ಮೈಸೂರು:ಸಿಎಂ ಸಿದ್ದರಾಮಯ್ಯ ಕೂಡಲೇ ರಾಜಿನಾಮೆ ಕೊಡಲೇಬೇಕು. ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಹೇಳಿಕೆ. ಎಲ್ ಕೆ ಅಡ್ವಾಣಿ ಅವರ ಹೆಸರು ಡೈರಿಯಲ್ಲಿ ಎಲ್ ಕೆ ಎ ಎಂದು ಇತ್ತು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ ರಾಷ್ಟ್ರೀಯ ಪಕ್ಷ, ಅವರು ಸಿಎಂ ರಾಜೀನಾಮೆ ಪಡೆಯುತ್ತಾರೆ. ಸಿಎಂ ಸಿದ್ದರಾಮಯ್ಯ ಹಿತ ಶತ್ರುಗಳ ಮಾತು ಕೇಳಿದ ಪರಿಣಾಮ ಈ ರೀತಿಯಾಗಿದೆ. ಕಾನೂನು ಸಲಹೆಗಾರ ಸರಿಯಾದ ಮಾಹಿತಿಯನ್ನ ಸಿಎಂಗೆ ನೀಡಿಲ್ಲ. ಪ್ರಾಸಿಕ್ಯೂಷನ್ ಗೆ ಅನುಮತಿ ಸಿಗುತ್ತೆ ಅಂತ ಗೊತ್ತಿತ್ತು.
ನಮಗೆ ನ್ಯಾಯ ಸಿಕ್ಕಿದೆ. ಯಾವ ರೀತಿ ತಪ್ಪು ಮಾಡಿದ್ರಿ ಅಂತ ದಾಖಲೆ ಕೊಟ್ಟಿದ್ವಿ. ಅವರು ಯಾವ ರೀತಿ ತಪ್ಪೆಸಗಿದ್ದಾರೆ ಎಂದು ದಾಖಲೆ ಇದೆ.
ನಗರಾಭಿವೃದ್ಧಿ ಸಚಿವರು ಹೆಲಿಕಾಪ್ಟರ್ ಮೂಲಕ ಬಂದು ದಾಖಲೆ ಹೊತ್ತೊಯ್ದರು.
ಆದ್ರೆ ಸಿಎಂ ಎಲ್ಲಾ ದಾಖಲೆ ಸರಿಯಾಗಿದೆ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ 14 ನಿವೇಶನಗಳನ್ನ ಹಿಂದಿರಿಗಿಸಿ ಮುಡಾ ಕಮಿಷನರ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕಿತ್ತು.
ಸಿಎಂ ವಿರುದ್ಧ ಆರೋಪ ಮಾಡಬೇಕಾದರೇ ಸಾಕಷ್ಟು ಬಾರಿ ಪರಿಶೀಲನೆ ನಡೆಸಿಯೇ ಆರೋಪ ಮಾಡಿದ್ದು.
ಎಲ್ಲಾ ದಾಖಲೆಗಳು ಸಿಎಂ ವಿರುದ್ಧವಾಗಿದೆ. ಸಿಎಂ ವಿರುದ್ದ ಹೋರಾಟಕ್ಕೆ ನನಗೆ ಎಲ್ಲರೂ ಬೆಂಬಲವಾಗಿ ನಿಂತಿದ್ದಾರೆ.
ಸಿಎಂ ಎಲ್ಲಾ ದಾಖಲೆ ಓದಿದ್ರೆ ಅವತ್ತೆ ಎಲ್ಲಾ ಸೈಟ್ ವಾಪಸ್ಸು ಕೊಡಬಹುದಿತ್ತು. ಸಿಎಂ ದಾಖಲೆಯನ್ನು ಓದದೆ ತಪ್ಪು ಮಾಡಿಲ್ಲಾ ಅಂತ ಹೇಳಿದ್ರು. ಮುಂದೆ ಮುಖ್ಯಮಂತ್ರಿ ಸರ್ಕಾರ ನಡೆದುಕೊಳ್ಳುತ್ತದೆ ಎಂದು ನೋಡಿಕೊಂಡು ಮುಂದಿನ ಹೋರಾಟ ಮುಂದುವರೆಸುತ್ತೇವೆ.
ಭೂಮಿ ತಾಯಿಗೆ ಮೈಸೂರಿನಲ್ಲಿ ಅಪಚಾರ ಮಾಡಿದ್ದಾರೆ. ಬಿಜೆಪಿಯವರು ತಪ್ಪು ಮಾಡಿದ್ದಾರೆ ಅಂದ್ರೆ ತನಿಖೆ ಮಾಡಬಹುದಿತ್ತಲ್ಲ.
ಸಿದ್ದರಾಮಯ್ಯ ಕೂಡಲೇ ರಾಜಿನಾಮೆ ಕೊಡಲೇಬೇಕು: ಶಾಸಕ ಶ್ರೀವತ್ಸ
