ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಯುವಕನಿಗೇ ಯುವತಿಯೊಬ್ಬಳು ಚಾಕುವಿನಿಂದ ಇರಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಈ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ. ಜಂಟಿ ದಾಸ್ ಚಾಕು ಇರಿತಕ್ಕೆ ಒಳಗಾದ ಪ್ರಿಯಕರನಾಗಿದ್ದು, ಬರೂತಿ ಈ ಕೃತ್ಯ ಎಸಗಿದ್ದಾಳೆ.
ದಾಸ್ ಹಾಗೂ ಬರೂತಿ ಕೆಲ ಸಮಯಗಳಿಂದ ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ದಾಸ್, ಪ್ರೇಯಸಿ ಬರೂತಿಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದನು. ಪ್ರಿಯಕರನ ವರ್ತನೆ ನೋಡಿ ರೊಚ್ಚಿಗೆದ್ದ ಬರೂತಿ, ದಾಸ್ ಮನೆಯಲ್ಲಿ ಗಲಾಟೆ ಮಾಡಿ ಚಾಕುವಿನಿಂದ ಇರಿದಿದ್ದಾಳೆ.
ಘಟನೆಯಲ್ಲಿ ಪ್ರಿಯಕರ ಜಂಟಿ ದಾಸ್ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇತ್ತ ಯುವತಿ ಬರೂತಿಯನ್ನು ವಿವೇಕನಗರ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.