ಗಣಪತಿ ಸಚ್ಚಿದಾನಂದ ಸ್ವಾಮಿಗಳ ಅರ್ಥಪೂರ್ಣ ಜನುಮದಿನಾಚರಣೆ
ಮೈಸೂರು: ಶ್ರೀ ಶ್ರೀ ಅವಧೂತ ದತ್ತ ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮಿಗಳ 81 ನೇ ಜನುಮದಿನಾಚರಣೆ ಪ್ರಯುಕ್ತ ಗೋಪೂಜೆ ಮಾಡಿ ಬೆಲ್ಲ, ಹುಲ್ಲು, ಮೇವು ವಿತರಿಸಲಾಯಿತು ಚಾಮುಂಡಿ ಬೆಟ್ಟದ ತಪಲಿನಲ್ಲಿರುವ ಭಾರತಿ ಯೋಗಧಾಮದಲ್ಲಿ ಶ್ರೀಗಳ ಭಕ್ತ ವೃಂದ ದಿಂದ ಶೀಗಳ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು
ನಂತರ ಮಾತನಾಡಿದ ಕೇಬಲ್ ಮಹೇಶ್ ಗಣಪತಿ ಸಚ್ಚಿದಾನಂದ ಆಶ್ರಮ ಆಧ್ಯಾತ್ಮಿಕ ಧಾರ್ಮಿಕ ಕೇಂದ್ರದೊಂದಿಗೆ ಪರಿಸರ ಪೋಷಣೆ ಮನಃಶಾಂತಿ ಸಿಗುವ ತಾಣವಾಗಿದೆ ಪ್ರವಾಸೋದ್ಯಮದಲ್ಲಿ ದೇಶವಿದೇಶದಿಂದ ಭಕ್ತವೃಂದವನ್ನು ಆಕರ್ಷಿಸುತ್ತದೆ, ಯಾವುದೇ ಜಾತಿಭೇದವಿಲ್ಲದೆ ಜನಮುಖಿ ಕೇಂದ್ರವಾಗಿದೆ, ಕಳೆದ ಕೋವಿಡ್ ಸಂಧರ್ಭದಲ್ಲಿ ಲಕ್ಷಾಂತರ ಮಂದಿಗೆ ಪ್ರತಿನಿತ್ಯ ಅನ್ನದಾನ ಮತ್ತು ವೈದ್ಯಕೀಯ ನೆರವು ನೀಡಿ ಮಾನವೀಯತೆ ಮೆರೆದಿದೆ ಗಣಪತಿ ಸಚ್ಚಿದಾನಂದ ಆಶ್ರಮ, ಈಬಾರಿ ನಾಡಹಬ್ಬ ದಸರಾವನ್ನ ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಉದ್ಘಟಿಸುವಂತೆ ಸರ್ಕಾರ ಪರಿಗಣಿಸಲಿ ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮಕ್ಕೂ ಸಹಕಾರಿಯಾಗಲಿದೆ,
ಇದೇ ಸಂದರ್ಭದಲ್ಲಿ ಇಂದು ಅಯೋಧ್ಯೆಯಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆಯ ಗುದ್ದಲಿ ಪೂಜೆಯನ್ನು ಶ್ರೀಗಳು ನೆರವೇರಿಸುತ್ತಿರುವುದು ಭಕ್ತವೃಂದಕ್ಕೆ ಇನ್ನೂ ಹೆಚ್ಚಿನ ಸಂತೋಷ ಉಂಟು ಮಾಡಿದೆ
ಇದೇ ಸಂದರ್ಭದಲ್ಲಿ ಭಕ್ತಾದಿಗಳಾದ ಕೇಬಲ್ ಮಹೇಶ್ ,ಅಪೂರ್ವ ಸುರೇಶ್, ವಿಕ್ರಮ ಅಯ್ಯಂಗಾರ್, ದುರ್ಗಾ ಪ್ರಸಾದ್, ಆನಂದ್, ಚೇತನ್, ಮಹದೇವ್ ಸ್ವಾಮಿ, ಸಂತೋಷ್, ಹಾಗೂ ಇನ್ನಿತರ ಭಕ್ತಾದಿಗಳು ಹಾಜರಿದ್ದರು