ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಹತಾಶರಾಗಿದಾರೆ. ಸೋಲಿನ ಭೀತಿ ಅವರನ್ನು ಕಾಡುತ್ತಿದೆ ಎಂದು ವರುಣಾ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಟೀಕಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ಪತ್ರಕರ್ತರ ಸಂವಾದದಲ್ಲಿ ಮಾತನಾಡಿ ಸಿದ್ದರಾಮಯ್ಯನವರು ಬಹಳ ಬುದ್ಧಿವಂತರು ೧೩ -೧೪ ಸಲ ಏನೋ ಬಜೆಟ್ ಮಂಡನೆ ಮಾಡಿದ್ದಾರೆ. ನಾನು ಇಲ್ಲಿ ಬಂದು ನೋಡಿದೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ೧೫ವರ್ಷ ಮುಗಿದಿದೆ. ಒಂದು ಕಡೆ ತಿ.ನರಸೀಪುರ, ನಂಜನಗೂಡು, ಮೈಸೂರು ಮಧ್ಯದಲ್ಲಿ ವರುಣ ಜನರ ಭಾವನೆ ಏನಾಗಬಹುದು? ಅವರ ಬಿಪಿಎಲ್ ಕಾರ್ಡ್ ಏನು? ಎಪಿಎಲ್ ಕಾರ್ಡ್ ಏನು? ಪೋಡಿ ಏನು ಮತ್ತೊಂದೇನು? ಮಗದೊಂದೇನು? ಸಾಮಾನ್ಯ ಜನರ ಒಡನಾಟ ಏನು? ಏನಾದರೂ ತಾವು ಸ್ವಲ್ಪ ಯೋಚನೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಏನೂ ಬೇಡ ಅದು ಹೋಗ್ಲಿ ೮ಜಿ.ಪಂ.ಗಳಿವೆ. ಆ ೮ಜಿ.ಪಂಗಳಲ್ಲಿ ಎಲ್ಲಾದರೂ ಒಂದು ಕಡೆ ತಾವು ಒಂದು ಸಾರಿ ವಿರೋಧ ಪಕ್ಷದ ನಾಯಕರು, ಮತ್ತೊಂದು ಸಲ ಮುಖ್ಯಮಂತ್ರಿ, ಮಗ ಶಾಸಕರು ಹದಿನೈದು ವರ್ಷ ಆಗಿದೆ. ನಿಮಗೆ ನಿಮ್ಮ ಕೆಲಸ ತೃಪ್ತಿ ಕೊಟ್ಟಿದೆಯಾ ಅಂತ ತೀರ್ಮಾನ ಮಾಡಿದರೆ ಆಮೇಲೆ ಬೇಕಾದರೆ ಬಾಕಿ ತೀರ್ಮಾನ ಮಾಡೋಣ, ನಾನು ಇವತ್ತೇ ಬೇಕಾದರೆ ಸಿದ್ದರಾಮಯ್ಯನವರಿಗೆ ವಿನಂತಿ ಮಾಡುತ್ತೇನೆ ನಾವು ನೀವು ಇಬ್ಬರೂ ಜೊತೆಯಲ್ಲಿ ಹೋಗೋಣ, ಏನು ಸ್ವಾಮಿ ನಿಮ್ಮದು ಡೆವಲಪ್ ಮೆಂಟ್ , ಅಲ್ಲ ಸ್ವಾಮಿ ನಾನು ಯಾವುದೋ ಒಂದು ಹಳ್ಳಿಗೆ ಹೋದೆ, ನನಗೆ ಪ್ರಕೃತಿಕರೆಗೆ ಹೋಗಬೇಕಿತ್ತು. ಡಾಕ್ಟರ್ ಬಂದು ನಮಸ್ಕರಿಸಿ ಹೋಗಿ ಒಳಗಡೆ ಅಂತ ಹೇಳಿದರು. ಡಾಕ್ಟರ್ ಏನ್ರಿ ಹೀಗಿದೆ ಅಂತ ಕೇಳಿದರೆ ನಾವೇನು ಮಾಡೋಣ ಸರ್ ಅಂತಾರೆ. ಒಂದು ಸರಿಯಾದ ಕಟ್ಟಡವಿಲ್ಲ, ಯಾರು ನಿಮ್ಮನ್ನು ಹಿಡಿದುಕೊಂಡಿದ್ದರು. ೧೪ಸಲ ಬಜೆಟ್ ಮಂಡನೆ ಮಾಡಿದ್ದೀರಿ, ಒಂದೊಂದು ಕೋಟಿ ಕೊಟ್ಟಿದ್ದರೂ ೧೪ಕೋಟಿ ಅಂತೆ ಆಗಿರೋದು, ಚಿನ್ನದ ತಗಡಿನಲ್ಲಿಯೇ ಊರನ್ನು ಅಳೆಯಬಹುದಾಗಿತ್ತು. ಯಾವುದಾದರೂ ಒಂದು ಆತರದ್ದು, ವರುಣಾ ವಿಧಾನಸಭಾ ಕ್ಷೇತ್ರ. ವರುಣಾಗೆ ಹೋದರೆ ಒಂದೂ ಪಂಚಾಯತ್ ಕೂಡ ಇದ್ದ ಹಾಗೆ ಇಲ್ಲ, ನೋಡಲಿಕ್ಕೆ ಒಂದು ಥರಾ ಆಗುತ್ತೆ. ಎಲ್ಲಕ್ಕಿಂತ ಮಿಗಿಲಾಗಿ ತಗಡೂರು ಜಿಲ್ಲಾ ಪಂಚಾಯತ್ ೯-೧೦ ಸಾವಿರನೋ ಜನಸಂಖ್ಯೆ ಇದೆ. ಅದನ್ನು ಪಟ್ಟಣ ಪಂಚಾಯತ್ ಮಾಡಿ ಅಂತ ಕೇಳಿದರೆ ಮೋಡೋನ್ರಿ, ಹದಿನಾರು ಜಿಲ್ಲಾ ಪಂಚಾಯತಿ ದೇವರೇ ಕಾಪಾಡಬೇಕು. ತಾಂಡವಪುರ ಅಂತ ಇದೆ ಅಲ್ಲಿ ಏನಿದೆ? ಎತ್ತಿದೆ ನಾಗರಿಕತೆ ಏನು, ರಸ್ತೆ ಏನು? ಒಳಚರಂಡಿ ಏನು? ಏನಾದರೂ ಸಾಹೇಬ್ರೆ, ನಿಮ್ಮನ್ನು ತುಂಬಾ ಬುದ್ಧಿವಂತರು ಅಂತಿದ್ದೆ. ಆದರೆ ನಿಮ್ಮಷ್ಟು ಅದೃಷ್ಟವಂತರು, ನಿಮ್ಮಷ್ಟು ದೇವರ ಬಳಿ ಬರೆಸಿಕೊಂಡು ಬಂದವರು, ನಿಮ್ಮಷ್ಟು ಏನೂ ಕೆಲಸ ಮಾಡದೇನೇ ಎಲ್ಲವೂ ಕೂಡ ತಥಾಸ್ತು ಆಗಿ ಜೀರ್ಣಿಸಿಕೊಂಡಿರುವ ಕರ್ನಾಟಕದಲ್ಲಿ ಯಾರಾದರೂ ಒಬ್ಬ ನಾಯಕ ಇದ್ದಾರೆ ಅಂತಾದರೆ ಅದು ಸಿದ್ದರಾಮಯ್ಯನವರು ಮಾತ್ರ. ನಾನು ಅವರಿಗೆ ಟೀಕೆ ಮಾಡುತ್ತಿಲ್ಲ. ನಿಂದಿಸುತ್ತಿಲ್ಲ. ಒಂದು ದಿನ ನೀವು ಯಾವತ್ತಾದರೂ ತಮ್ಮ ಕ್ಷೇತ್ರದ ಬಗ್ಗೆ ಕ್ಷೇತ್ರದ ಮತದಾರರ ಬಗ್ಗೆ, ಆಗುಹೋಗುಗಳ ಬಗ್ಗೆ, ತಮ್ಮನ್ನು ರಾಜಕೀಯಕ್ಕೆ ತಂದಂತಹ ಕೆಂಪೀರೇಗೌಡರ ಬಗ್ಗೆ ಯಾವುದಾದರೂ ನಾಲ್ಕು ಹೆಜ್ಜೆ ಗುರುತುಗಳನ್ನು ತಾವು ಬಿಟ್ಟಿದ್ದರೆ ನಾನು ಆನಂದಪಡುತ್ತಿದ್ದೆ ಎಂದರು.
ನನ್ನ ಕ್ಷೇತ್ರಕ್ಕೆ ಬನ್ನಿ ನೀವು, ೫-೬ ಐಎಎಸ್ ಸೆಂಟರ್ ಗಳಿವೆ. ಒಂದೊಂದು ಸೆಂಟರ್ ಗೂ ಒಬ್ಬೊಬ್ಬರ ಹೆಸರಿಟ್ಟಿದ್ದೇನೆ. ಸಿದ್ದಗಂಗಾಶ್ರೀಗಳ, ಕಾಗಿನೆಲೆ ಸ್ವಾಮೀಗಳ, ಪೇಜಾವರ ಸ್ವಾಮಿಗಳ ಹೆಸರಿಟ್ಟಿದ್ದೇನೆ. ಯಾರಾದರೂ ಕಾಂಗ್ರೆಸ್ ನಾಯಕರು ಪ್ರಚಾರ ಸಭೆಗಳಲ್ಲಿ ಬಸವಣ್ಣನವರ ಬಾವುಟಗಳನ್ನು ಹಾಕಿದ್ದು ನೋಡಿದ್ದೇವಾ? ಏನೋ ಹೊಸ ಹೊಸ ತಮ್ಮ ಸ್ಟೆಟರ್ಜಿ ಇದು ಯಾತಕ್ಕೋಸ್ಕರ? ನಾನು ಶಿವಣ್ಣನವರ ಬಗ್ಗೆ ಏನೂ ಹೇಳಲು ಹೋಗಲ್ಲ, ರಾಜಕುಮಾರ್ ಕುಟುಂಬ ಕುರಿತು ಗೌರವ ಇದೆ. ರಾಜಕುಮಾರ್ ನಮಗೆ ಆರಾಧ್ಯ. ೪೦-೪೫ವರ್ಷ ಅವಿನಾಭಾವ ಸಂಬಂಧ. ಶಿವಣ್ಣ ಬಂದರು ಅಂತ ಬೇಸರವಾಯ್ತು. ನಾನೇನು ಮಾತನಾಡಲು ಹೋಗಿಲ್ಲ. ಲೂಸ್ ಮಾದ್, ದುನಿಯಾವಿಜಿ, ರಮ್ಯಮ್ಮ ಎಲ್ಲ ಬಂದರು, ನಾನೇ ದೊಡ್ಡ ನಾಯಕ ಅಂತಿದ್ರಿ, ಬರೋದೆ ಇಲ್ಲ ಅಂತಿದ್ರಿ, ನಾಮಿನೇಷನ್ ಹಾಕಿ ಹೋಗ್ತೇನೆ. ಬರೋದೆ ಇಲ್ಲ ನಾನು ಅಂತಿದ್ರಿ, ಸ್ವಾಮಿ ಸಿದ್ದರಾಮಯ್ಯ ಸಾಹೇಬ್ರೆ ಹತಾಶರಾಗಿದ್ದೀರಿ, ಸೋಲಿನಿಭೀತಿ ನಿಮ್ಮನ್ನು ಕಾಡುತ್ತಿದೆ. ಎಲ್ಲ ವರ್ಗದವರಿಗೂ ವಂಚನೆ ಮಾಡಿ, ಎಲ್ಲ ವರ್ಗದವರಿಗೂ ಪೆಪ್ಪರ್ ಮೆಂಟ್ ಕೊಟ್ಟು ಎಲ್ಲೊ ನೂರು ಜನ ಬಾಲಬಡುಕರನ್ನು ಇಟ್ಟು ಕ್ಷೇತ್ರ ಅಂತೀರಿ, ನಾನು ಹಾಗಲ್ಲ ಸ್ವಾಮಿ, ನಾನು ಅರೆಹುಚ್ಚ ಅಲ್ಲ, ಪೂರ್ತಿ ಹುಚ್ಚ. ನಾನು ವರುಣಾ ಕ್ಷೇತ್ರವನ್ನು ಇನ್ನೊಂದು ಗೋವಿಂದನಗರ ಮಾಡಬೇಕು ಅಂದುಕೊಂಡಿದ್ದೇನೆ. ಇದು ನನ್ನ ಆಸೆ ಅಲ್ಲ. ನನ್ನ ನಾಯಕರುಗಳ ಆಸೆ ಎಂದರು.