ಮುಂಬೈ: ಗುಜರಾತ್ನ ಜಾಮ್ನಗರದಲ್ಲಿ ನಡೆದ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಅನಂತ್ ಅಂಬಾನಿ ಧರಿಸಿದ್ದ ಲಯನ್ ಬ್ರೂಚ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನಂತ್ ಅಂಬಾನಿ ಧರಿಸಿದ್ದ ಲಯನ್ ಬ್ರೂಚ್ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ದೇಶ ವಿದೇಶದ ಗಣ್ಯರು ಭಾಗಿಯಾಗಿದ್ದಾರೆ. ಸದ್ಯ ಮುಖೇಶ್ ಅಂಬಾನಿ ಕುಟುಂಬಸ್ಥರಲ್ಲಿ ಸಂತಸದ ವಾತಾವರಣ ಮೂಡಿದೆ.
ಶ್ರೀಮಂತ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯ ಮದುವೆ ಕಾರ್ಯಕ್ರಮವು ಮುಂಬೈನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ದೇಶ, ವಿದೇಶಗಳಿಂದ ದೊಡ್ಡ ದೊಡ್ಡ ಗಣ್ಯರು ಆಗಮಿಸಿದ್ದು, ಮದುವೆಯ ವೈಭವವನ್ನು ಕಣ್ತುಂಬಿಕೊಳ್ತಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮಗಳ ನಡೆಯಲಿವೆ. ಹಿಂದೂ ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ ರಾಧಿಕಾ ಮರ್ಚಂಟ್ ಹಾಗೂ ಅನಂತ್ ಅಂಬಾನಿ ಮದುವೆ ಮಾಡಿಕೊಳ್ಳಲಿದ್ದಾರೆ.
ಇನ್ನು, ಮುಖೇಶ್ ಅಂಬಾನಿ ಕುಟುಂಬಸ್ಥರ ಬಗ್ಗೆ ಒಂದಲ್ಲಾ ಒಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೆ ಇರುತ್ತದೆ, ನೀತಾ ಅಂಬಾನಿ ಧರಿಸಿದ್ದ ವಜ್ರದ ಸರದ ಬಗ್ಗೆ ಸಾಕಷ್ಟು ಜನರು ಕುತೂಹಲ ವ್ಯಕ್ತಪಡಿಸಿದ್ದರು.