ಮೈಸೂರು: ತಾಲ್ಲೂಕಿನ ಬೋಳನಹಳ್ಳಿಯಲ್ಲಿರುವ ಶ್ರೀ ಗುರು ಮುಕ್ಕಣೇಶ್ವರ ಸ್ವಾಮಿ ಮಹಾಸಂಸ್ಥಾನ ಮಠ ಗುರುಕುಲ ಆಶ್ರಮದ ಹಾಲುಮತ ಕುಲಗುರು ಪೀಠದ ಗುರುಮುಕ್ಕಣೇಶ್ವರ ಸ್ವಾಮಿಯ 2 ನೇ ವಾರ್ಷಿಕೋತ್ಸವ ಹಾಗೂ ಹಾಲುಮತ ಕುಲಗುರು ಹುಣಸೂರು ಬೋಳನಹಳ್ಳಿಯಲ್ಲಿರುವ ಶ್ರೀ ಗುರುರೇವಣ್ಣ ಸಿದ್ದೇಶ್ವರ ಜಯಂತೋತ್ಸವ ವಿವಿಧ ಸ್ವಾಮೀಜಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೇರವೇರಿತು.
ಮಹಾರಾಷ್ಟ್ರದ ಅಮೋಘ ಸಿದ್ದೇಶ್ವರ ಸ್ವಾಮಿ, ಬಿಜಾಪುರದ ಸಿದ್ದಲಿಂಗಸ್ವಾಮಿ ಮತ್ತು ಗುರುಕುಲ ಮಠದ ನಿಜಗುಣ ಒಡೆಯರು ಭಾಗವಹಿಸಿ ಆಶೀರ್ವಚನ ನೀಡಿದರು.
ಗುರುಕುಲ ಮಠದ ನಿಜಗುಣ ಒಡೆಯರು ಮಾತನಾಡಿ, ಹಾಲುಮತ ಸಮಾಜಕ್ಕೆ ಗುರುಕುಲ ಕಟ್ಟಡ ನಿರ್ಮಾಣ ಆಗಬೇಕು. ಅಲ್ಲಿ ವೇದ, ಯೋಗ ಮೊದಲಾದ ಧಾರ್ಮಿಕ ಕಾರ್ಯಗಳು ಜರುಗಬೇಕಿದೆ. ಹಾಲುಮತ ಜಯಂತೋತ್ಸವ ಜಿಲ್ಲೆ ಮಾತ್ರವಲ್ಲದೆ ರಾಜ್ಯಮಟ್ಟದಲ್ಲಿಯೂ ಆಗಬೇಕಿದೆ. ಈ ಸಂಬಂಧ ಸರ್ಕಾರಕ್ಕೆ ಮನವಿ ಹಾಗೂ ಒತ್ತಡ ಹೇರುವ ಕೆಲಸ ಸಮಾಜದಲ್ಲಿ ಆಗಬೇಕಿದೆ ಎಂದರು.
ಭಕ್ತರು ದೇಣಿಯಿಂದ ಈ ಮಠ ನಡೆದುಕೊಂಡು ಬರುತ್ತಿದೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು. ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಕಾವೇರಿ ಆಸ್ಪತ್ರೆಯ ಡಾ.ಲೋಹಿತ್, ಹುಣಸೂರು ನಗರ ಸಭೆ ಸದಸ್ಯ ಗಣೇಶ್ ಕುಮಾರ್ ಸ್ವಾಮಿ, ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಇನ್ನಿತರರು ಉಪಸ್ಥಿತರಿದ್ದರ