ಇತ್ತೀಚಿನ ದಿನಗಳಲ್ಲಿ ತುಂಬಾನೇ ತೇಗು ಬರುತ್ತಿದೆ, ಸಾಮಾನ್ಯವಾಗಿ ತಿನ್ನುತ್ತಿದ್ದಂತೆ ತಿನ್ನಲು ಸಾಧ್ಯವಾಗುತ್ತಿಲ್ಲ, ಅದಕ್ಕಿಂತ ಮೊದಲೇ ತೇಗು ಬರುತ್ತಿದೆ, ಹೊಟ್ಟೆ ತುಂಬಿದAತೆ ಅನಿಸುತ್ತಿದೆ ಎಂದಾದರೆ ಇದೆಲ್ಲಾ ಸಹಜವೇ ಅಥವಾ ಏನಾದರೂ ಗಂಭೀರ ಕಾಯಿಲೆಯ ಲಕ್ಷಣವಿರಬಹುದೇ? ಎಂದು ನೋಡುವುದಾದರೆ
ತೇಗು ಎಂದರೇನು ಹೊಟ್ಟೆಯಲ್ಲಿರುವ ಅಧಿಕ ಗಾಳಿ ಬಾಯಿಯ ಮೂಲಕ ಹೊರ ಬರುವ ವಿಧಾನವಾಗಿದೆ. ಯಾವಾಗ ಸಾಮಾನ್ಯವಾಗಿ ತೇಗು ಉಂಟಾಗುವುದು? * ತುಂಬಾ ಜೋರಾಗಿ ತಿಂದಾಗ * ತುಂಬಾ ವೇಗವಾಗಿ ಪಾನೀಯ ಕುಡಿದಾಗ * ತುಂಬಾ ಕಾರ್ಬೋನೇಟಡ್ ಪಾನೀಯ ಕುಡಿದಾಗ * ಧೂಮಪಾನ * ಚ್ಯುಯಿಂಗ್ ಗಮ್ ಅಗೆದಾಗ ತೇಗು ಬರುವುದು.
ಅತಿಯಾದ ತೇಗು ಜೊತೆ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಸಾಮಾನ್ಯವಾದ ತೇಗು ಅಲ್ವೇ ಅಲ್ಲ * ಇದ್ದಕ್ಕಿದ್ದಂತೆ ತೂಕ ಇಳಿಕೆ * ಹೊಟ್ಟೆ ಹಸಿವು ಇಲ್ಲದಿರುವುದು * ಕಡಿಮೆ ತಿಂದಾಗ ಹೊಟ್ಟೆ ತುಂಬಿದAತೆ ಅನಿಸುವುದು * ನುಂಗಲು ಕಷ್ಟವಾಗುವುದು * ಎದೆಯುರಿ * ತುಂಬಾ ಸುಸ್ತು ಈ ಬಗೆಯ ಲಕ್ಷಣಗಳು ಈ ಕಾಯಿಲೆ ಸೂಚನೆ ಇರಬಹುದು * ಹೊಟ್ಟೆಯ ಕ್ಯಾನ್ಸರ್ * ಅನ್ನನಾಳದ ಕ್ಯಾನ್ಸರ್ * ಮೇಧೋಜೀರಕ ಗ್ರಂಥಿಯ ಕ್ಯಾನ್ಸರ್ ಈ ಬಗೆಯ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿ.
ಪ್ರಾರಂಭದಲ್ಲಿ ಪತ್ತೆಯಾದರೆ ಗುಣಪಡಿಸಲು ಸುಲಭವಾಗುವುದು ಕ್ಯಾನ್ಸರ್ 2ನೇ ಅಥವಾ 3ನೇ ಹಂತ ತಲುಪುವ ಮುನ್ನ ಮೊದಲನೇ ಹಂತದಲ್ಲಿ ಪತ್ತೆಯಾದರೆ ಗುಣಪಡಿಸುವುದು ಸುಲಭ. ಆದರೆ ತುಂಬಾ ಜನರು ಆರಂಭದ ಲಕ್ಷಣಗಳನ್ನು ನಿರ್ಲಕ್ಷ÷್ಯ ಮಾಡುತ್ತಾರೆ. ಅತಿಯಾದ ತೇಗು ಬರುತ್ತಿದ್ದರೆ ಅದು ನಿರ್ಲಕ್ಷ÷್ಯ ಮಾಡುವಂಥ ವಿಷಯ ಅಲ್ವೇ ಅಲ್ಲ, ತಡ ಮಾಡದೆ ಈ ಪರೀಕ್ಷೆ ಮಾಡಿಸಿ: * ಅಖಿ ಸ್ಕಾ÷್ಯನ್ * ಎಂಡೋಸ್ಕೋಪಿ * ಬೇರಿಯಮ್ ಸ್ವಾಲೋ ಸ್ಟಡಿ ಅತಿಯಾದ ತೇಗು ತಡೆಗಟ್ಟುವುದು ಹೇಗೆ? ಅತಿಯಾದ ತೇಗು ತಡೆಗಟ್ಟಲು * ಆಹಾರವನ್ನು ನಿಧಾನಕ್ಕೆ ಅಗೆದು ತಿನ್ನಬೇಕು * ಚುಯ್ಯಿಂಗ್ ಗಮ್, ಕಾರ್ಬನೇಟಡ್ ಪಾನೀಯ ಬಳಸಬಾರದು * ನೀರನ್ನು ನಿಧಾನಕ್ಕೆ ಕುಡಿಯಿರಿ ಕ್ಯಾನ್ಸರ್ ಪತ್ತೆಯಾದರೆ ಈ ಚಿಕಿತ್ಸೆ ಬೇಜಾಗುವುದು * ಸರ್ಜರಿ * ಕೀಮೋಥೆರಪಿ * ರೇಡಿಯೇಷನ್
ಕೊನೆಯದಾಗಿ: ಅತಿಯಾದ ತೇಗು ಕಂಡು ಬರುತ್ತಿದ್ದರೆ ಅದರ ಜೊತೆಗೆ ದೇಹದಲ್ಲಿ, ನಿಮ್ಮ ಆಹಾರ ತಿನ್ನುವ ಅಭ್ಯಾಸದಲ್ಲಿ ಬದಲಾವಣೆಯಾದರೆ ನೀವು ತಡನಾಡದೆ ವೈದ್ಯರಿಗೆ ತೋರಿಸಿ ಆರೋಗ್ಯ ಸಮಸ್ಯೆ ಇದೆಯೇ, ಇಲ್ವೇ ಎಂದು ಖಚಿತ ಪಡಿಸುವುದು ಒಳ್ಳೆಯದು.