ಮೈಸೂರು: ಸಿಎಂ ಸಿದ್ದರಾಮಯ್ಯ ಕೇವಲ ಬಿಜೆಪಿಯಷ್ಟೇ ಅಲ್ಲಾ ಈವರೆಗೆ ಯಾರು ಯಾರು ಎಷ್ಟೆಷ್ಟು ಸಾಲ ಮಾಡಿದ್ದಾರೆಂಬುದು ಸೇರಿದಂತೆ 79 ಸಾವಿರ ಕೋಟಿ ರೂ. ಸಾಲ ಯಾಕೆ ಮಾಡುತ್ತಿದ್ದೀರ ಎಂಬುದನ್ನು ಸೇರಸಿ ಶ್ವೇತ ಪತ್ರ ಹೊರಡಿಸಲಿ ಎಂದು ಬಿಜೆಪಿ ರಾಜ್ಯ ಮಾದ್ಯಮ ವಕ್ತಾರ ಮಹೇಶ್ ಒತ್ತಾಯಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈವರೆಗೂ ಕನಿಷ್ಠ ಒಂದು ಬರ ಸಂಬಂಧ ಸಭೆಯನ್ನು ಯಾವುದೇ ಜಿಲ್ಲಾ ಸಚಿವ ಹಾಗೂ ಸಿಎಂ ನಡೆಸಿಲ್ಲ. ಆ ಮೂಲಕ ಅಸಮರ್ಪಕ ಸರ್ಕಾರ, ಅಸಮರ್ಪಕ ಆಡಳಿತ ನೀಡುತ್ತಿದಿರಿ ಎಂದು ಕಿಡಿಕಾರಿದರು.
ಶ್ವೇತಪತ್ರ ಹೊರಡಿಸಲಿ: ಸಿದ್ದುಗೆ ಬಿಜೆಪಿ ಒತ್ತಾಯ
