ಕಂಪನಿಯ ಹೆಚ್ಚಿನ ಪ್ರೊಟೀನ್ ಮಜ್ಜಿಗೆ ಪ್ಯಾಕ್ನಲ್ಲಿ ಜೀವಂತ ಹುಳುಗಳು ಪತ್ತೆಯಾಗಿವೆ. ಗಜೇಂದರ್ ಯಾದವ್ ಎಂಬ ಗ್ರಾಹಕ ಅಮುಲ್ ವೆಬ್ಸೈಟ್ನಿಂದ ಖರೀದಿಸಿದ ಮಜ್ಜಿಗೆ ಪ್ಯಾಕ್ನಲ್ಲಿ ಜೀವಂತ ಹುಳುಗಳನ್ನು ಕಂಡುಕೊAಡರು. ಅದರ ಫೋಟೋಗಳು ಮತ್ತು ವೀಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡರು. ಇದಾದ ಬಳಿಕ ಅಮುಲ್ ಸಂಸ್ಥೆ ಅವರ ಬಳಿ ಕ್ಷಮೆ ಕೋರಿದೆ.
Amul_Coop ವೆಬ್ಸೈಟ್ನಿಂದ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿ. ಅಮುಲ್ ಸಂಸ್ಥೆ ನಮಗೆ ಅವರ ಹೆಚ್ಚಿನ ಪ್ರೊಟೀನ್ ಮಜ್ಜಿಗೆ ಜೊತೆಗೆ ಹುಳುಗಳನ್ನು ಕೂಡ ಕಳುಹಿಸಿದೆ ಎಂದು ಬರೆದಿದ್ದಾರೆ. ನಾನು ಇತ್ತೀಚೆಗೆ ಖರೀದಿಸಿದ ಮಜ್ಜಿಗೆಯಲ್ಲಿ ಹುಳುಗಳು ಕಂಡುಬAದ ನಂತರ ನನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಲು ಇದನ್ನು ಬರೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ರಟ್ಟಿನ ಮೇಲೆ ಬಿಳಿ ಹುಳುಗಳು ಹರಿದಾಡುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಬಹುತೇಕ ಅರ್ಧದಷ್ಟು ಪ್ಯಾಕೆಟ್ಗಳು ತೆರೆದಿತ್ತು. ಮಜ್ಜಿಗೆ ಈಗಾಗಲೇ ಹಾಳಾಗಿತ್ತು. ಮಜ್ಜಿಗೆಯಿಂದ ಅತ್ಯಂತ ಕೆಟ್ಟ ವಾಸನೆ ಬರುತ್ತಿತ್ತು. ಈ ಬಗ್ಗೆ ಅಮುಲ್ ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.