ಮೈಸೂರು:- ಸಾವರ್ಕರ್ ಪ್ರತಿಷ್ಠಾನ ಮೈಸೂರು (ರಿ) ವತಿಯಿಂದ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಪ್ರೌಢ ಶಾಲಾ ಮಕ್ಕಳಿಗೆ ಅಂತರ ಜಿಲ್ಲಾ ಚಿತ್ರಕಲಾ ಸ್ಪರ್ಧೆಯನ್ನು ಮೈಸೂರಿನ ಸ್ವತಂತ್ರ ಹೋರಾಟಗಾರರ ಉದ್ಯಾನವನದಲ್ಲಿ “ಸ್ವತಂತ್ರ ಹೋರಾಟದಲ್ಲಿ ಸಾವರ್ಕರ್” ಎಂಬ ವಿಷಯದ ಅಡಿಯಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರತಿಷ್ಠಾನ ದ ಅಧ್ಯಕ್ಷರಾದ ಡಾ.ಯಶಸ್ವಿನಿ ಎಸ್ ಅವರು ಹಾಗು ಮೈಸೂರಿನ ಹೆಸರಾಂತ ಸಮಾಜ ಸೇವಕಿ, ಹಿರಿಯ ಮಹಿಳಾ ಮುಖಂಡರು ಆದ ಶ್ರೀಮತಿ ಹೇಮಲತಾ ನಂದೀಶ ರವರು ಹಾಗು ಪ್ರತಿಷ್ಠಾನದ ಶ್ರೀ ಸಂಜಯ್ ರವರು ನಡೆಸಿಕೊಟ್ಟರು. ಸಭೆಯ ಪ್ರಾಸ್ತಾವಿಕ ವನ್ನು ಅಧ್ಯಕ್ಷರು ಪ್ರಸ್ತಾಪಿಸಿದರು ಹಾಗು ಮಕ್ಕಳಿಗೆ ಸಾವರ್ಕರ ರವರ ಚಿಂತನೆ ಗಳನ್ನೂ ಸಾಧ್ಯವಾದಷ್ಟು ತಲುಪಿಸುವ ಕೆಲಸ ಮಾಡಿದರು. ಸ್ಪರ್ಧೆಯಲ್ಲಿ ಮೈಸೂರು , ಚಾಮರಾಜನಗರ , ಹಾಸನ , ಕೊಡಗು ಹಾಗೂ ಮಂಡ್ಯ ಜಿಲ್ಲೆಗಳಿಂದ 85ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು,
ಸ್ಪರ್ಧೆ ಯ ಮೊದಲನೇ ಬಹುಮಾನವೂ ಪ್ರಮಾಣ ಪಾತ್ರ ,ನೆನಪಿನ ಕಾಣಿಕೆ ಹಾಗೂ 5000 ರೂ ನಗದನ್ನೂ ಒಳಗೊಂಡಿದ್ದು ಮೈಸೂರಿನ ಶ್ರೀ ಶಾರದಾ ಪಬ್ಲಿಕ್ ಶಾಲೆಯ *ದೀಕ್ಷಾ ರವರು ಪಡೆದುಕೊಂಡರು.
ದ್ವಿತೀಯ ಬಹುಮಾನವು ಪ್ರಮಾಣ ಪತ್ರ ,ನೆನಪಿನ ಕಾಣಿಕೆ, 3000 ರೂ ನಗದು ಒಳಗೊಂಡಿದ್ದು ಅದನ್ನು ಶ್ರೀ ಸತ್ಯ ಸಾಯಿಬಾಬಾ ಶಾಲೆಯ ಶ್ರೀ ರೋಮಿತ್ ಆರ್ಯ ರವರು ಪಡೆದುಕೊಂಡರು. ತೃತೀಯ ಬಹುಮಾನವೂ ಪ್ರಮಾಣ ಪತ್ರ ,ನೆನಪಿನ ಕಾಣಿಕೆ ಹಾಗೂ ರೂ 1000 ನಗದು ಒಳಗೊಂಡಿದ್ದು ಮೈಸೂರಿನ ಲಯನ್ಸ್ ಸೇವಾನಿಕೇತನ ಶಾಲೆಯ ಹೇಮಾ ಸಿಂಚನ ರವರು ಪಡೆದುಕೊಂಡರು.
ಸಿದ್ದೇಶ್ , ದ್ಯುತಿ , ನಮ್ಯತ ಎಸ್ ಎಂ ಶೆಟ್ಟಿ ರವರು ಪ್ರಮಾಣ ಪತ್ರ ,ತಲಾ 500 ರೂ ಒಳಗೊಂಡ ಸಮಾಧಾನಕರ ಪ್ರಶಸ್ತಿ ಗಳನ್ನು ಪಡೆದುಕೊಂಡರು.
ಸಮಾರೋಪ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರತಿಷ್ಠಾನ ದ ಅಧ್ಯಕ್ಷರು ಹಾಗೂ ಮೈಸೂರಿನ ಪ್ರಖ್ಯಾತ ವೈದ್ಯರು ಆದಿತ್ಯ ಅಧಿಕಾರಿ ಆಸ್ಪತ್ರೆಯ ವ್ಯವಸ್ಥಾಪಕರು ಆದ ಶ್ರೀ ಡಾ. ಚಂದ್ರಶೇಖರ್ ರವರು,ಕು. ವಿಶಾಖ ಹಾಗೂ ಶ್ರೀ ಪ್ರತೀಕ್ ರವರು ಉಪಸ್ಥಿತರಿದ್ದು ವಿಜೇತರಿಗೆ ಪ್ರಶಸ್ತಿ ಪ್ರಧಾನವನ್ನು ನೆರವೇರಿಸಿ ಮಕ್ಕಳನ್ನುದ್ದೇಶಿಸಿ ದೇಶ ಭಕ್ತಿ ಮತ್ತು ಮಕ್ಕಳ ಜವಾಬ್ದರಿಯ ಬಗ್ಗೆ ಮಾತಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ರಜತ್ ರವರು, ಹಿರಿಯ ಕಾರ್ಯಕರ್ತರಾದ ಶ್ರೀ ರಾಕೇಶ್ ಭಟ್ ಅವರು, ಶ್ರೀ ಶಿವಕುಮಾರ್ ಚಿಕ್ಕಕಾನ್ಯ ರವರು, ಶ್ರೀ ಸಂಜಯ್ , ಕುಮಾರಿ ವಿಶಾಖ, ಶ್ರೀ ಪ್ರಜ್ವಲ್ , ಶ್ರೀ ಪ್ರತೀಕ್ ಹಾಗೂ ಅನೇಕ ಕಾರ್ಯಕರ್ತರು ಸ್ಪರ್ಧಾರ್ಥಿಗಳ ಪೆÇೀಷಕರು ಪಾಲ್ಗೊಂಡಿದ್ದರು.
ಶಾಲಾ ಮಕ್ಕಳಿಗೆ ಅಂತರ ಜಿಲ್ಲಾ ಚಿತ್ರಕಲಾ ಸ್ಪರ್ಧೆ
