ಹನೂರು:- ಸ್ಥಳೀಯ ಪಟ್ಟಣ ಪಂಚಾಯ್ತಿಯ ಎರಡನೆ ಅವಧಿಯ ಅದ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕಿದ್ದರೂ ಕಾಂಗ್ರೆಸ್ ಆಡಳಿತ ಕಾಲದ ಕಳೆದ ಭಾರಿಯಂತೆ ಈ ಭಾರಿ ಜೆಡಿಎಸ್ ಅಧಿಕಾರದ ಗದ್ದುಗೆ ಏರುವ ಸಂದರ್ಭದಲ್ಲಿ ಎಸ್ ಸಿ ಗೆ ನೀಡುವುದೇ ಎಂಬುದೇ ಕುತೂಹಲ ಮೂಡಿಸಿದೆ.
2016-19 ರ ಸಾಲಿನ ಅವಧಿಯ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಪ.ಪಂ.ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದರೂ ಕೂಡ ದಲಿತರಿಗೆ ಮನ್ನಣೆ ನೀಡುವ ಮಹದಾಸೆಯಿಂದ ಮಾಜಿ ಶಾಸಕ ನರೇಂದ್ರರವರು ನಿಯಮ ಮೀರಿ ದಲಿತರಿಗೆ ಉಪಾಧ್ಯಕ್ಷ ಸ್ಥಾನ ಕಲ್ಪಿಸುವ ಔಧಾರ್ಯ ತೋರಿದ್ದರು. ಅದೇ ರೀತಿ ಈ ಭಾರಿಯ ಚುನಾವಣೆಯಲ್ಲಿ ಪ್ರಸ್ತುತ ಶಾಸಕ ಮಂಜುನಾಥ್ ಅವರು ಅದೇ ರೀತಿ ಸಾಮಾನ್ಯ ಉಪಾಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡುವರೆಂಬ ವಿಶ್ವಾಸ ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿದೆ.
2019 ರಲ್ಲಿ ನಡೆದ ಪ.ಪಂ.ಚುನಾವಣೆಯಲ್ಲಿ 11 ನೆ ವಾಡ್೯ನ ಸ್ಥಾನ ಎಸ್ ಸಿಗೆ ಮೀಸಲಿದ್ದು ಪ್ರಬಲ ಆಕಾಂಕ್ಷಿಯಾಗಿದ್ದ ದಲಿತ ಮುಖಂಡ ಪ್ರಸನ್ನ ಕುಮಾರ್ ಗೆ ಜೆಡಿಎಸ್ ಟಿಕೆಟ್ ತಪ್ಪಿಸಿ ಲಂಬಾಣಿ ಜನಾಂಗದ ಮಹದೇವ್ ಗೆ ನೀಡಿದ್ದ ರೀತಿ ಈ ಭಾರಿಯ ಸಾಮಾನ್ಯ ಉಪಾಧ್ಯಕ್ಷ ಸ್ಥಾನವನ್ನು ಎಸ್ಸಿ ಗೆ ನೀಡುವಂತೆ ದಲಿತ ಜನಾಂಗದ ಅನೇಕ ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ. ಶಾಸಕ ಮಂಜುನಾಥ್ ಅವರು ಎಸ್ಸಿ ಎಸ್ಟಿ ಆರು ಜನ ಸದಸ್ಯರಿರುವ ವರ್ಗಕ್ಕೆ ಆದ್ಯತೆ ನೀಡುವರೆ ಕಾದು ನೋಡ ಬೇಕಾಗಿದೆ.
ಹನೂರು ಪ.ಪಂಚಾಯ್ತಿ ಉಪಾಧ್ಯಕ್ಷ ಸ್ಥಾನದಲ್ಲಿ ಎಸ್ಸಿಗೆ ಆದ್ಯತೆ ನೀಡುವರೆ ಶಾಸಕ ಮಂಜುನಾಥ್..!
