ತಿ.ನರಸೀಪುರ: ಸಾರ್ವಜನಿಕ ಆಸ್ಪತ್ರೆಗೆ ತಾವು ಬಂದಾಗ ಯಾರಿಗೂ ಹಣ ನೀಡಬೇಡಿ ಮತ್ತು ನಿಮ್ಮವ ರಿಗೂ ಹಣ ನೀಡದಂತೆ ಅರಿವು ಮೂಡಿಸಿ ಎಂದು ನೇತ್ರ ಶಸ್ತçಚಿಕಿತ್ಸಾ ತಜ್ಞೆ ಡಾ.ಭಾರತಿ ಕಿವಿ ಮಾತು ಹೇಳಿದರು.
ತಾಲ್ಲೂಕಿನ ಕೆಂಡನಕೊಪ್ಪಲು ಗ್ರಾಮದ ಕಿಚ್ಚ ಸುದೀಪ್ ಸಹಾಯ ಸೇನೆ ವತಿಯಿಂದ ಖ್ಯಾತ ಬಹುಭಾಷಾ ಚಿತ್ರ ನಟ ಕಿಚ್ಚ ಸುದೀಪ್ ರವರ 51 ನೇ ಜನ್ಮ ದಿನದ ಪ್ರಯುಕ್ತ ಹಮ್ಮಿ ಕೊಂಡಿದ್ದ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗ ಳಿಗೆ ಹಣ್ಣು ಹಂಪಲ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಘದವರಿAದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಯಲ್ಲಿ ಎಲ್ಲವೂ ಉಚಿತವಾಗಿರುತ್ತದೆ ಇದರ ಅರಿವು ತಮಗೆಲ್ಲ ಇರಲಿ ಖಾಸಗಿ ಆಸ್ಪತ್ರೆಗೆ ಹೋದಾಗ ಚಿಕಿತ್ಸೆಗೆ 12 ಸಾವಿರ ಹಣ ನೀಡುತ್ತೇವೆ ಇಲ್ಲಿ ಎರಡು ಸಾವಿರ ಕೊಟ್ಟರೆ ಏನು ಆಗಲ್ಲ ಅನ್ನುವ ಮಾನಸಿಕ ಧೋರಣೆಯನ್ನು ಮೊದಲು ತಾವೇಲ್ಲರು ಬಿಡಬೇಕು ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಕೊಡಬಾರದು ಅನ್ನುವ ಮನಸ್ಥಿತಿ ನಿಮ್ಮಿಂದ ಶುರುವಾ ದರೆ ಅದು ಎಲ್ಲಾ ಕಡೆ ಹಬ್ಬುತ್ತದೆ ಆಗ ಭ್ರಷ್ಟಾಚಾರಕ್ಕೆ ಕಡಿವಾಣ ಬಿಳಲಿದೆ,ತಮಗೆಲ್ಲ ವಯಸ್ಸು ಚಿಕ್ಕದಿದೆ ಈಗಿಂದಲೇ ಭ್ರಷ್ಟಾಚಾರ ನಿಲ್ಲಿಸಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.
ಮುಂದುವರಿದು ಮಾತನಾಡಿದ ಡಾ.ಭಾರತಿ ಸುದೀಪ್ ಒಬ್ಬ ಮೇರು ನಟ ಅಂತಹ ನಾಯಕನ ಜನ್ಮ ದಿನ ದಂದು ಕೆಂಡನಕೊಪುö್ಪಲು ಗ್ರಾಮದ ಕಿಚ್ಚ ಸುದೀಪ್ ಸಹಾಯ ಸೇನೆ ಯುವಕರು ಸಮಾಜ ಮುಖಿ ಕೆಲ¸ Àಗಳತ್ತ ತೊಡಗಿಕೊಂಡಿರುವುದು ಉತ್ತಮ ಕೆಲಸ ಹಾಗೂ ನಿಮ್ಮ ನಟ ಸುದೀಪ್ ರವರಿಗೆ ಕೂಡುವ ಗೌರವ ಕೂಡ ತಾವು ಇನ್ನಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡುವ ಮೂಲಕ ಅವರಂತೆ ಮಾದರಿಯಾಗಿ ಎಂದರು.
ತದ ನಂತರ ಕೆಂಡನ ಕೊಪ್ಪಲು ಗ್ರಾಮದಲ್ಲಿ ರಕ್ತಧಾನ ಶಿಬಿರ,ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ, ಅನ್ನಸಂ ತರ್ಪಣೆ ನೆಡಯಿತು ರಕ್ತಧಾನ ಶಿಬಿರ ವನ್ನು ಪಟ್ಟಣ ಠಾಣೆ ಪೋಲಿಸ್ ಇನ್ಸೆ÷್ಪಕ್ಟರ್ ಧನಂಜಯ ಉದ್ಘಾಟಿಸಿ ಕಾರ್ಯ ಕ್ರಮ ಅಯೋಜಕರಿಗೆ ಶುಭಕೋರಿ ದರಲ್ಲದೆ ಚಿತ್ರ ನಟ ಸುದೀಪ್ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದರು ಸಹ ಬಡವರು ನೊಂದವರಿಗೆ ಸಹಾಯ ಮಾಡುವ ಮನೋಭಾವ ಹೊಂದಿ ದ್ದಾರೆ ತಾವು ಸಹ ತಮ್ಮ ನೆಚ್ಚಿನ ನಟನ ಹಾದಿಯಲ್ಲಿ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಾಗಶ್ವೇರ ರಾವ್ ಹಾಗೂ ಕೆಂಡನ ಕೊಪ್ಪಲು ಗ್ರಾಮಸ್ಥರು ಸೇರಿದಂತೆ ಸುದೀಪ್ ಅಭಿಮಾನಿಗಳು ಸಂಘದ ಸದಸ್ಯರು ಹಾಜರಿದ್ದರು
ಬಾಕ್ಸ್
ಸುದೀಪ್ ರವರು ಸಿರಿವಂತಿಕೆ ಮನೆಯಲ್ಲಿ ಹುಟ್ಟಿದರು ಸಹ ಅವರಲ್ಲಿ ಕಷ್ಟದಲ್ಲಿರುವವರ ನೋವು ಅರಿವಿದೆ ಬಹುಭಾಷಾ ಖ್ಯಾತ ನಟನಾದರು ಸರಳ ಸಜ್ಜನಿಕೆ ಸ್ವಭಾವ ವಿದೆ ಇಂತಹ ನಾಯಕನ ಅಭಿಮಾ ನಿಗಳಾದ ತಾವು ಸಹ ಒಳ್ಳೆಯ ಮಾರ್ಗದಲ್ಲಿ ನಡೆಯುವ ಮೂಲಕ ಅವರಿಗೆ ಮತ್ತಷ್ಟು ಗೌರವ ಹೆಚ್ಚಿಸಬೇಕು”
ಡಾ.ಮಾದೇಶ್, ಸಮಾಜ ಸೇವಕರು