ಮಂಡ್ಯ : “ಸಂಸದೆ ಸುಮಲತಾ ಅವರನ್ನು ಗೆಲ್ಲಿಸಿ ಮಂಡ್ಯ ಜನ ತಪುö್ಪ ಮಾಡಿದರು, ಜನರಿಗೆ ಮೋಸ ಆಗೋಯ್ತು ಎಂದು” ಜೆಡಿಎಸ್ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.
ಮಂಡ್ಯ ಜನ ಸುಮಲತಾ ಅವ್ರನ್ನ ಯಾವ ಕಾರಣಕ್ಕೆ ಎಂಪಿ ಮಾಡಿದ್ರು? ಈಗ ಇಂತ ಪರಿಸ್ಥಿತಿಯನ್ನು ನಮ್ಮ ಜಿಲ್ಲೆಯ ಜನ ಎದುರಿಸಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ಆದರೆ, ಸಂಸದೆ ಸುಮಲತಾರಿಗೆ ಮಂಡ್ಯ ಜನರ ಬಗ್ಗೆ ಅಕ್ಕರೆ ಇಲ್ಲ. ಈ ಮೂಲಕ ಸುಮಲತಾ ಮುಂಬರುವ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಲ್ಲಲ್ಲ ಕ್ಲಿಯರ್ ಆಗಿ ಅರ್ಥ ಆಗ್ತಿದೆ ಎಂದು ಭವಿಷ್ಯ ನುಡಿದಿದ್ದಾರೆ. ಒಂದು ವೇಳೆ ಚುನಾವಣೆಗೆ ನಿಲ್ಲಿವವರಾಗಿದ್ದರೆ ನಮ್ಮ ಮಂಡ್ಯ ಜಿಲ್ಲೆಗೆ ಅನ್ಯಾಯ ಮಾಡ್ತಿರಲಿಲ್ಲ ಎಂದು ಜೆಡಿಎಸ್ ನಾಯಕ ಬೇಸರದ ಮಾತುಗಳನ್ನಾಡಿದ್ದಾರೆ.
ಎಸಿ ರೂಂನಲ್ಲಿ ಕುಳಿತುಕೊಂಡು ಮಾತಾಡ್ತಾರೆ
ಸಂಸದೆ ಸುಮಲತಾ ಅವರು ಒಂದು ಹೋರಾಟದಲ್ಲಿ ಭಾಗಿ ಆಗಲಿಲ್ಲ, ಹೋರಾಟದ ಧ್ವನಿ ಆಗ್ಲಿಲ್ಲ, ಬರಿ ಎಸಿ ರೂಮ್ನಲ್ಲಿ ಕೂತ್ಕೊಂಡು ಸ್ಟೇಟ್ಮೆಂಟ್ ಕೊಡ್ತಾರೆ. ಈ ಅನ್ಯಾಯಗಳನ್ನ ನಾವು ಕಣ್ಣಿಂದ ನೋಡಬೇಕಾಗಿದೆ. ನಮ್ಮ ಜನ ಮಾಡಿಕೊಂಡ ತಪ್ಪಿಗೆ ಇವತ್ತು ಎಲ್ಲರು ಪಶ್ಚಾತ್ತಾಪ ಪಡಬೇಕಿದೆ ಎಂದು ರವೀಂದ್ರ ಶೀಕಂಠಯ್ಯ ಹೇಳಿದರು.
ರೈತರ ಹೆಣದ ಮೇಲೆ ದಸರಾ
ರೈತರ ಹೆಣದ ಮೇಲೆ ವಿಜೃಂಭಣೆಯ ದಸರಾ ಮಾಡ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ದ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು. ಕಾವೇರಿ ವಿಚಾರದಲ್ಲಿ ಸ್ಟಾಲಿನ್ ಓಲೈಕೆಗಾಗಿ ನೀರು ಬಿಡುಗಡೆ ಮಾಡ್ತಿದ್ದಾರೆ. ಮಂಡ್ಯ ಶಾಸಕರಿಗೆ ನೀರು ನಿಲ್ಲಿಸೊ ಯೋಗ್ಯತೆ ಇಲ್ಲಾ, ರೈತರ ಹೆಣದ ಮೇಲೆ ಕಾಂಗ್ರೆಸ್ ನಾಯಕರು ದಸರಾ ಮಾಡೋಕೆ ಹೊರಟಿದ್ದಾರೆ. ಜಿಲ್ಲೆಯ ಶಾಸಕರು ರಾಜೀನಾಮೆ ಕೊಟ್ಟು ಕಾವೇರಿ ಹೋರಾಟ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.