ಹನೂರು : ತಾಲೂಕಿನ ಪ್ರವಾಸಿ ತಾಣ ಹೊಗೆನಕಲ್ ಜಲಪಾತಕ್ಕೆ 12 ಜನ ಈಜಲ ಹೋಗಿ ಮೂವರು ನೀರು ಪಾಲು ಮೂವರು ನೀರಿನಲ್ಲಿ ಕೊಚ್ಚಿಹೋಗಿ ಇಬ್ಬರ ಮೃತ ದೇಹ ಪತ್ತೆಯಾಗಿ ಒಬ್ಬ ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ.
ಕೃಷ್ಣಗಿರಿ ಜಿಲ್ಲೆಯ ಪೇಚಂಭಳ್ಳಿ ತಾಲೂಕಿನ ಕೋಣನೂರು ಹಾಗೂ ಬೆರೆ ಬೇರೆ ಗ್ರಾಮಗಳ ಗೆಳೆಯರು ಒಟ್ಟು ಗೂಡಿ ಸುಮಾರು 12 ಮಂದಿ ಎರಡು ವಾಹನದಲ್ಲಿ ಪ್ರವಾಸವನ್ನು ಕೈಗೊಂಡಿದ್ದಾರೆ.
ಶನಿವಾರ ಬೆಳಿಗ್ಗೆ ಮಹದೇಶ್ವರ ಸ್ವಾಮಿಯ ದರ್ಶನವನ್ನು ಪಡೆದು ಸ್ವಗ್ರಾಮಕ್ಕೆ ವಾಪಾಸ್ಸಾ ಆಗುವ ವೇಳೆ ಹೊಗೆನಕಲ್ ಜಲಪಾತವನ್ನು ವೀಕ್ಷಿಸಲು ತೆರಳಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ 12 ಜನರು ಕೂಡಾ ಮಾರಿಕೋಟ್ಟಾಯಿ ಎಂಬಲ್ಲಿ ಜಲಕ್ರೀಡೆಗೆ ಇಳಿದಿದ್ದಾರೆ ಇದರಲ್ಲಿ ಶಭರಿ ಹಾಗೂ ಅಜಿತ್ ಎಂಬುವವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ, ಒಬ್ಬ ನಾಪತ್ತೆಯಾಗಿದ್ದಾನೆ.
ಮೃತ ಶಬರಿ (24) ಮಾವಿನ ಹಣ್ಣಿನ ವ್ಯಾಪಾರಿ ಮಾಡಿಕೊಂಡಿದ್ದು ಇನ್ನು ಮದುವೆಯಾಗಿಲ್ಲ, ಹಾಗೂ ಚಾಲಕ ವೃತ್ತಿಯಲ್ಲಿದ್ದ ಅಜಿತ್ ಎಂಬುವವನಿಗೆ ಮದುವೆಯಾಗಿದ್ದು, ಪತ್ನಿ ಹಾಗೂ 5 ತಿಂಗಳ ಮಗುವನ್ನು ಅಗಲಿದ್ದಾನೆ.
ಸುಮಾರು 12.30 ರ ಸಮಯದಲ್ಲಿ ಮಾಹಿತಿ ತಿಳಿದು ಮಲೆ ಮಹದೇಶ್ವರ ಬೆಟ್ಟದ ಪೋಲೀಸ್ ಇನ್ಸ್ಪೆಕ್ಟರ್ ನಂಜುಂಡಸ್ವಾಮಿ ಹಾಗೂ ಎಎಸ್ ಐ ಚೆಲುವರಾಜ್, ಮತ್ತು ಪೇದೆಗಳಾದ ಚಂದ್ರು ಸ್ಥಳ ಪರಿಶೀಲಿಸಿ ಹನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ಡಾ|| ಪ್ರಕಾಶ್ ನಡೆಸಿದ ನಂತರ ಬಳಿಕ ಮೃತ ದೇಹವನ್ನು ವಾರಸ್ಸುದಾರರಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ.
ಹೊಗೇನಕಲ್ ಫಾಲ್ಸ್ ಮೂವರು ಜಲಸಮಾಧಿ : ಒಬ್ಬ ನಾಪತ್ತೆ
