ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಕೋಲಾರ ವೃತ್ತದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಿಂದ ಹೋಟೆಲ್ಗೆ ನುಗ್ಗಿದೆ.
ರಭಸವಾಗಿ ನುಗ್ಗಿದ ಪರಿಣಾಮ ಹೋಟೆಲ್ವೊಳಗೆ ಕ್ಯಾಶ್ ಕೌಂಟರ್ನಲ್ಲಿ ಕುಳಿತಿದ್ದ ಕ್ಯಾಶಿಯರ್ ಹಾಗೂ ಅಡುಗೆ ಭಟ್ಟ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಣ್ಣ (55) ಮೃ ದುರ್ದೈವಿ. ಅಡುಗೆ ಭಟ್ಟನ ಹೆಸರು ಇನ್ನೂ ಪತ್ತೆಯಾಗಿಲ್ಲ.
ಕೋಲಾರ ವೃತ್ತದಲ್ಲಿರುವ ಶ್ರೀ ದರ್ಶಿನಿ ಫಾಸ್ಟ್ ಫುಡ್ ಹೋಟೆಲ್ಗೆ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ ಲಾರಿ ಕಂಟ್ರೋಲ್ ತಪ್ಪಿ ನುಗ್ಗಿದೆ. ಮಾಡಿಕೆರೆ ಗ್ರಾಮದ ಪ್ರಕಾಶ್ ಎಂಬುವರಿಗೆ ಸೇರಿದ ಹೋಟೆಲ್ ಇದಾಗಿದೆ. ಜಲ್ಲಿ ಕಲ್ಲಿನಡಿ ಕೂಲಿಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಜೆಸಿಬಿ ಮೂಲಕ ಕೂಲಿ ಕಾರ್ಮಿಕರನ್ನು ಹೊರತೆಗೆಯಲು ಯತ್ನಿಸುತ್ತಿದ್ದಾರೆ. ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದಾರೆ. ಚಿಂತಾಮಣಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೋಟೆಲ್ಗೆ ನುಗ್ಗಿದ ಟಿಪ್ಪರ್ ಲಾರಿ; ಕ್ಯಾಶಿಯರ್, ಅಡುಗೆ ಭಟ್ಟ ದಾರುಣ ಸಾವು
