ಹನೂರು: ತಾಲೂಕಿನಾದ್ಯಂತ ರಂಜಾನ್ ಆಚರಣೆಯನ್ನು ಮುಸ್ಲಿಂ ಬಾಂಧವರು ಆಚರಣೆ ಮಾಡಿದ್ದಾರೆ. ಮುಸ್ಲಿಂ ಬಾಂಧವರು ತಮ್ಮ ವ್ಯಾಪ್ತಿಯ ಈದ್ಗಾ ಮೈದಾನಗಳಲ್ಲಿ ನಮಾಜ್ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ತಾಲೂಕಿನ ಚಿತ್ತಾಪುರ ಗ್ರಾಮದ ಮುಸ್ಲಿಂ ಬಾಂಧವರು ತಮ್ಮ ಈದ್ಗಾ ಮೈದಾನಕ್ಕೆ ತೆರಳಿ ನಮಾಜ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಹನೂರು ಪಟ್ಟಣದ ಸೇರಿದಂತೆ ಬಂಡಳ್ಳಿ, ಮಂಗಲ, ಅಜ್ಜಿಪುರ, ರಾಮಪುರ, ಕೌದಳ್ಳಿ ಇನ್ನಿತರ ಕಡೆಗಳಲ್ಲಿ ರಂಜಾನ್ ಆಚರಣೆ ಕಾರ್ಯಕ್ರಮಗಳು ನಡೆಯಿತು.
ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಮಾಡುತ್ತಾರೆ.
ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ ಎಂದು ಮುಸ್ಲಿಂ ಬಾಂಧವರು ತಿಳಿಸಿದ್ದಾರೆ.