ಮೈಸೂರು:- ನಾಗರಹೊಳೆ ಹುಲಿ ಸಂರಕ್ಷಿತ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ದಿನಾಂಕ:೧೯/೦೭/೨೦೨೩ರಂದು ಹುಣಸೂರು ತಾಲ್ಲುಕು, ಹನಗೂಡು ಹೋಬಳಿಯ ನೇಗತ್ತೂರು ಗ್ರಾಮದ ಸರ್ವೇ ನಂ-೬೧ರಲ್ಲಿ ಅಕ್ರಮವಾಗಿ ಪ್ರಾಣಿ ಮಾಂಸ ಸಂಗ್ರಹಿಸಿಟ್ಟಿದ್ದಾರೆಂದು ದೂರವಾಣಿ ಕರೆಯ ಮೂಲಕ ಬಂದ ಖಚಿತ ಮಾಹಿತಿ ಮೇರೆಗೆ ತಕ್ಷಣ ಇಲಾಖೆಯವರು ಶೆಟ್ಟಿಹಳ್ಳಿ-ಲಕ್ಕ ಪಟ್ಟಣ ಗಸ್ತಿನ ಪಕ್ಕದಲ್ಲಿಯೇ ೩೦೦ ಮೀಟರ್ ಅಂತರದಲ್ಲಿನ ಜಮೀನಿಗೆ ಹಾರಂಗಿ ಕಾಲುವೆ ಏರಿಯನ್ನು ದಾಟಿ ದಕ್ಷಿಣಕ್ಕೆ ಸುಮಾರು ೧೫೦ ಮೀಟರ್ ಜೋಳದ ಹೊಲದಲ್ಲಿ ನಡೆದುಕೊಂಡು ಹೋಗಿ ಅನುಮಾಸ್ಪದ ಸ್ಥಳ ಪರಿಶೀಲಿಸಲಾಗಿ ಕತ್ತಿಗಳು- ೩ ಸಂಖ್ಯೆ, ಚಾಕು-೧ ಸಂಖ್ಯೆ ರಕ್ತದ ಕಲೆಯಾಗಿ ಬಿದ್ದಿರುತ್ತವೆ.
ಮುಂದುವರೆದು ಜೋಳದ ಹೊಲವನ್ನು ಹುಡುಕಲಾಗಿ ಜೋಳದ ಹೊಲದ ಮಧ್ಯ ಭಾಗದಲ್ಲಿ ಬಿಳಿ ಚೀಲಗಳು ಕಂಡು ಬಂದಿರುತ್ತವೆ, ಹತ್ತಿರ ಹೋಗಿ ಕೂಲಂಕುಷವಾಗಿ ಪರಿಶೀಲಿಸಿ ನೋಡಲಾಗಿ ೦೪ ಬಿಳಿ ಚೀಲಗಳಲ್ಲಿ ಕಾಡು ಪ್ರಾಣಿಯ ಮಾಂಸ ಸಂಗ್ರಹಿಸಿಟ್ಟಿರುವುದು ಕಂಡು ಬಂದಿರುತ್ತದೆ. ಮುಂದುವರೆದು ಸದರಿ ಕೃತ್ಯವೆಸಗಿರುವ ದುಷ್ಕರ್ಮಿಗಳನ್ನು ಜಮೀನಿನ ಸುತ್ತಾ-ಮುತ್ತಾ ಹುಡುಕಿ ನೋಡಲಾಗಿ ಇಲಾಖೆಯವರನ್ನು ಕಂಡು ಓಡಿ ಹೋಗಿ ನಾಪತ್ತೆಯಾಗಿರುತ್ತಾರೆ.
ಓಡಿ ಹೋಗುತ್ತಿರುವಾಗ ದುಷ್ಕರ್ಮಿಗಳ ಚಹರೆಯನ್ನು ನೋಡಿ ಗುರುತಿಸಲಾಗಿ AI.ರಾಜು ಅಲಿಯಾಸ್ ದೊರೆ ಬಿನ್ ಲೇ.ಅಮವಾಸೆಗೌಡ, ಅಂದಾಜು ವಯಸ್ಸು -27, ಸಿಂಡೇನಹಳ್ಳಿ ಗ್ರಾಮ, ಹನಗೂಡು ಹೋಬಳಿ, ಹುಣಸೂರು ತಾಲ್ಲೂಕು, A2. ಪ್ರಸನ್ನ ಅಲಿಯಾಸ್ ಪಿಯ್ಯ ಬಿನ್ ಗಣೇಶಗೌಡ, ಅಂದಾಜು ವಯಸ್ಸು -30, ಸಿಂಡೇನಹಳ್ಳಿ ಗ್ರಾಮ, ಹನಗೂಡು ಹೋಬಳಿ, ಹುಣಸೂರು ತಾಲ್ಲೂಕು, A3. ಪ್ರದೀಪ್ ಅಲಿಯಾಸ್ ಕುಂಡ ಬಿನ್ ಕಾಳೇಗೌಡ, ಅಂದಾಜು ವಯಸ್ಸು-35 ವರ್ಷ, ಸಿಂಡೇನಹಳ್ಳಿ ಗ್ರಾಮ, ಹನಗೂಡು ಹೋಬಳಿ, ಹುಣಸೂರು ತಾಲ್ಲೂಕು ಹಾಗೂ ಇತರರ ಮೇಲೆ WLOR No:02/2023-24 ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ. ದಿನಾಂಕ:20-07-2023ರಂದು ಆನೆಚೌಕೂರು ಭಾಗ-2 ಶಾಖೆ ಮತ್ತು ಕಚುವಿನಹಳ್ಳಿ ಶಾಖೆಯ ಉಪವಲಯ ಅರಣ್ಯಾಧಿಕಾರಿಗಳು, ಆನೆಚೌಕೂರು ಭಾಗ-2ರ ಶಾಖೆಯ ಗಸ್ತು ವನಪಾಲಕರು, ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಗಳು ಮತ್ತು ಎಸ್.ಟಿ.ಪಿ.ಎಫ್ ಸಿಬ್ಬಂದಿಗಳು ಘಟನೆ ನಡೆದ ಸ್ಥಳವನ್ನು ಪರಿಶೀಲಿಸಲು ಹೋದಾಗ ಸದರಿ ಹೊಲದಲ್ಲಿ ಜೋಳದ ಬೆಳೆಯನ್ನು ಬೆಳೆದಿದ್ದು ಸದರಿ ಹೊಲವನ್ನು ಸಿಬ್ಬಂದಿಗಳು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾಂಸದ ಚೀಲಗಳು ದೊರೆತ ಸ್ಥಳದಿಂದ ಅಂದಾಜು 40 ಮೀಟರ್ ದಕ್ಷಿಣ ದಿಕ್ಕಿನಲ್ಲಿ ಒಂದು ಪ್ಲಾಸ್ಟಿಕ್ ಚೀಲ ಕಂಡು ಬಂದಿರುತ್ತದೆ. ಸದರಿ ಚೀಲದಲ್ಲಿ 02 ಸಂಖ್ಯೆ ಜಿಂಕೆಯ ತಲೆಗಳು ಹಾಗೂ 08 ಸಂಖ್ಯೆ ಜಿಂಕೆಯ ಕಾಲುಗಳು ಸಿಕ್ಕಿರುತ್ತವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ:21-07-2023ರಂದು A3. ಪ್ರದೀಪ್ ಅಲಿಯಾಸ್ ಕುಂಡ ಬಿನ್ ಕಾಳೇಗೌಡ, ಅಂದಾಜು ವಯಸ್ಸು-35 ವರ್ಷ, ಸಿಂಡೇನಹಳ್ಳಿ ಗ್ರಾಮ, ಹನಗೂಡು ಹೋಬಳಿ, ಹುಣಸೂರು ತಾಲ್ಲೂಕು ಮತ್ತು ಮಧು ಬಿನ್ ಕರುಣೇಗೌಡ, ಅಮದಾಜು ವಯಸ್ಸು-24 ವರ್ಷ, ಅಟ್ಟೂರು ಗ್ರಾಮ, ಹನಗೂಡು ಹೋಬಳಿ, ಹುಣಸೂರು ತಾಲ್ಲೂಕು ಆರೋಪಿಗಳನ್ನು ಬಂಧಿಸಲಾಗಿದ್ದು, ಸದರಿ ಪ್ರಕರಣಕ್ಕೆ ಸಂಬಂದಿಸಿದಂತೆ ಉಳಿದ 04 ಜನ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ.
ಹರ್ಷಕುಮಾರ ಸಿ, ಭಾ.ಅ.ಸೇ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ನಿರ್ದೇಶಕರು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಹುಣಸೂರು ಹಾಗೂ ದಯಾನಂದ.ಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಹುಣಸುರು ವನ್ಯಜೀವಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಗಳಾದ ರತನ್ ಕುಮಾರ್ ಎಂ.ಎ. ಹುಣಸೂರು ವನ್ಯಜೀವಿ ವಲಯ ರವರ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಗಣರಾಜ್ ಪಟಗಾರ್, ವೀರನಹೊಸಹಳ್ಳಿ ವನ್ಯಜೀವಿ ವಲಯ, ಉಪವಲಯ ಅರಣ್ಯಾಧಿಕಾರಿಗಳಾದ ಸಿದ್ದರಾಜು ಹೆಚ್.ಎಸ್. ಪ್ರಸನ್ನ ಕುಮಾರ್, ವೀರಭದ್ರಯ್ಯ, ಮನೋಹರ್ ಎಂ, ರಾಮು ಹೆಚ್.ಕೆ ಹಾಗೂ ಗಸ್ತು ವನಪಾಲಕರಾದ ವಸಂತ ಕುಮಾರ ಕೆ.ಜಿ, ಲಿಂಗರಾಜು ಕೆ.ಎಂ ಮತ್ತು ಇಲಾಖಾ ಸಿಬ್ಬಂದಿಗಳು ದಾಳಿ ನಡೆಸಿರುತ್ತಾರೆ.
ಅಕ್ರಮ ಪ್ರಾಣಿ ಮಾಂಸ ಸಂಗ್ರಹ: ಇಬ್ಬರ ಬಂಧನ
