ಇತ್ತೀಚಿನ ದಿನಗಳಲ್ಲಿ ಜನ ಅತೀ ಚಿಕ್ಕ ವಯಸ್ಸಿನಲ್ಲೇ ಹಾರ್ಟ್ ಅಟ್ಯಾಕ್ನಿಂದ ಸಾಯೋದನ್ನು ನೋಡಿರ್ತೀವಿ. ಇದಕ್ಕೆ ನಮ್ಮ ಜೀವನ ಶೈಲಿ ಕೂಡ ಕಾರಣ ಆಗಿರ್ಬಹುದು. ಆದ್ರೆ ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರಗಳೇ ನಮ್ಮ ದೇಹಕ್ಕೆ ಮಾರಕವಾಗುತ್ತಿದೆ. ಅದ್ರಲ್ಲೂ ಕೂಡ ಯಾರಿಗೆ ಈ ಮೊದಲೇ ಹಾರ್ಟ್ ಅಟ್ಯಾಕ್ ಆಗಿದ್ಯೋ ಅವರಂತೂ ಕೆಲವೊಂದು ಆಹಾರಗಳನ್ನು ಸೇವಿಸಲೇಬಾರದು. ಹಾಗಾದ್ರೆ ಈಗಾಗಲೇ ಹಾರ್ಟ್ ಅಟ್ಯಾಕ್ಗೆ ಒಳಗಾದವರು ಯಾವ ಆಹಾರ ಸೇವಿಸಬೇಕು? ಸೇವಿಸಬಾರದು ಅನ್ನೋದನ್ನ ಹೇಳ್ತೀವಿ.
ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರಗಳು :
* ಹಣ್ಣುಗಳು ಮತ್ತು ತರಕಾರಿಗಳು
* ಕಾಳುಗಳು
* ಬೀನ್ಸ್ ಮತ್ತು ದ್ವಿದಳ ಧಾನ್ಯಗಳು
* ಮೀನು ಮತ್ತು ಸಮುದ್ರ ಆಹಾರ
* ಧಾನ್ಯಗಳು
* ಅಲಿವ್ ಎಣ್ಣೆ ಮತ್ತು ಆರೋಗ್ಯಕಾರಿ ಎಣ್ಣೆಗಳು
* ಮೊಟ್ಟೆ
* ಮಾಂಸ
* ಚರ್ಮ ತೆಗೆದ ಕೋಳಿ ಮಾಂಸ
ನಾವು ಸೇವಿಸುವ ಆಹಾರದಲ್ಲಿ ಉಪುö್ಪ, ಸೋಡಿಯಂ, ಮತ್ತು ಸಕ್ಕರೆಯ ಅಂಶ ಕಡಿಮೆ ಇರಬೇಕು. ಒಂದು ವೇಳೆ ಈ ಎಲ್ಲಾ ಅಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿದರೆ ನಿಮಗೆ ಹೃದಯಾಘಾತವಾಗುವ ಅಪಾಯ ಹೆಚ್ಚಿರುತ್ತದೆ. ಶೈತೀಕರಿಸಿದ ಯಾವುದೇ ಪದಾರ್ಥಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆಗೊಳಿಸಿ. ಸಾಧ್ಯವಾದಷ್ಟು ತಾಜಾ ತರಕಾರಿ ಹಾಗೂ ಹಣ್ಣಗಳನ್ನು ಸೇವಿಸಿದರೆ ಉತ್ತಮ. ಇದರಿಂದ ನಮ್ಮ ದೇಹದ ಆರೋಗ್ಯಕ್ಕೂ ಒಳ್ಳೆಯದು.
ಮೀನು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಯಾಕೆ?
ಮೀನು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದ್ರಲ್ಲೂ ಎಣ್ಣೆಯುಕ್ತ ಮೀನನ್ನು ಸೇವಿಸುವುದು ತುಂಬಾನೇ ಒಳ್ಳೆಯದು. ಯಾಕಂದ್ರೆ ಇದರಲ್ಲಿ ಒಮೆಗಾ-3 ಅಂಶವಿದೆ. ಒಮೆಗಾ-3 ವಿಟಮಿನ್ ಟ್ರೆöÊಗ್ಲಿಸರೈಡ್ಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಇನ್ನೂ ಆದಷ್ಟು ಫ್ರೆಶ್ ಮೀನುಗಳನ್ನೇ ಸೇವಿಸಿ. ಶೈತೀಕರಿಸಿಟ್ಟ ಮೀನು ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನೊಂದು ವಿಚಾರ ಅಂದರೆ ಎಣ್ಣೆಯಲ್ಲಿ ಕರಿದ ಮೀನು ಸೇವಿಸಲು ಹೋಗಬೇಡಿ.
ಯಾವ ಮೀನುಗಳು ಹೃದಯದ ಆರೋಗ್ಯಕ್ಕೆ ಉತ್ತಮ :
* ಸಲ್ಮಾನ್
* ಬಂಗ್ಡಾ
* ಹೆರಿಂಗ್
* ಟ್ರೌಟ್
* ಸಾರ್ಡೀನ್ಗಳು
ಅಧಿಕ ಪ್ರಮಾಣದಲ್ಲಿ ನೀರು ಕುಡಿಯಿರಿ :
ಪ್ರತಿಯೊಬ್ಬರ ಆರೋಗ್ಯ ದೃಷ್ಟಿಯಿಂದ ನೀರು ತುಂಬಾನೇ ಒಳ್ಳೆಯದು. ನಾವು ನೀರು ಕುಡಿದಷ್ಟು ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ. ಹೃದಯ ಸಮಸ್ಯೆ ಇರುವವರು ಕೂಡ ನೀರು ಕುಡಿಯೋದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. ಇನ್ನೂ ಲಿಂಬೆ ಜ್ಯೂಸ್, ಸೌತೆಕಾಯಿ, ಬೆರಿ ಹಣ್ಣುಗಳು ಕೂಡ ನೀರಿನ ಜೊತೆಗೆ ಸೇರಿಸಬಹುದು. ಇದು ನಿಮಗೆ ರುಚಿಯಾದ ಫ್ಲೇವರ್ ನೀಡುತ್ತದೆ. ಆಗಾಗ್ಗೆ ನೀರು ಕುಡಿಯಲು ಕೂಡ ಮನಸ್ಸಾಗುತ್ತದೆ.
ಯಾವೆಲ್ಲಾ ಆಹಾರಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ:
* ಫಾಸ್ಟ್ಫುಡ್
* ಕರಿದ ತಿಂಡಿಗಳು
* ಸಂಸ್ಕರಿಸಿದ ಆಹಾರಗಳು
* ಕ್ಯಾಂಡಿ
* ಚಿಪ್ಸ್
* ಕುಕ್ಕೀಸ್ ಮತ್ತು ಕೇಕ್
* ಬಿಸ್ಕೆಟ್ಸ್
* ಐಸ್ಕ್ರೀಮ್
* ಮಯೋನಸ್, ಕೆಚಪ್
* ಕೆಂಪು ಮಾಸ
* ಮದ್ಯಪಾನ
* ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆಗಳು
* ಪಿಜ್ಜಾ, ಬರ್ಗರ್, ಹಾಟ್ಡಾಗ್ಸ್ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಕೊಲೆಸ್ಟಾçಲ್ ಹೆಚ್ಚಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಕೊಲೆಸ್ಟಾçಲ್ ಹೆಚ್ಚಾಗಬಾರದೆಂದರೆ ಈ ಮೇಲಿನ ಪದಾರ್ಥಗಳನ್ನು ಸೇವಿಸಬಾರದು. ಇವುಗಳು ತಿನ್ನೋದಕ್ಕೆ ತುಂಬಾನೇ ರುಚಿಯಾಗಿರಬಹುದು. ಆದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನೀವು ಸೇವಿಸುವ ದೈನಂದಿನ ಕ್ಯಾಲೋರಿ ಅಂಶವು 6 ಪ್ರತಿಶಕ್ಕಿಂತ ಹೆಚ್ಚು ಹೊಂದಿರಬಾರದು. ಅದಕ್ಕಿಂತ ಹೆಚ್ಚಾದರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇನ್ನೂ ಅನೇಕ ಜನರಿಗೆ ಕಾಫಿ, ಟೀ ಕುಡಿಯುವ ಚಟ ಹೆಚ್ಚಾಗಿರುತ್ತದೆ. ಅದನ್ನು ಬಿಟ್ಟು ಇರೋದಿಕ್ಕೆ ಆಗೋದಿಲ್ಲ ಅನ್ನುವಷ್ಟರ ಮಟ್ಟಿಗೆ ಅಡಿಕ್ಟ್ ಆಗಿರುತ್ತಾರೆ. ಅಂತವರು ಹಾಲು ಅಥವಾ ಹಾಲಿನ ಕೆನೆ ಬಳಸದಿರುವ ಪಾನೀಯಗಳನ್ನು ಸೇವಿಸಬಹುದು. ಆದರೆ ಅತಿಯಾಗಿ ಸೇವಿಸೋದಕ್ಕೆ ಹೋಗಬೇಡಿ. ನಮ್ಮ ಆರೋಗ್ಯದ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅದ್ರಲ್ಲೂ ಮನುಷ್ಯನಿಗೆ ಹೃದಯ ತುಂಬಾನೇ ಮುಖ್ಯವಾಗಿದ್ದು ಹೃದಯದ ಆರೋಗ್ಯದ ಕಡೆಗೆ ಗಮನ ಹರಿಸೋದು ತುಂಬಾನೇ ಮುಖ್ಯ.