ಹನೂರು:- ತಾಲೂಕಿನ ಕಾಡಂಚಿನ ಗ್ರಾಮವಾದ ಪೊನ್ನಾಚಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಉಪಟಳ ಕೊಡುತ್ತಿದ್ದ ಪುಂಡಾನೆ ಸೆರೆಗೆ ಅರಣ್ಯ ಇಲಾಖೆಯ ಆರು ಆನೆಗಳು ಕಾರ್ಯಾಚರಣೆಗೆ ಬಂದಿಳಿದ್ದು. ಕಳೆದ ಮೂರು ನಾಲ್ಕು ತಿಂಗಳಿಗಳಿಂದ ಪುಂಡಾನೆ ಒಂದು ಕಾಡಂಚಿನ ಜನರಿಗೆ ವ್ಯಾಪಕ ತೊಂದರೆ ಕೊಡುತ್ತಿತ್ತು. ರೈತರ ಬೆಳೆದಿದ್ದ ಬೆಳೆಯನ್ನು ನಾಶ ಮಾಡೋದರ ಜೊತೆಗೆ ಮನೆಗಳ ಬಳಿ ಬಂದು ಗೇಟು, ಗೋಡೆ ಹಾಗೂ ಬೈಕ್ ಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಭಯಭೀತರಾಗಿದ್ದಂತಹ ಸಾರ್ವಜನಿಕರು ಆನೆ ಸೆರೆ ಹಿಡಿಯುವಂತೆ ವ್ಯಾಪಕ ಒತ್ತಾಯ ಕೇಳಿ ಬಂದಿತ್ತು. ಇದನ್ನು ಮನಗೊಂಡಂತಹ ಅರಣ್ಯ ಇಲಾಖೆಯು ಇದರ ಸೆರೆಗೆ ಶುಕ್ರವಾರ ಬೆಳಿಗ್ಗೆಯಿಂದಲಲೇ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ನಾಗರಹೊಳೆ ಅಭಯಾರಣ್ಯ ಹಾಗೂ ಕುಶಾಲ್ ನಗರ ದುಬಾರೆ ಶಿಬಿರದಿಂದ ಬಲರಾಮ, ಅರ್ಜುನ, ಅಶ್ವತ್ಥಾಮ, ಕರ್ಣ ಮುಂತಾದ ಆನೆಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದೆ. ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಿದ್ದರು. ಕಾಡಾನೆ ಸೆರೆ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.