ಹೊಸದಿಲ್ಲಿ: ಕೊನೆಯ ದಿನ ಸಮೀಪಿಸುತ್ತಿದ್ದರೂ ಪಾನ್ ಮತ್ತು ಆಧಾರ್ ಕಾರ್ಡ್ಗಳನ್ನು ಜೋಡಣೆ ಮಾಡಲಾಗದೆ ಪರದಾಡುತ್ತಿದ್ದ ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿ ಬಂದಿದೆ. ಈ ಎರಡೂ ಗುರುತಿನ ಕಾರ್ಡ್ಗಳನ್ನು ಜೋಡಿಸಲು ಇರುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ 2023ರ ಜೂನ್ 30ರವರೆಗೂ ವಿಸ್ತರಿಸಿದೆ.
ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ತೀವ್ರಗೊಂಡಿತ್ತು. ಜತೆಗೆ ಜೋಡಣೆಗೆ ವೇದಿಕೆಯಾಗಿರುವ ಆದಾಯ ತೆರಿಗೆ ಪೋರ್ಟಲ್ನಲ್ಲಿನ ಈ ವಿಭಾಗ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ ಬಗ್ಗೆ ಅನೇಕರು ದೂರು ನೀಡಿದ್ದರು.
ಈಗ ದಿನಾಂಕವನ್ನು ಜೂನ್ 30ರವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂಬAಧ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಅದು ತಿಳಿಸಿದೆ.
ಮೂರು ತಿಂಗಳ ಬಳಿಕವೂ ಈ ಎರಡೂ ಮಹತ್ವದ ದಾಖಲೆಗಳನ್ನು ಲಿಂಕ್ ಮಾಡುವುದರಲ್ಲಿ ತೆರಿಗೆದಾರ ವಿಫಲನಾದಲ್ಲಿ, ಅವರ ಪಾನ್ ಕಾರ್ಡ್ ನಿಷ್ಕಿçಯವಾಗಲಿದೆ. ಅಂತಹ ಪ್ರಕರಣಗಳಲ್ಲಿ ತೆರಿಗೆದಾರ ತಮ್ಮ ಪಾನ್ ಕಾರ್ಡ್ ಅನ್ನು ಒದಗಿಸಲು, ಅದನ್ನು ಉಲ್ಲೇಖಿಸಲು ಅಥವಾ ಬಳಸಲು ಸಾಧ್ಯವಾಗುವುದಿಲ್ಲ.