನೀಕರು, ಅರ್ಚಕರು ಕೈಂಕರ್ಯಪರು ಹಾಗೂ ದೇಗುಲದ ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ ಜಿಲ್ಲಾಡಳಿತದ ನಿರ್ದೇಶನದಂತೆ ಉತ್ಸವದ ಯಶಸ್ಸಿಗೆ ಶ್ರಮಿಸಿದ ಪೊಲೀಸ್, ಕಂದಾಯ, ಲೋಕೋಪಯೋಗಿ, ಆರೋಗ್ಯ ಇಲಾಖೆ, ಚೆಸ್ಕಾಂ, ರಾಜ್ಯರಸ್ತೆಸಾರಿಗೆ ಸಂಸ್ಥೆ, ಗ್ರಾಮಪಂಚಾಯಿತಿ. ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವೈರಮುಡಿ ಬ್ರಹ್ಮೋತ್ಸವ ಏಪ್ರಿಲ್ 8ರವರೆಗೆ ನಡೆಯಲಿದ್ದು ಎಲ್ಲಾ ಎಲ್ಲಾಖೆಯವರೂ ಇದೇ ರೀತಿ ಶ್ರಮಿಸಬೇಕು ಎಂದು ತಿಳಿಸಿದ್ದಾರೆ
ಕುಮಾರ ನಾಯಕ್ ಹೆಚ್ಚುವರಿ ಕಾರ್ಯದರ್ಶಿ ಕರ್ನಾಟಕ ಸರ್ಕಾರ
————————————-
ಮೇಲುಕೋಟೆ ವೈರಮುಡಿ ಕರ್ನಾಟಕದ ಅಪರೂಪದ ಉತ್ಸವವವಾಗಿದೆ. ಇಂತಹ ಮಹೋತ್ಸವದಲ್ಲಿ ಭಾಗಿಯಾಗಿ ದರ್ಶನಪಡೆದದ್ದು, ರಾಜಮುಡಿ ಕಿರೀಟ ಪಾರ್ಕಾವಣೆಯಲ್ಲಿ ಪಾಲ್ಗೊಂಡಿದ್ದು, ಜೀವನದಲ್ಲಿ ಮರೆಯಲಾದ ದಿನವಾಗಿದೆ. ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ನನ್ನ ಸಹಕಾರ ಸಂಪೂರ್ಣ ಇದೆ