ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ತನ್ನ ಬಹುನಿರೀಕ್ಷಿತ ಹೊಸ ಹಾರ್ಲೆ-ಡೇವಿಡ್ಸನ್ X440 (Harley-Davidson X440) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿತು. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಆಕರ್ಷಕ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಹೊಸ ಬಿರುಗಾಳಿಯನ್ನು ಸೃಷ್ಟಿಸಿತು.
ಭಾರತದಲ್ಲಿ ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ. ಕಂಪನಿಯು ಅಕ್ಟೋಬರ್ 15, 2023 ರಂದು ಮೋಟಾರ್ಸೈಕಲ್ನ ವಿತರಣೆಯನ್ನು ಪ್ರಾರಂಭಿಸಿತು ಮತ್ತು ಇಲ್ಲಿಯವರೆಗೆ, ಇದು ದೇಶದಲ್ಲಿ ಸುಮಾರು 1,000 ಯುನಿಟ್ಗಳನ್ನು ಮಾರಾಟ ಮಾಡಿದೆ. ಭಾರತದಾದ್ಯಂತ ಹಾರ್ಲೆ-ಡೇವಿಡ್ಸನ್ ಮತ್ತು ಮತ್ತು ಆಯ್ದ Hero MotoCorp ಔಟ್ಲೆಟ್ಗಳು ಸೇರಿದಂತೆ ಸುಮಾರು 100 ಡೀಲರ್ಶಿಪ್ಗಳಲ್ಲಿ ಪ್ರಸ್ತುತ ಹಾರ್ಲೆ-ಡೇವಿಡ್ಸನ್ X440 ಬೈಕುಗಳ ವಿತರಣೆಗಳು ನಡೆಯುತ್ತಿವೆ.
ಹಾರ್ಲೆ-ಡೇವಿಡ್ಸನ್ X440 ಬೈಕಿಗೆ 25,000 ಕ್ಕೂ ಹೆಚ್ಚು ಬುಕಿಂಗ್ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 65 ಪ್ರತಿಶತದಷ್ಟು ಟಾಪ್-ಎಂಡ್ S ವೇರಿಯಂಟ್ಗೆ ಬುಕಿಂಗ್ಗಳನ್ನು ಪಡೆದುಕೊಂಡಿದೆ. ಈ ಹಾರ್ಲೆ-ಡೇವಿಡ್ಸನ್ ಅದರ ಡೀಲರ್ಶಿಪ್ ನೆಟ್ವರ್ಕ್ ಅನ್ನು ವಿಸ್ತರಿಸಲು ಕೆಲಸ ಮಾಡುತ್ತಿದ್ದಾರೆ. ಹಾರ್ಲೆ-ಡೇವಿಡ್ಸನ್ ಕಂಪನಿಯು ತನ್ನ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ ಪರಿಚಯಾತ್ಮಕ ಬೆಲೆಗಳ ಮೇಲೆ ರೂ.10,500 ಹೆಚ್ಚಳವನ್ನು ಇತ್ತೀಚೆಗೆ ಘೋಷಿಸಿತು. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಪರಿಚಯಾತ್ಮಕ ಬೆಲೆಯು ರೂ.2,29,000 ಆಗಿದ್ದರೆ, ಇದೀಗ ಈ ಬೈಕಿನ ಬೆಲೆಯು ರೂ.2,39,500 ಆಗಿದೆ. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಪರಿಚಯಾತ್ಮಕ ಬೆಲೆಯು ಸಾಕಷ್ಟು ಸ್ಪರ್ಧಾತ್ಮಕವಾಗಿತ್ತು. ಆದರೆ ಈಗ ತುಸು ದುಬಾರಿಯಾಗಿದೆ. ಈ ಬಹುಬೇಡಿಕೆಯ ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ ಟೆಸ್ಟ್ ಡ್ರೈವ್ ಪ್ರಾರಂಭವಾಗಿದೆ.