ಬೆಂಗಳೂರು: ಇಂದಿರಾ ಕ್ಯಾಂಟೀನ್ ಊಟದ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಸಚಿವ ಹೆಚ್.ಕೆ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಊಟದ ಬೆಲೆ 62 ರೂಪಾಯಿ ಎಂಬುದು ಪ್ರತಿ ದಿನದ ವೆಚ್ಚ ಹೊರತು ಒಂದು ಊಟದ್ದಲ್ಲ. ಸಾರ್ವಜನಿಕರಿಂದ ಸಂಗ್ರಹಿಸುವ 25 ರೂಪಾಯಿ ಉಪಹಾರ ಮತ್ತು ಎರಡು ಊಟದ ವೆಚ್ಚವಾಗಿರುತ್ತದೆ ಎಂದು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಎಲ್ಲ ಕಡೆಯೂ ತಿಂಡಿ 5 ರೂಪಾಯಿ, ಮಧ್ಯಾಹ್ನ ಹಾಗೂ ರಾತ್ರಿ ಊಟ 10 ರೂಪಾಯಿ ಆಗಿರುತ್ತದೆ. ದಿನಕ್ಕೆ 25 ರೂಪಾಯಿನಂತೆ ಒಟ್ಟು ವೆಚ್ಚ 62 ರೂಪಾಯಿ ಆಗುತ್ತದೆ. 25 ರೂಪಾಯಿ ಗ್ರಾಹಕರು ಕೊಡ್ತಾರೆ, ಉಳಿದ 37 ರೂಪಾಯಿ ಸರ್ಕಾರ ಕೊಡುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಸಂಬAಧ ಸಿಎಂ ಕಚೇರಿಯಿಂದಲೂ ಸ್ಪಷ್ಟನೆ ನೀಡಿದ್ದು, ಇಂದಿರಾ ಕ್ಯಾಂಟೀನ್ ಊಟದ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಂದಿರಾ ಕ್ಯಾಂಟೀನ್ ಗೆ ಆಹಾರ ಸರಬರಾಜುದಾರರಿಗೆ ಸರ್ಕಾರ ನೀಡುವ ದರ 5 ರೂ. ಹೆಚ್ಚಳವಾಗಿದೆ ಅಷ್ಟೆ. ಈ ಮೊದಲು ಆಹಾರ ಸರಬರಾಜುದಾರರಿಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ತಲಾ 57 ರೂ. ನೀಡಲಾಗುತ್ತಿತ್ತು. ಈಗ ಅದನ್ನು 62 ರೂ. ಗೆ ಹೆಚ್ಚಿಸಲಾಗಿದೆ. ಆಹಾರ ಮೆನು ಬದಲಾವಣೆಯೊಂದಿಗೆ ಈ ಹೆಚ್ಚಳ ಮಾಡಲಾಗಿದೆಯೇ ಹೊರತು ಗ್ರಾಹಕರಿಗೆ ಹಳೆದ ದರದಲ್ಲೇ ಹೊಸ ಮೆನು ಮತ್ತು ಇನ್ನಷ್ಟು ಉತ್ತಮ ಆಹಾರ ದೊರಕಲಿದೆ.