ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024 ಅಂಗವಾಗಿಇಂದು ಅರಮನೆಯಂಗಳಕ್ಕೆ ಗಜಪಡೆ ಆಗಮಿಸಿದೆ.ಆನೆಗಳ ಆಗಮನದಿಂದ ದಸರೆಯ ವೈಭವ ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದೆ. ದಸರಾ ವೈಭವ.ಅರಮನೆಯಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ ಅದ್ಧೂರಿ ಸ್ವಾಗತ ಕೋರಲಾಯಿತು
.ಮೈಸೂರು ಜಿಲ್ಲಾಡಳಿತ, ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಇಂದು ಏರ್ಪಡಿದಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಬೆಳಗ್ಗೆ 10:10 ರಿಂದ 10:30 ರ ಶುಭಗಳಿಗೆಯಲ್ಲಿ ಅರಮನೆಗೆ ಗಜಪಡೆ ಆಗಮನವಾಯಿತು.ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅದ್ಧೂರಿ ಸ್ವಾಗತಿಸಲಾಯಿತು.ಮೈಸೂರಿನ ಅಶೋಕಪುರಂನ ಅರಣ್ಯಭವನದಲ್ಲಿ ತಂಗಿದ್ದ ಆನೆಗಳಿಗೆ ಇಲಾಖೆ ವತಿಯಿಂದ ಪುಜೆ ಸಲ್ಲಿಸಿ ಬೀಳ್ಕೊಡಲಾಯಿತು.ನಂತರ ಅರಣ್ಯಭವನದಿಂದ ಕಾಲ್ನಡಿಗೆ ಮೂಲಕ ಅರಮನೆಗೆ ಗಜಪಡೆ ತೆರಳಿತು.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಅರಣ್ಯಭವನದಲ್ಲಿ ವಿಶೇಷ ಪೂಜೆ.ನಂತರ ಕಾಲ್ನಡಿಗೆಯಲ್ಲಿ ಅರಮನೆ ಆನೆಗಳು ಆಗಮಿಸಿದವು. ಅಭಿಮನ್ಯು ಸೇರಿದಂತೆ ಏಕಲವ್ಯ, ಭೀಮ, ಕಂಜನ್, ಲಕ್ಷ್ಮೀ, ವರಲಕ್ಷ್ಮೀ, ರೋಹಿತ್, ಗೋಪಿ, ಧನಂಜಯ ಆನೆಗಳು ಅರಮನೆ ಕಡೆ ಹೆಜ್ಜೆ ಹಾಕಿವೆ.ರಾಜ ಬೀದಿಗಳಲ್ಲಿ ಸಾಗುತ್ತಿರೋ ದಸರಾ ಗಜಪಡೆ ಕಣ್ತುಂಬಿಕೊಳ್ಳಲು ಮೈಸೂರಿಗರು ಕಿಕ್ಕಿರಿದು ನಿಂತು ವೀಕ್ಷಿಸಿದರು.
.