ಮೈಸೂರು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶೂ ಧರಿಸಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಹೌದು ತಮ್ಮ ಕಾರಿಗೆ ಕಾಗೆ ಕೂತಿದ್ದೂ ಕಾಕತಾಳೀಯ ಅದು ಸಮಾಜಕ್ಕೆ ಅನಗತ್ಯವಾಗಿದ್ದರೂ ಪತ್ರಕರ್ತರು ಅದನ್ನು ವೈಭವಪೂರಿತವಾಗಿ ಬಿಂಬಿಸಿದ್ದರು. ಇಂತಹ ಮಾದ್ಯಮಗಳ ನಡೆ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.
ಆದರೆ, ವಿಚಿತ್ರ ಎಂದರೆ ಆ ಕಾರ್ಯಕ್ರಮ ಭಾಷಣಕ್ಕೂ ಮುನ್ನ ನಡೆದ ಗುದ್ಧಲಿಪೂಜೆಯನ್ನು ಶೂ ಧರಿಸಿ ಮಾಡಿದ್ದಾರೆ. ಸಿಎಂ ಮಾತ್ರವಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸಹ ಶೂ ಧರಿಸಿದ್ದಾರೆ. ಆದರೆ, ಧಾರ್ಮಿಕ ಆಚರಣೆಗಳಿಗೆ ಅಷ್ಟೇ ಗೌರವ ಕೊಡುವ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಪಾದುಕೆ ಧರಿಸಿಲ್ಲವಾಗಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಶೂ ಧರಿಸಿ ಯಾವುದೇ ಮಂಗಳ ಕಾರ್ಯಕ್ಕೆ ಚಾಲನೆ ಕೊಡುವ ಪದ್ಧತಿ ಇಲ್ಲ ಎಂಬುದು ಕೆಲವು ಧಾರ್ಮಿಕ ಮುಖ್ಯಸ್ಥರ ನಂಬಿಕೆಯಾಗಿದೆ. ಆದರೆ, ತಾವು ಆಸ್ತಿಕರೇ ಆದರೂ ಮುಖ್ಯಮಂತ್ರಿ, ಜಿಲ್ಲಾ ಸಚಿವರಾಗಿ ಎಲ್ಲರ ಭಾವನೆಗೂ ಬೆಲೆ ಕೊಡಬೇಕೆನ್ನುವುದು ಸಿದ್ಧರಾಮಯ್ಯ ಅಭಿಮಾನಿಗಳ ಒತ್ತಾಸೆಯೂ ಆಗಿದೆ.