ಮೈಸೂರು: ಸಂಸತ್ ಭವನದ ಭದ್ರತಾ ಲೋಪದಲ್ಲಿ ಕಾರಣೀಕೃತರಾದ ಸಂಸದ ಪ್ರತಾಪಸಿಂಹ ಅವರನ್ನು ಸಂಸದ ಸ್ಥಾನದಿಂದ ಅಮಾನತು ಮಾಡಿ ತನಿಖೆಗೆ ಒಳ ಪಡಿಸುವಂತೆ ಕಾಂಗ್ರೆಸ್ ನಗರ ವಕ್ತಾರ ಎಸ್.ರಾಜೇಶ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸತ್ ಭವನದಲ್ಲಿ ಗ್ಯಾಸ್ ಬಾಂಬ್ ಸಿಡಿಸಿರುವುದು ಕೇಂದ್ರದ ಗೃಹ ಸಚಿವರ ವೈಪಲ್ಯದ ಕನ್ನಡಿಯಾಗಿದೆ. ಅಲ್ಲದೆ ಇಂತಹ ಕೃತ್ಯ ಎಸಗಲು ಅವಕಾಶ ಕಲ್ಪಿಸಿಕೊಟ್ಟ ಪ್ರತಾಪಸಿಂಹ ಅವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಂಸತ್ ನಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡದೇ ಕಾಂಗ್ರೆಸ್ ಸಂಸದರನ್ನು ಸಂಸತ್ ಭವನದಿಂದ ಅಮಾನತು ಮಾಡಿರುವುದು ಬಿಜೆಪಿಯ ದಬ್ಬಾಳಿಕೆಯ ನಿಲುವಾಗಿದೆ. ಈ ಕೂಡಲೇ ಅಮಾನತು ಆದೇಶ ವಾಪಾಸ್ ಪಡೆದು ಪ್ರತಿಪಕ್ಷಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಇನ್ನೂ ಸಂಸತ್ ನಲ್ಲಿ ಭದ್ರತ್ ಲೋಪಾ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಅಲ್ಲಿಯವರೆಗೂ ಕಾಂಗ್ರೆಸ್ ಹೋರಾಟ ಮುಂದುವರೆಸುವುದಾಗಿ ಹೇಳಿದರು.
ಎಸ್ಸಿ ಘಟಕದ ಕಾರ್ಯದರ್ಶಿ ರವಿ, ಉಪಾಧ್ಯಕ್ಷ ಸಿದ್ದರಾಜು ಗೋಷ್ಠಿಯಲ್ಲಿದ್ದರು.