ಬೆಂಗಳೂರು: ಮೇ 20ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ತಮಗಿದ್ದ ಜೀರೊ ಟ್ರಾಫಿಕ್ ಸೌಲಭ್ಯ ತ್ಯಜಿಸಿದ್ದರು.
ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ
ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.
ಆದರೆ, ಇಂದು ಸಂಜೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ನಿಂದ ಲಾಲ್ಬಾಗ್ ವೆಸ್ಟ್ ಗೇಟ್ಗೆ ಪ್ರಯಾಣಿಸುವ ವೇಳೆ ಸಿದ್ದರಾಮಯ್ಯಗೆ ಜೀರೊ ಟ್ರಾಫಿಕ್ ಸೌಲಭ್ಯವನ್ನು ಪೊಲೀಸರು ಕಲ್ಪಿಸಿದರು
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಈ ಭಾಗದಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಿದ್ದರಿಂದ ಮುಖ್ಯಮಂತ್ರಿ ಬೇರೊಂದು ಕಾರ್ಯಕ್ರಮಕ್ಕೆ ತುರ್ತು ತೆರಳಬೇಕಾಗಿದ್ದರಿಂದ ಟ್ರಾಫಿಕ್ ತೆರವು ಮಾಡಿದ್ದಾಗಿ ಹೇಳಿದ್ದಾರೆ.