ಚಾಮರಾಜನಗರ: ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸತತವಾಗಿ ಸುತ್ತಾಡುತ್ತಿರುವ ವಿ.ಸೋಮಣ್ಣ ಲೋ ಬಿಪಿಯಿಂದ ಬಳಲಿದ ಘಟನೆ ಇಂದು ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಪ್ರಚಾರದ ವೇಳೆ ನಡೆದಿದೆ.
ಸತತವಾಗಿ ಬರು ಬಿಸಿಲನಲ್ಲಿ ಸೋಮಣ್ಣ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ತಲೆ ಸುತ್ತಿ ಕಾರಿನಲ್ಲೇ 20 ನಿಮಿಷ ಕುಳಿತು ಸುಧಾರಿಸಿಕೊಂಡಿದ್ದಾರೆ. ಬಳಿಕ, ವೈದ್ಯರು ಚಿಕಿತ್ಸೆ ಕೊಟ್ಟ ಬಳಿಕ ಮತ್ತೇ ಸೋಮಣ್ಣ
ಪ್ರಚಾರ ಆರಂಭಿಸಿದ್ದಾರೆ.
ನಾನು ಆರಾಮಾಗಿದ್ದೇನೆ,ಸ್ವಲ್ಪ ಲೊ ಬಿಪಿ ಇತ್ತು ಅಷ್ಟೇ, ಹೈ ಬಿಪಿಯಲ್ಲ, ನನ್ನಿಂದ ಬೇರೆಯವರಿಗೆ ಹೈಬಿಪಿ, ನಂಗೆ ತಲೆ ಸುತ್ತು ಬಂತೂ,ಆಗೇ ಕಾರಿನಲ್ಲಿ ಕುಳಿತೆ. 20 ನಿಮಿಷ ರೆಸ್ಟ್ ಮಾಡಿದೆ.
ರಕ್ತದೊತ್ತಡ 70 ಕ್ಕೆ ಇಳಿದಿತ್ತು.
ನಾನು ಸುಮ್ನೆ ಕುಳಿತುಕೊಳ್ಳುವವನು ಅಲ್ಲ.
ಸಭೆ ಮುಗಿಸಿ ಮಲಗಿದಾಗ 4 ಗಂಟೆ ಆಗಿತ್ತು.
ದೈಹಿಕವಾಗಿ ಬಳಲಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.
ಆಡಿಯೋ ವೈರಲ್ ಕೇಸ್: ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ,
ಇದೆಲ್ಲಾ ವ್ಯವಸ್ಥಿತ ಪಿತೂರಿ, ಚುನಾವಣೆ ಆಯೋಗ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಚುನಾವಣೆ ಬಂದಾಗ ಇಂತಹದ್ದೆಲ್ಲಾ ಮಾಡುತ್ತಾರೆ, ಇದಕ್ಕೂ ನಂಗೂ ಸಂಬಂಧವಿಲ್ಲ, ತನಿಖೆ ಎದುರಿಸಲು ಸಿದ್ದವಾಗಿದ್ದೇನೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಆಗ್ತಾನೆ ಇರುತ್ತೆ, ಪ್ರಭಾವಿಗಳ ಮೇಲೆ ಇಂತಹದ್ದೆಲ್ಲಾ ಇದ್ದಿದ್ದೆ ಎಂದು
ಆಡಿಯೋ ಪ್ರಕರಣ ಬಗ್ಗೆ ಸೋಮಣ್ಣ ಸ್ಪಷ್ಟನೆ ಕೊಟ್ಟರು.
ಸತತ ಸುತ್ತಾಟ: ಲೋ ಬಿಪಿಯಿಂದ ಬಳಲಿದ ಸೋಮಣ್ಣ
