ಬೆಂಗಳೂರು:- ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆಹಾರ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಕರ್ನಾಟಕ ಸರ್ಕಾರ ಮಾಜಿ ಗೃಹ ಸಚಿವರಾದ ಪಿ.ಜಿ.ಆರ್ ಸಿಂಧ್ಯಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ರೈತರ ಜಾಗೃತಿ ವೇದಿಕೆ ಮತ್ತು ಇಪ್ಕೋ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ಆಯೋಜಿಸಲಾಗಿದ್ದ ನಮ್ಮ ಊರು ನಮ್ಮ ಪರಿಸರ ಎಂಬ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಾನವ ಉತ್ತಮ ಆರೋಗ್ಯವಂತ ಜೀವನ ನಡೆಸಲು ಗುಣಮಟ್ಟದ ಆಹಾರ ಅತಿ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ರೈತರು ಕೃಷಿ ಉತ್ಪನ್ನಗಳ ಕಡೆ ಗಮನಹರಿಸಬೇಕು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಯಂತ್ರೋಪಕರಣಗಳು ಸಹ ಸಹಕಾರಿಯಾಗಲಿದೆ ಹೀಗಾಗಿ ರೈತರು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಸಿಗುವ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ವಿವಿಧ ಬೆಳೆಗಳನ್ನು ಬೆಳಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಬಡತನದ ರೇಖೆಯಲ್ಲಿ ಬೆಳೆದ ನಾವು ಕೃಷಿ ಉಪಕಸುಗಳಾದ ಮೇಕೆ ಸಾಕಾಣಿಕೆ ಕುರಿ ಸಾಕಾಣಿಕೆ ಹೈನುಗಾರಿಕೆ ಮೀನುಗಾರಿಕೆ ಹಂದಿ ಸಾಕಣೆ ಎಂತಹ ಎಲ್ಲ ಉದ್ಯಮದಲ್ಲೂನು ತೊಡಗಿಸಿಕೊಂಡಿದ್ದನ್ನು ಸ್ಮರಿಸಿದರು. ಯುವ ಪೀಳಿಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು, ಶಿಸ್ತು ಎಂದರೆ ನಮ್ಮ ಪ್ರತಿದಿನದ ದೈನಂದಿಕ ಕೆಲಸಗಳಲ್ಲಿಯೂ ನಾವು ಭಾಗಿಯಾಗಿ ನಮ್ಮ ಸ್ವಂತ ಶೌಚಾಲಯವನ್ನು ನಾವೇ ಸ್ವಚ್ಛಗೊಳಿಸಲು ಆದ್ಯತೆ ನೀಡಬೇಕು. ಯುವ ಪೀಳಿಗೆಯ ವಿದ್ಯಾ ಆಸಕ್ತಿಯನ್ನು ಹೊಂದಿದ್ದಾರೆ ಎಂದರಲ್ಲದೆ ಆಳ್ವಾಸ್ ವಿದ್ಯಾಸಂಸ್ಥೆಯ ಸೌಜನ್ಯ ಎಂಬ ವಿದ್ಯಾರ್ಥಿಯು ತನ್ನ ಎಸೆಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದಿದ್ದನ್ನು ಮುಕ್ತ ಕಂಠದಿಂದ ಶ್ಲಾಘೀಸಿದರು. ಇದೆ ವೇಳೆ ಸುಮಾರು ಎರಡು ದಶಕಗಳ ಹಿಂದೆ ಪುಣೆಯಲ್ಲಿ ಶುಭಾಷ್ ಪಾಳೇಕರ್ ರವರ ಜೊತೆ ತಮ್ಮ ಸಾವಯವ ಕೃಷಿಯ ಅನುಭವಗಳನ್ನು ಹಂಚಿಕೊಂಡರು.
ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ ಮಾತನಾಡಿ, ಕೋಲಾರ ಜಿಲ್ಲೆಯು ಇಡೀ ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಟಮೋಟ ಉತ್ಪಾದನೆಯನ್ನು ಮಾಡುವ ಜಿಲ್ಲೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ವೈರಸ್ ಅವಳಿಗೆ ತತ್ತರಿಸಿ ಕಡಿಮೆ ಪ್ರಮಾಣದಲ್ಲಿ ಇಳುವರಿ ಪಡೆಯುವುದು ಕಷ್ಟಕರವಾದ ಸಂಗತಿ. ಮಣ್ಣಿನ ಆರೋಗ್ಯ ದಿನೇ ದಿನೇ ಕ್ಷಿಣಿಸಿ, ಅತಿಯಾದ ರಾಸಾಯನಿಕಗಳ ಬಳಕೆಯಿಂದ ಮಣ್ಣಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ಸಂಪೂರ್ಣವಾಗಿ ನಶಿಸಿಹೋಗುವೆ. ಇದರಿಂದ ಅಧಿಕ ಇಳುವರಿಗೆ ಹೆಚ್ಚಿನ ರಾಸಾಯನಿಕಗಳ ಮೊರೆ ಹೋಗುತ್ತಿದ್ದೇವೆ, ಇದರಿಂದ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ ಎಂದು ತಿಳಿಸಿದರು.
ಇಫ್ಫ್ಕೋ ಸಂಸ್ಥೆಯ ವ್ಯವಸ್ಥಾಪಕ ಬಿ.ಚೇತನ್ ಮಾತನಾಡಿ, ಕೇಂದ್ರ ಸರ್ಕಾರ ರಾಸಾಯನಿಕ ರಸಗೊಬ್ಬರಗಳ ಮೇಲೆ ಸುಮಾರು 3ಲಕ್ಷ ಕೋಟಿಗಳಷ್ಟು ಸಬ್ಸಿಡಿಯನ್ನು ವ್ಯಯಿಸುತ್ತಿದೆ. ಯೂರಿಯಾ ರಸಗೊಬ್ಬರಕ್ಕೆ ಪ್ರತಿ ಚೀಲದ ಮೇಲೆ ಕೇಂದ್ರ ಸರ್ಕಾರ ಸುಮಾರು 2,500ರೂ. ಸಬ್ಸಿಡಿ ನೀಡುತ್ತಿದೆ, ಆದರೆ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಕೆ ಮಾಡುವುದರಿಂದ ಮಣ್ಣಿನ ಸವಕಳಿ ಹೆಚ್ಚುತ್ತಿತ್ತು ಮಣ್ಣಿನ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದೆ ಎಂದರಲ್ಲದೆ ಇದಕ್ಕೆಲ್ಲ ಪರ್ಯಾಯವಾಗಿ ಇತ್ತೀಚೆಗೆ ಭಾರತದ ಯುವ ವಿಜ್ಞಾನಿಗಳು ಆವಿಷ್ಕರಿಸಿರುವ ನ್ಯಾನೋ ಯೂರಿಯಾದ ಮೊರೆ ಹೋಗಲು ತಿಳಿಸಿದರು. ರಾಸಾಯನಿಕ ರಸಗೊಬ್ಬರಗಳಿಗೆ ಬಳಕೆಯಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿವರವಾಗಿ ಹೇಳಿದರು.
ಇದೆ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ 150 ವಿದ್ಯಾರ್ಥಿಗಳನ್ನು ಪಾರಿತೋಷಕ ಮತ್ತು ಪ್ರಮಾಣ ಪತ್ರಕೊಟ್ಟು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರೈತರ ಜಾಗೃತಿ ವೇದಿಕೆ ಸಂಸ್ಥಾಪಕರು ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಬಿ.ರೆಡ್ಡಿ, ನಮ್ಮ ಭೂಮಿ ನಮ್ಮ ಪರಿಸರದ ಪ್ರಧಾನ ಕಾರ್ಯದರ್ಶಿ ಸುಮಿತ್ರಾ.ಕೆ.ಆರ್. ಬೆಂಗಳೂರು ಕಾಮದೇನು ಹಂಸ ಟ್ರಸ್ಟ್ ಸಂಸ್ಥಾಪಕ ಡಾ.ಜಿ.ಜಯರಾಮ್, ನೈನ್ ರಿಚ್ ಇನ್ಫಟೆಕ್ ಮ್ಯಾನೇಜಿಂಗ್ ಪಾಟ್ನರ್ ಎನ್.ಮೋಹನ್, ಗ್ರಾಮ ವಿಕಾಸ್ ಸೇವಾ ಟ್ರಸ್ಟ್ ವ್ಯವಸ್ಥಾಪಕ ಕುಮಾರ್, ಮುಖಂಡರಾದ ತಿರುಮಲಹಟ್ಟಿ ದೇವರಾಜು ಮತ್ತಿತರರು ಇದ್ದರು.