ಮೈಸೂರು: ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲೆ -317ಜಿ, ಪ್ರಾಂತ್ಯ 5, ಲಯನ್ ಹೇಮಂತ್ ಕುಮಾರ್ ಬನ್ಸಾಲಿ, ಶ್ರೀ ಗುರು ಪುಷ್ಕರ ಸೇವಾ ಸಮಿತಿ ಸಹಯೋಗದಲ್ಲಿ ಅ.15 ರಂದು ನಗರದ ನಟರಾಜ ಪ್ರಾರ್ಥನ ಮಂದಿರದಲ್ಲಿ ಉಚಿತ ಕೃತಕ ಕೈ ಹಾಗೂ ಕಾಲುಗಳ ವಿತರಣೆ, ಶಿಬಿರ ಆಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಲಯನ್ ಇಂಟರ್ ನ್ಯಾಷನಲ್ ಜಿಲ್ಲಾ ಗವರ್ನರ್ ಕೆ.ಎನ್.ಕೃಷ್ಣೇಗೌಡ ಮಾತನಾಡಿ, ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿಯು ನಾರಾಯಣ ಸೇವಾ ಸಂಸ್ಥಾನದ ಸಹಯೋಗದಿಂದ ಕೃತಕ ಅಂಗಗಳಾದ ಕೈ ಮತ್ತು ಕಾಲಿನ ಅಂಗಗಳ ಮಾಪನ ವಿಕಲಚೇತನರಿಗೆ ಉಚಿತ ಶಿಬಿರದಲ್ಲಿ ವಿತರಿಸಲಾಗುವುದು. ಅಂದು ಬೆ.9 ರಿಂದ ಸಂ.5 ರವರೆಗೆ ಕಾರ್ಯಕ್ರಮ ನಡೆಯಲಿದೆ. ಶಿಬಿರಕ್ಕೆ ಆಗಮಿಸುವವರು ಆಧಾರ್ ಕಾರ್ಡ್, ಅಂಗವಿಕಲರ ಪೂರ್ಣ ಭಾವಚಿತ್ರ, ಅಂಗವಿಕಲತೆಯ ಪ್ರಮಾಣ ಪತ್ರ ತರಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9845284727, 7975718133, 9342188160 ಅನ್ನು ಸಂಪರ್ಕಿಸುವಂತೆ ಕೋರಿದರು. ಗೋಷ್ಠಿಯಲ್ಲಿ ರಿಜಿನಲ್ ಚೇರ್ಮನ್ ಹೇಮಂತ್ ಕುಮಾರ್ ಬನ್ಸಾಲಿ, ಜಿಲ್ಲಾ ಚೇರ್ಮನ್ ಮಹಾವೀರ್ ಚಂದ್ ಬನ್ಸಾಲಿ, ಲಯನ್ ಕ್ಲಬ್ ದಕ್ಷಿಣದ ಅಧ್ಯಕ್ಷ ಎಸ್.ಗುರುರಾಜ್, ಸಂಯೋಜಕ ಟಿ.ಸುರೇಶ್ ಗೋಲ್ಡ್, ಲಯನ್ ಮೈಸೂರು ಅಧ್ಯಕ್ಷ ರವಿಕುಮಾರ್ ಇದ್ದರು.