ಮೈಸೂರು: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾಗೆ ಇನ್ನೆರೆಡು ತಿಂಗಳು ಬಾಕಿ ಇದೆ . ಅರಣ್ಯ ಇಲಾಖೆ ಸದ್ದಿಲ್ಲದೇ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆ ಆಯ್ಕೆ ಕಸರತ್ತು ಆರಂಭಿಸಿದೆ. ಇದೆಲ್ಲದರ ನಡುವೆ ಮೈಸೂರು ದಸರಾ ಮಹೋತ್ಸವಕ್ಕೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ನಡೆಸಲು ನಿರ್ಧರಿಸಲಾಗಿದೆ. ಕಳೆದ ಬಾರಿ ಗರ್ಭಿಣಿ ಆನೆಯನ್ನು ತಾಲೀಮಿಗೆ ಬಳಸಿಕೊಂಡು ಮುಜುಗರಕ್ಕೀಡಾಗಿದ್ದ ಅರಣ್ಯ ಇಲಾಖೆ ಈ ಬಾರಿ ದಸರಾ ಗಜಪಡೆ ಆಯ್ಕೆಯಲ್ಲಿ ಎಚ್ಚೆತ್ತುಕೊಂಡಿದೆ.
ಈ ಬಾರಿ ಆನೆ ಕ್ಯಾಂಪ್ನಲ್ಲಿ ಪ್ರೆಗ್ನೆನ್ಸಿ ಚೆಕ್ ಆದ ಬಳಿಕವೇ ಹೆಣ್ಣಾನೆಗಳು ಮೈಸೂರಿಗೆ ಆಗಮಿಸಲಿವೆ. ಕಳೆದ ಬಾರಿ ರಾಮಾಪುರ ಕ್ಯಾಂಪ್ನ ಲಕ್ಷಿ÷್ಮÃ ಆನೆ ಗಂಡು ಮರಿಗೆ ಜನ್ಮ ನೀಡಿದ್ದು, ಗರ್ಭಿಣಿ ಆನೆಯನ್ನು ತಾಲೀಮಿಗೆ ಬಳಸಿಕೊಂಡ ಹಿನ್ನೆಲೆ ಅರಣ್ಯ ಇಲಾಖೆ ಮುಜುಗರಕ್ಕೊಳಗಾಗಿತ್ತು. ಹೀಗಾಗಿ ಈ ಬಾರಿ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ನಡೆಸಿದ ಬಳಿಕ ದಸರಾದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾಹಿತಿ ಅರಣ್ಯ ಇಲಾಖೆ ಮೂಲಗಳಿಂದ ಲಭ್ಯವಾಗಿದೆ.
14 ಆನೆಗಳ ಕರೆ ತರಲು ನಿರ್ಧಾರ
ಪ್ರಸಕ್ತ ಸಾಲಿನ ದಸರಾ ಮಹೋತ್ಸವಕ್ಕೆ ಒಟ್ಟು 14 ಆನೆಗಳನ್ನ ಕರೆ ತರಲು ಚಿಂತನೆ ನಡೆಸಲಾಗಿದ್ದು, ಜುಲೈ ಅಂತ್ಯಕ್ಕೆ ಆನೆಗಳ ಪಟ್ಟಿ ಸಿದ್ಧವಾಗಲಿದೆ. ಈ ಬಾರಿ ದಸರಾ ಮಹೋತ್ಸವದಲ್ಲಿ ಅರ್ಜುನ, ಗೋಪಾಲಸ್ವಾಮಿ ಆನೆಗಳು ಭಾಗಿಯಾಗುವುದಿಲ್ಲ. ಇತ್ತೀಚೆಗೆ ಕಾಡಾನೆ ದಾಳಿಯಿಂದ ಗೋಪಾಲಸ್ವಾಮಿ ಮೃತಪಟ್ಟಿದ್ದು, ವಯಸ್ಸಾದ ಕಾರಣ ದಸರಾ ಮಹೋತ್ಸವದಿಂದ ಅರ್ಜುನನಿಗೆ ಕೊಕ್ ನೀಡಲಾಗಿದೆ. ಇನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆ ಸಾಗಲಿದೆ.
ಈಗಾಗಲೇ ಮತ್ತಿಗೋಡು ಶಿಬಿರಕ್ಕೆ ಭೇಟಿ ನೀಡಿ 9 ಆನೆಗಳನ್ನು ಅಧಿಕಾರಿಗಳು ಗುರುತು ಮಾಡಿದ್ದಾರೆ. ಆನೆಗಳ ಸಂಪೂರ್ಣ ಆರೋಗ್ಯ ತಪಾಸಣೆ ನಂತರ ಆಯ್ಕೆ ಪ್ರಕ್ರಿಯೆ ನಡೆಯುತ್ತೆ. ಒಟ್ಟು 2 ಹಂತದಲ್ಲಿ ಆನೆಗಳು ಮೈಸೂರಿಗೆ ಆಗಮಿಸುತ್ತವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯಾ ಮಾಹಿತಿ ನೀಡಿದ್ದಾರೆ.
ಮೈಸೂರು ದಸರಾ ಸಂಭ್ರಮ
ಪ್ರತಿ ವರ್ಷ ದಸರಾ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿAದ ಆಚರಿಸಲಾಗುತ್ತದೆ. ಸಾಂಸ್ಕöÈತಿಕ ನಗರಿ ಮೈಸೂರು ದಸರಾ ಹಬ್ಬದ ಸಮಯದಲ್ಲಿ ನವವಧುವಿನಂತೆ ಸಿಂಗಾರಗೊಳ್ಳುತ್ತದೆ. ದೇಶದ ವಿವಿಧ ಭಾಗಗಳಿಂದ ಆಗಮಿಸುವ ಜನರು ನವರಾತ್ರಿ ಹಬ್ಬದ ಸವಿಯನ್ನು ಆಸ್ವಾದಿಸುತ್ತಾರೆ.
ಈ ಬಾರಿ ನವರಾತ್ರಿ ಅಕ್ಟೋಬರ್ 15 ಕ್ಕೆ ಆರಂಭವಾಗುತ್ತದೆ. ಅಕ್ಟೋಬರ್ 24ಕ್ಕೆ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಬಹುತೇಕ ಆಗಸ್ಟ್ ಮೂರನೇ ವಾರದಲ್ಲಿ ಮೊದಲ ಹಂತದ ಗಜಪಯಣ ಆಗಲಿದೆ. ಸುಮಾರು 60 ದಿನಗಳ ಕಾಲ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಗಜಪಡೆ ಬೀಡುಬೀಳಲಿವೆ. ಈ ವೇಳೆ ದಸರಾ ಮಹೋತ್ಸವಕ್ಕಾಗಿ ತಾಲೀಮು ನಡೆಸಲಾಗುತ್ತದೆ. ವಿಜಯದಶಮಿಯಂದು ನಡೆವ ಜಂಬೂ ಸವಾರಿ ನಡೆವ ದಾರಿಯಲ್ಲೇ ಆನೆಗಳ ತಾಲೀಮು ನಡೆಯುತ್ತದೆ. ಅಂಬಾರಿಯಷ್ಟೇ ಭಾರವಿರುವ ಮೂಟೆಗಳನ್ನು ಆನೆಗಳ ಮೇಲೆ ಹೊರಿಸಿ ಮೆರವಣಿಗೆ ನಡೆಸಲಾಗುತ್ತದೆ.