ನವದೆಹಲಿ: ದೇಶದಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಬ್ರಿಟಿಷರ ಕಾಲದ ಕಾನೂನುಗಳಾದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ÷್ಯ ಕಾಯಿದೆಗಳನ್ನು ಬದಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಲೋಕಸಭೆಯಲ್ಲಿ ಮಸೂದೆಗಳನ್ನು ಮಂಡಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ, 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023, ಮತ್ತು ಭಾರತೀಯ ಸಾಕ್ಷಿ ಮಸೂದೆ, 2023 ಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಕಳುಹಿಸಲಾಗುವುದು ಎಂದು ಶಾ ಹೇಳಿದರು.
ಈ ಸಂಬAಧ ಮಾತನಾಡಿದ ಅಮಿತ್ ಶಾ, “1860 ರಿಂದ 2023 ರವರೆಗೆ, ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಬ್ರಿಟಿಷರು ಮಾಡಿದ ಕಾನೂನಿನಂತೆ ಕಾರ್ಯನಿರ್ವಹಿಸಿತು. ಈ ಹಿನ್ನೆಲೆ ಈ 3 ಕಾನೂನುಗಳನ್ನು ಬದಲಾಯಿಸಲಾಗುವುದು ಮತ್ತು ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯಾಗಲಿದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
1860 ರಲ್ಲಿ ಬ್ರಿಟಿಷರು ರೂಪಿಸಿದ ಐಪಿಸಿ, 160 ವರ್ಷಗಳಿಗೂ ಹೆಚ್ಚು ಕಾಲ ದೇಶದ ಅಪರಾಧ ನ್ಯಾಯ ವ್ಯವಸ್ಥೆಯ ಮೂಲವಾಗಿದೆ. ಇದನ್ನು ಭಾರತೀಯ ನ್ಯಾಯ ಸಂಹಿತೆ, 2023 ರಿಂದ ಬದಲಾಯಿಸಲಾಗುತ್ತದೆ. 1973 ರ ಅಡಿPಅ ಅನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರಿಂದ ಬದಲಾಯಿಸಲಾಗುತ್ತದೆ. ಹಾಗೂ, 1872 ರ ಭಾರತೀಯ ಸಾಕ್ಷ÷್ಯ ಕಾಯ್ದೆಯನ್ನು ಭಾರತೀಯ ಸಾಕ್ಷಿ ಮಸೂದೆ, 2023 ರಿಂದ ಬದಲಾಯಿಸಲಾಗುತ್ತದೆ ಎಂದು ವಿವರಿಸಿದರು.
ಈ ತಿದ್ದುಪಡಿ ಮಸೂದೆ ಉದ್ದೇಶ ಶಿಕ್ಷಿಸುವುದಲ್ಲ, ಅದು ನ್ಯಾಯವನ್ನು ಒದಗಿಸುವುದು. ಅಪರಾಧ ಮಾಡುವ ಭಾವನೆ ತಡೆಯುವ ಉದ್ದೇಶದಿಂದ ಶಿಕ್ಷೆ ನೀಡಲಾಗುವುದು ಎಂದು ಅಮಿತ್ ಶಾ ಹೇಳಿದರು. ಭಾರತೀಯ ದಂಡ ಸಂಹಿತೆ (IPಅ), ಕ್ರಿಮಿನಲ್ ಪ್ರೊಸೀಜರ್ ಕೋಡ್ (ಅಡಿPಅ) ಮತ್ತು ಭಾರತೀಯ ಎವಿಡೆನ್ಸ್ ಕಾಯ್ದೆಯನ್ನು ಭಾರತೀಯ ನ್ಯಾಯ ಸಂಹಿತೆ ಬದಲಿಸುತ್ತದೆ ಎಂದು ತಿಳಿದುಬಂದಿದೆ.
ಅಲ್ಲದೆ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳನ್ನು ಪರಿಹರಿಸಲು ನವೀಕರಿಸಿದ ಕಾನೂನನ್ನು ಸ್ಥಾಪಿಸುವುದು ಈ ಮಸೂದೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದೂ ಅಮಿತ್ ಶಾ ತಿಳಿಸಿದ್ದಾರೆ.